ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸಿದ ಶಾಸಕ ತಿಪ್ಪಾರೆಡ್ಡಿ

ಜಿಲ್ಲಾ ಸುದ್ದಿ

 ಗ್ರಾಮೀಣ ಭಾಗದ ಬಸ್ ಸೌಲಭ್ಯದಿಂದ  ಜನರಿಗೆ ಮತ್ತು  ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲದ ಜೊತೆಗೆ ಸುರಕ್ಷತೆಯ ಪ್ರಯಾಣ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು. 
ತಾಲೂಕಿನ  ಉಪ್ಪನಾಯಕನಹಳ್ಳಿ ಗ್ರಾಮದಲ್ಲಿ ನೂತನ ಕೆಎಸ್ಆರ್ಟಿಸಿ ಬಸ್ ಮಾರ್ಗಕ್ಕೆ ಹಸಿರು ನಿಶಾನೆ ಬೀಸುವ ಮೂಲಕ‌ ಚಾಲನೆ ನೀಡಿ ಮಾತನಾಡಿದರು.
ಈ ಭಾಗದ  ನೂತನ ಬಸ್ ಮಾರ್ಗವು  ಉಪ್ಪನಾಯಕನಹಳ್ಳಿ, ಸೊಂಡೇಕೊಳ, ಹಲಗಪ್ಪನಹಟ್ಟಿ, ಓಬನಹಳ್ಳಿ, ಗೊಡಬನಾಳ್, ನಂದಿಪುರ ಮಾರ್ಗದಲ್ಲಿ ಬಸ್ ಕ್ರಮಿಸಲಿದೆ. ಈ  ಗ್ರಾಮಗಳ  ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದು ಮತ್ತು ಖಾಸಗಿ ಬಸ್ ಗಳು ಸರಿಯಾದ ಸಮಯಕ್ಕೆ ಬರದೇ ತೊಂದರೆ ಆಗುತ್ತದೆ ಎಂದು ಸಾರ್ವಜನಿಕರು ನನ್ನ ಗಮನಕ್ಕೆ ತಂದ ತಕ್ಷಣ ಕೆಎಸ್ಆರ್ಟಿಸಿ ಅವರಿಗೆ ಹೇಳಿ ನಿತ್ಯ ಜನರ ಅಗತ್ಯ ಅನುಗುಣವಾಗಿ ಬಸ್ ಓಡಿಸಲು ತಿಳಿಸಿದ್ದೇನೆ. ವಿಶೇಷವಾಗಿ  ವಿದ್ಯಾರ್ಥಿಗಳಿಗೆ  ಬೆಳಗ್ಗೆ ಶಾಲಾ ಕಾಲೇಜುಗಳಿಗೆ ಸಮಯಕ್ಕೆ ಸರಿಯಾಗಿ ತೆರಳಲು ಅನುಕೂಲವಾಗಲಿದೆ.  ಹಾಗೂ  ಜನರು ವಿವಿಧ ಕೆಲಸ ಕಾರ್ಯಗಳಿಗೆ ಓಡಾಡಲು  ಸಮಸ್ಯೆ ಎದುರಿಸುತ್ತಿದ್ದು ಬಸ್ ವ್ಯವಸ್ಥೆಯಿಂದ ತಮ್ಮ ಕೆಲಸ ಕಾರ್ಯಗಳಿಗೆ, ಕೃಷಿ ಚಟುವಟಿಕೆಗಳಿಗೆ  ಸಹಕಾರಿಯಾಗಲಿದೆ  ಎಂದರು.
ಬಸ್ ಸೌಲಭ್ಯವನ್ನು ಎಲ್ಲೂ ವ್ಯತ್ಯಾಸವಾಗದಂತೆ ಓಡಿಸಬೇಕು ಎಂದು ಕೆಎಸ್ಆರ್ಟಿಸಿ ವ್ಯವಸ್ಥಾಪಕರಿಗೆ ತಿಳಿಸಿದ್ದೇನೆ. ಎಲ್ಲಾರೂ ಈ ಸೌಲಭ್ಯ ಸದುಪಯೋಗ ಮಾಡಿಕೊಳ್ಳಿ ಎಂದು ತಿಳಿಸಿದರು.
ಗ್ರಾಮ ಪಂಚಾಯತಿ ಅಧ್ಯಕ್ಷೆ ಭಾರತಿ, ಗ್ರಾಮ ಪಂಚಾಯತಿ ಸದಸ್ಯರಾದ ಉಮೇಶ್, ಜಯ್ಯಪ್ಪ,‌ ಶಿವಣ್ಣ, ವಿಶಾಲಾಕ್ಷಮ್ಮ, ಪ್ರಾಣೇಶ್,ರಮೇಶ್,ರಾಮಲಿಂಗಪ್ಪ,  ಈಶಣ್ಣ, ವೀರಕಸಿಯಪ್ಪ ಮತ್ತು  ಸಾರ್ವಜನಿಕರು, ವಿದ್ಯಾರ್ಥಿಗಳು ಇದ್ದರು.

 

 

 

Leave a Reply

Your email address will not be published. Required fields are marked *