ಚಿತ್ರದುರ್ಗ ನಗರದ ಬಿಡಿ ರಸ್ತೆಯ ವೈಶಾಲಿ ಕ್ರಾಸ್ ಬಳಿ ವೋಲ್ವೋ ಬಸ್ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು ಓರ್ವನಿಗೆ ಗಂಭೀರವಾದ ಘಟನೆ ಬೆಳ್ಳಂಬೆಳಗ್ಗೆ ನಡೆದಿದೆ.
ಬಸ್ ನಿಲ್ದಾಣದ ಕಡೆಯಿಂದ ಬೆಂಗಳೂರಿಗೆ ಹೊರಟಿದ್ದ ವೋಲ್ವೋ ಬಸ್ ವೈಶಾಲಿ ಕ್ರಾಸ್ ಬಳಿ ಬಂದಾಗ ಬೈಕ್ ಗೆ ಡಿಕ್ಕಿ ಹೊಡೆದಿದೆ. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ನೂರು ಮೀಟರ್ ದೂರಲ್ಲಿ ಬಿದ್ದು ನುಜ್ಜುಗಜ್ಜಾಗಿದೆ. ಸಂಚಾರಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.