ಹುಟ್ಟಿನಿಂದಲೇ ತನ್ನ ಎರಡು ಕಾಲುಗಳ ಸಹಾಯದಿಂದ ಕಾಲುಗಳನ್ನೆ ಕೈಗಳನ್ನಾಗಿ ಬಳಸಿಕೊಂಡು ದುಂಡಗೆ ಬರೆಯುವ ವಿಜಯ ನಗರದ ಕೂಡ್ಲಿಗಿ ತಾಲೂಕಿನ ಗುಂಡುಮುಣುಗು ಗ್ರಾಮದ ಲಕ್ಷ್ಮಿ ದೇವಿಯ ಜೀವನೋತ್ಸಾಹ ಕಂಡು ರಾಹುಲ್ ಗಾಂಧಿ ಫುಲ್ ಫಿದಾ ಆಗಿದ್ದಷ್ಟೆ ಅಲ್ಲದೆ ತಮ್ಮ ಮೊಬೈಲ್ ನಲ್ಲಿ ಅದನ್ನು ಸೆರೆ ಹಿಡಿದುಕೊಂಡಿದ್ದು ವಿಶೇಷವಾಗಿತ್ತು.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಸಾಣೀಕೆರೆ ಗೆ ಪಾದಯಾತ್ರೆಯೂ ತಲುಪಿದಾಗ ರಾಹುಲ್ ಗಾಂಧಿ ಅವರು ಚೇತನ್ ಹೋಟೇಲ್ ಬಳಿ ವಿಶ್ರಾಂತಿಯ ಸಮಯದಲ್ಲಿ ವಿವಿಧ ಮಹಿಳಾ ಸಂಘಟನೆಗಳ ಮಹಿಳೆಯರೊಂದಿಗೆ ಸಂವಾದ ನಡೆಸಿದರು. ಈ ಸಂವಾದ ಕಾರ್ಯಕ್ರಮದಲ್ಲಿ ಗುಂಡು ಮುಣುಗು ಲಕ್ಷ್ಮಿ ದೇವಿ ಇದ್ದರು, ಇದೇ ಸಮಯದಲ್ಲಿ ಲಕ್ಷ್ಮಿದೇವಿಯೂ ಕಾಲುಗಳಿಂದಲೇ ಬರವಣಿಗೆ ಮಾಡುವುದನ್ನು ಕಂಡು ರಾಹುಲ್ ಗಾಂಧಿ ಅವರು ಸಂಪೂರ್ಣವಾಗಿ ಮನಸೋತರು ಇದೇ ಅಲ್ಲದೆ ಅದನ್ನು ಅವರು ಮೊಬೈಲ್ ನಲ್ಲಿ ಸೆರೆ ಹಿಡಿದುಕೊಂಡರು, ಇದೇ ಸಮಯದಲ್ಲಿ ಮಾತನಾಡಿ, ವಿಕಲಾಂಗತೆಯನ್ನು ಮೆಟ್ಟಿ ನಿಂತು ಮನುಷ್ಯನ ಸಾಧನೆಗಳನ್ನು ಮಾಡುವುದೇ ಸಾಧನೆಯಾಗಿದೆ ಎಂದು ಹೇಳಿದರು. ಈ ಸಮಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಸಚಿವ ಹೆಚ್. ಆಂಜನೇಯ ಮತ್ತು ಶಾಸಕ ಟಿ. ರಘುಮೂರ್ತಿ ಇದ್ದರು





