ಅಕ್ರಮ‌ ಗಾಂಜಾ ಮಾರಾಟ ಮೂರು‌ ಜನರ ಬಂಧನ

ಕ್ರೈಂ

 

ಅಕ್ರಮ‌ ಗಾಂಜಾ   ಮಾರಾಟ ಮೂರು‌ ಜನರ ಬಂಧನ

 

 

 

ಚಳ್ಳಕೆರೆ ತಾಲೂಕಿನ ಪಾವಗಡ ರಸ್ತೆಯ ಎಸ್ ಆರ್ ಡಾಬಾದ ಬಳಿ ಅಕ್ರಮವಾಗಿ ಬೈಕ್ ನಲ್ಲಿ ಗಾಂಜಾ ವನ್ನು ಮಾರಾಟ ಮಾಡುತ್ತಿದ್ದ ಮೂವರನ್ನು ಚಳ್ಳಕೆರೆ ಪೋಲಿಸರು ಬಂಧಿಸಿದ್ದಾರೆ.

ಬೈಕ್ ನ‌ ಮೇಲೆ ಚೀಲದಲ್ಲಿಟ್ಟುಕೊಂಡು ಮಾರಾಟ ಮಾಡಿ‌ ಹಣ ಪಡೆದುಕೊಳ್ಳುತ್ತಿರುವುದರ ಖಚಿತ ಮಾಹಿತಿ‌ ಮೇರೆಗೆ ವೃತ್ತ ನಿರೀಕ್ಷಕ ಉಮೇಶ್ ನೇತೃತ್ವದಲ್ಲಿ ದಾಳಿ ನಡೆಸಿ ಮೂವರನ್ನು ಬಂಧಿಸಿದ್ದು, ಅವರನ್ನು ವಿಚಾರಣೆ ಮಾಡಿದ್ದು, ಚಳ್ಳಕೆರೆಯ ಹರವಿಗೊಂಡನಹಳ್ಳಿಯ ಸುಲೇಮಾನ್, ಮಾರುತಿ, ಸಿಖಂದರ್ ಎಂದು‌ ತಿಳಿದು‌ ಬಂದಿದ್ದು, ಆರೋಪಿಗಳಿಂದ 1 ಕೆಜಿ‌ 410 ಗ್ರಾಂ ತೂಕದ ಗಾಂಜಾ ವಶಪಡಿಸಿಕೊಂಡಿದ್ದು ಅವರನ್ನು‌ ನ್ಯಾಯಾಂಗ ಬಂಧನಕ್ಕೆ ಕಳುಹಿಸಿಕೊಡಲಾಗಿದೆ. ಈ ಕಾರ್ಯವನ್ನು ಎಸ್ಪಿ ಪರುಶುರಾಂ ಶ್ಲಾಘಿಸಿದ್ದಾರೆ.

Leave a Reply

Your email address will not be published. Required fields are marked *