ರಾಜ್ಯದಲ್ಲೇ ಮೊದಲ‌ ಬಾರಿಗೆ ಆಟೋ ಲೋಗೆಸ್ ಕಾರ್ಟಿಲೆಜ್ ಕಸಿ‌ ಶಸ್ತ್ರ ಚಿಕಿತ್ಸೆ ಯಶಸ್ವಿ

ಆರೋಗ್ಯ

*ಜಯನಗರದ ಯುನೈಟೆಡ್‌ ಆಸ್ಪತ್ರೆಯಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಆಟೋಲೋಗಸ್ ಕಾರ್ಟಿಲೆಜ್ ಕಸಿ ಶಸ್ತ್ರಚಿಕಿತ್ಸೆ*
– ಅತ್ಯಾಧುನಿಕ ವಿಧಾನದ ಶಸ್ತ್ರಚಿಕಿತ್ಸೆಯ ಮೂಲಕ ಕ್ಷೀಪ್ರವಾಗಿ ಚೇತರಿಸಿಕೊಂಡ ಕ್ರೀಡಾಪಟು

ಫುಟ್‌ಬಾಲ್‌ ಆಟದಲ್ಲಿ ಪಾದದ ಕಾರ್ಟಿಲೇಜ್‌ ಗೆ ಹಾನಿಮಾಡಿಕೊಂಡಿದ್ದ ಕ್ರೀಡಾಪುಟುವಿಗೆ ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಅತ್ಯಾಧುನಿಕ ಆಟೋಲೋಗಸ್‌ ಕಾರ್ಟಿಲೇಜ್‌ ಕಸಿ ಶಸ್ತ್ರಚಿಕಿತ್ಸೆಯನ್ನ ಜಯನಗರದ ಯುನೈಟೆಡ್‌ ಆಸ್ಪತ್ರೆಯ ವೈದ್ಯರು ನೆರವೇರಿಸಿದ್ದಾರೆ.

ರಾಜ್ಯದಲ್ಲೆ ಪ್ರಪ್ರಥಮ ಬಾರಿಗೆ ನಡೆಸಿದ ಈ ಅತ್ಯಾಧುನಿಕ ತಂತ್ರಜ್ಞಾನದ ಶಸ್ತ್ರಚಿಕಿತ್ಸೆಯ ಬಗ್ಗೆ ಆಸ್ಪತ್ರೆಯ ವೈದ್ಯರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

 

 

 

ಇತ್ತೀಚಿಗೆ ಅಜಯ್ ಎಂಬ ಯುವ ಫುಟ್‌ಬಾಲ್ ಆಟಗಾರ ಫುಟ್‌ಬಾಲ್ ಪಂದ್ಯವೊಂದರಲ್ಲಿ ತನ್ನ ಪಾದಕ್ಕೆ ಗಾಯ ಮಾಡಿಕೊಂಡಿದ್ದರು. ಕೀಲುಗಳ ಕಾರ್ಟಿಲೆಜ್ ಸಮಸ್ಯೆಯನ್ನು ಸಾಮಾನ್ಯವಾಗಿ ಯಾವುದೇ ಶಸ್ತ್ರಚಿಕಿತ್ಸೆಗಳಿಲ್ಲದೆ ನಿವಾರಿಸಲಾಗುತ್ತದೆ. ದೀರ್ಘಕಾಲದ ವಿಶ್ರಾಂತಿ ತೆಗೆದುಕೊಳ್ಳುವುದು ಸಾಮಾನ್ಯವಾಗಿ ಭಾರತದಲ್ಲಿ ರೂಢಿಯಲ್ಲಿದೆ. ಆದರೆ ಇದು ಕ್ರೀಡಾಪಟುಗಳು ತಮ್ಮ ಚಟುವಟಿಕೆಗಳಲ್ಲಿ ಮುಂದುವರಿಯುವುದನ್ನು ತಡೆಯುತ್ತದೆ ಹಾಗೂ ನಿಧಾನವಾಗಿ ಚೇತರಿಸಿಕೊಳ್ಳುವ ಮೂಲಕ ತಮ್ಮ ಕ್ರೀಡಾ ಸಾಮರ್ಥ್ಯವನ್ನು ಮರಳಿ ಪಡೆದುಕೊಳ್ಳಲು ಬಹಳಷ್ಟು ಸಮಯಾವಕಾಶ ಬೇಡುತ್ತದೆ.

ನೂತನ ವಿಧಾನದ ಶಸ್ತ್ರಚಿಕಿತ್ಸೆಯ ಬಗ್ಗೆ ವಿವರಿಸಿದ ಯುನೈಟೆಡ್‌ ಆಸ್ಪತ್ರೆಯ ಕನ್ಸಲ್ಟೆಂಟ್‌ ಆರ್ಥೋಪಿಡಿಶಿಯನ್‌ ಡಾ ಪ್ರದ್ಯುಮ್ನ ಆರ್‌ ಅವರು “ಅಥ್ಲೆಟಿಕ್ ನಲ್ಲಿ ಪಾಲ್ಗೊಳ್ಳುವ ಮಂದಿಗೆ ಕೀಲಿನ ಕಾರ್ಟಿಲೆಜ್ ಗಾಯಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ವೃತ್ತಿಪರ ಕ್ರೀಡಾಪಟುಗಳು ಮತ್ತು ಕ್ರೀಡಾ ಹವ್ಯಾಸಿಗಳು ಕಾರ್ಟಿಲೆಜ್ ಹಾನಿಗೆ ಗುರಿಯಾಗುತ್ತಾರೆ. ಇದು ಟ್ವಿಸ್ಟ್ ಮಾಡುವಾಗ, ಜಂಪ್ ಮಾಡುವಾಗ ಜಿಗಿಯುವಾಗ ಮೊಳಕಾಲನ್ನು ತೀವ್ರವಾಗಿ ಬಾಗಿಸಿದಾಗ ಅಥವಾ ಹಠಾತ್ ಆಘಾತಕಾರಿ ಗಾಯದಿಂದಾಗಿ ಈ ಸಮಸ್ಯೆ ಕಾಣಿಸಿಕೊಳ್ಳಬಹುದು. ಇದನ್ನು ಗುಣಪಡಿಸುವ ಸೀಮಿತ ಚಿಕಿತ್ಸೆಗಳಿಂದಾಗಿ, ನೋವು ಹೆಚ್ಚಾಗಿರುತ್ತದೆ. ಹೆಚ್ಚಿನ ಬಾರಿ ಇದು ಅಪೂರ್ಣ ಚಿಕಿತ್ಸೆಗೆ ಕಾರಣವಾಗುತ್ತದೆ. ಚಿಕಿತ್ಸೆ ನೀಡದೆ ಬಿಟ್ಟರೆ, ಕಾರ್ಟಿಲೆಜ್ ಗಾಯಗಳು ಪ್ರೊಗ್ರೆಸ್ಸಿವ್ ಕೊಂಡ್ರೊಜೆನಿಕ್ ನಷ್ಟಕ್ಕೆ ಕಾರಣವಾಗಬಹುದು ಅಥವಾ ಕಾಲಕ್ರಮೇಣ ಕಾರ್ಟಿಲೆಜ್ ಕಳೆದುಹೋಗಬಹುದು” ಎಂದು ಹೇಳಿದರು.
ಯುನೈಟೆಡ್ ಆಸ್ಪತ್ರೆಯಲ್ಲಿ ಎಲ್ಲಾ ಕ್ರೀಡೆಗಳಿಗೆ ಸಂಬಂಧಿಸಿದ ಗಾಯಗಳಿಗೆ ಚಿಕಿತ್ಸೆ ನೀಡಲು ವಿಶ್ವದ ಅತ್ಯುತ್ತಮ ತಂತ್ರಗಳನ್ನು ಬಳಸಲಾಗುತ್ತದೆ. ಆಟೋಲೋಗಸ್ ಕಾರ್ಟಿಲೆಜ್ ಟ್ರಾನ್ಸ್‌ಪ್ಲಾಂಟ್ ಅನ್ನು ಒಂದೇ ಸೆಟ್ಟಿಂಗ್‌ನಲ್ಲಿ ಮಾಡಲಾಗುತ್ತದೆ, ಕೀಹೋಲ್ ಶಸ್ತ್ರಚಿಕಿತ್ಸೆ, ಸಾಂಪ್ರದಾಯಿಕ ಆರು ವಾರಗಳ ಅಂತರದಲ್ಲಿ ನಡೆಯುವ ಎರಡು ACI ಗಿಂತ ಕಡಿಮೆ ವೆಚ್ಚದಾಯಕವಾಗಿದೆ ಮತ್ತು ರೋಗಿಗೆ ಅನುಕೂಲಕರವಾಗಿದೆ” ಎಂದು ಡಾ ಮುರುಡಾ ವಿವರಿಸಿದರು.
ಹಲವಾರು ವೈದ್ಯರನ್ನು ಭೇಟಿ ಮಾಡಿದ ಬಳಿಕ ಯುನೈಟೆಡ್ ಆಸ್ಪತ್ರೆಯ ಕನ್ಸಲ್ಟೆಂಟ್ ಆರ್ಥೋಪೆಡಿಶಿಯನ್ ಡಾ.ಪ್ರದ್ಯುಮ್ನ ಅವರನ್ನು ಭೇಟಿಯಾದೆ. ನನ್ನ ಪಾದದ ಕಾರ್ಟಿಲೇಜ್ ಹಾನಿಗೊಳಗಾಗಿದ್ದನ್ನ ಕಂಡು ವೈದ್ಯರಾದ ಪ್ರದ್ಯುಮ್ನ ಅವರು ಆರ್ಥೋಸ್ಕೊಪಿ ಮೂಲಕ ಆಟೋಲೋಗಸ್ ಕಾರ್ಟಿಲೆಜ್ ಕಸಿ ಮಾಡಲು ನಿರ್ಧರಿಸಿದರು. ಕಡಿಮೆ ಇನ್ ವೇಸಿವ್ ಸರ್ಜರಿ (ಕೀಹೋಲ್) ಮೂಲಕ ಹಾನಿಗೊಳಗಾದ ಕಾರ್ಟಿಲೆಜ್ ಗೆ ಚಿಕಿತ್ಸೆ ನೀಡಲು ನಿರ್ಧರಿಸಿದರು. ಇದರಿಂದ ಒಂದೇ ಶಸ್ತ್ರಚಿಕಿತ್ಸೆಯ ಮೂಲಕ ನನ್ನ ಗಾಯಕ್ಕೆ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಲು ಸಾಧ್ಯವಾಯಿತು ಎಂದು ಶಸ್ತ್ರಚಿಕಿತ್ಸೆಗೆ ಒಳಪಟ್ಟ ಕ್ರೀಡಾಪಟು ಅಜಯ್‌ ಹೇಳಿದರು.

Leave a Reply

Your email address will not be published. Required fields are marked *