ಬ್ಯಾಂಕ್ ಗಳು ಜನ ಸ್ನೇಹಿಯಾಗಿ‌ ಕೆಲಸ ಮಾಡಬೇಕು

ಜಿಲ್ಲಾ ಸುದ್ದಿ

 

ಚಳ್ಳಕೆರೆ:ಗ್ರಾಹಕರ ಮತ್ತು ಸಾರ್ವಜನಿಕರ ಹಿತವನ್ನು ಬ್ಯಾಂಕುಗಳು ಅರ್ಥ ಮಾಡಿಕೊಂಡು ಜನಸ್ನೇಹಿಯಾಗಿ ಕೆಲಸ ಮಾಡಿದಾಗ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಬುಡಕಟ್ಟು ಸಂಸ್ಕೃತಿಯಂತಹ ಗ್ರಾಮಗಳು ಅಭಿವೃದ್ದಿಯಾಗುತ್ತವೆ ಈ ಭಾಗದ ರೈತರು ಆರ್ಥಿಕವಾಗಿ ಸಬಲರಾಗುವಂತೆ ತಮ್ಮ ಬ್ಯಾಂಕುಗಳಲ್ಲಿ ಕೈಗೆಟುಕುವುದರದಲ್ಲಿ ಆರ್ಥಿಕ ಸಹಾಯ ಮಾಡುವಂತೆ ಚಳ್ಳಕೆರೆ ಕ್ಷೇತ್ರದ ಶಾಸಕ ಟಿ. ರಘುಮೂರ್ತಿ ಹೇಳಿದರು. ಅವರು ಇಂದು ನನ್ನಿವಾಳ ಗ್ರಾಮದಲ್ಲಿ ರೈತ ರಾತ್ರಿ ಶಿಬಿರದ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದರು.

 

 

 

ಮುಖ್ಯ ಅತಿಥಿಗಳಾಗಿ ಮಾತನಾಡಿದ ತಹಶೀಲ್ದಾರ್ ಎನ್ ರಘುಮೂರ್ತಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸ್ವಾಮ್ಯದ ಇಲಾಖೆಗಳು ಸರ್ಕಾರದಿಂದ ಕೊಡುವ ಸವಲತ್ತುಗಳನ್ನು ಇಂತಹ ಶಿಬಿರಗಳ ಮುಖಾಂತರ ಸಾರ್ವಜನಿಕರ ಮನೆ ಬಾಗಿಲಿಗೆ ಒದಗಿಸಿದಾಗ ಸರ್ಕಾರದ ಆಸೆಗಳು ಈಡೇರುತ್ತವೆ. ಈ ಕ್ಷೇತ್ರದ ಶಾಸಕರ ಆಶಯದಂತೆ ರಾಜ್ಯ ಸರ್ಕಾರದ ಅಧೀನದಲ್ಲಿ ಬರುವಂತಹ ತಾಲೂಕ ಆಡಳಿತವು ಈಗಾಗಲೇ 42 ಗ್ರಾಮಗಳನ್ನು ಸಮಸ್ಯೆ ಮುಕ್ತ ಗ್ರಾಮಗಳನ್ನಾಗಿ ಮಾಡಿ ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರು ಅಲೆದಾಡುವುದನ್ನು ತಗ್ಗಿಸಲಾಗಿದೆ ಹಾಗೆಯೇ ಬ್ಯಾಂಕುಗಳು ಮತ್ತು ಸರ್ಕಾರಿ ಕಚೇರಿಗಳು ಮತ್ತು ಇಲ್ಲಿ ನಿರ್ವಹಿಸುವ ಅಧಿಕಾರ ಸಿಬ್ಬಂದಿಗಳು ನಮ್ಮ ಅಧಿಕಾರಿ ಸಿಬ್ಬಂದಿಗಳು ಎಂಬ ಮನೋಭಾವ ಸಾರ್ವಜನಿಕರಲ್ಲಿ ಮೂಡಿದಾಗ ಮಾತ್ರ ಸಾರ್ಥಕತೆ ಕಂಡುಬರುತ್ತದೆ ಈ ದೆಸೆಯಲ್ಲಿ ಇಂದಿನ ಈ ಕಾರ್ಯಕ್ರಮದ ಆಯೋಜನೆ ಮಾಡಿರುವಂತಹ ಎಸ್ ಬಿ ಐ ಸಿಬ್ಬಂದಿಗಳು ಅಧಿಕಾರಿಗಳಿಗೆ ತಾಲೂಕು ಆಡಳಿತದ ವತಿಯಿಂದ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು ಎಸ್ ಬಿ ಐ ಎಜಿಎಂ ಪ್ರಸ್ತಾವಿಕವಾಗಿ ಮಾತನಾಡಿ ಸಾರ್ವಜನಿಕರಿಗೆ ಕೊಡ ಮಾಡುವಂತಹ ಸೌಲಭ್ಯಗಳು ಸಾಲಗಳ ಮಹತ್ವ, ಮರುಪಾವತಿ ಇವುಗಳ ವಿಧಾನಗಳ ಬಗ್ಗೆ ವಿಸ್ತೃತವಾಗಿ ಪ್ರಸ್ತಾವಿಕವಾಗಿ ಮಾತನಾಡಿದರು ಎಸ್ ಬಿ ಐ ಮುಖ್ಯ ವ್ಯವಸ್ಥಾಪಕರಾದ ಸುರೇಶ್ ಸರ್ಕಾರಿ ಅಭಿಯೋಜಕರಾದ ಅಶ್ವಥ್ ನಾಯಕ್ ಮುಂತಾದವರು ಮಾತನಾಡಿದರು ಸಮಾರಂಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಬಸವರಾಜ್ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್ ಡಿವೈಎಸ್ಪಿ ರಮೇಶ್ ಸಬ್ ಇನ್ಸ್ಪೆಕ್ಟರ್ ಸತೀಶ್ ನಾಯಕ್ ಮುಖಂಡರಾದ ದೊರೆಭಯಣ್ಣ ನನ್ನಿವಾಳ ಗ್ರಾಮ ಪಂಚಾಯತಿಯ ಎಲ್ಲ ಸದಸ್ಯರುಗಳು ಉಪಸ್ಥಿತರಿದ್ದರು.

ಸುದ್ದಿ ಜಾಹೀರಾತಿಗೆ ಸಂಪರ್ಕಿಸಿ: 8660924503

Leave a Reply

Your email address will not be published. Required fields are marked *