ವರದಕ್ಷಿಣೆ ಕಿರುಕುಳದ ಆರೋಪಿ ಸೇರಿ 3 ಜನರಿಗೆ ಏಳು ವರ್ಷ ಸಜೆ

ಕ್ರೈಂ

ವರದಕ್ಷಿಣೆ ಕಿರುಕುಳ ನೀಡಿ ಮಹಿ ಳೆಯ ಸಾವಿಗೆ ಕಾರಣನಾದ ಪತಿ ಸೇರಿದಂತೆ ಮೂವರಿ ಗೆ ಏಳು ವರ್ಷ ಕಠಿಣ ಸಜೆಯನ್ನು ಚಿತ್ರದುರ್ಗ ನ್ಯಾಯಾಲ ಯವು ನೀಡಿ ಆದೇಶಿಸಿದೆ. ಆರೋಪಿಯೊಂದಿಗೆ ಮಂಜುಳಾ ಆಲಿಯಾಸ್ ಲಾವಣ್ಯ ಅವರ ಮದುವೆ 2017ರಲ್ಲಿ ನಡೆದಿ ತ್ತು. ಮದುವೆ ವೇಳೆ ಆರೋಪಿತ ವರ ನಿಗೆ ಸುಮಾ ರು 25000 ನಗ ದು ಹಾಗೂ 15 ಗ್ರಾಂ ತೂಕದ ಚಿನ್ನದ ಸರವನ್ನು ಕೂಡ ವರದಕ್ಷಿ ಣೆಯಾಗಿ ನೀಡಲಾಗಿತ್ತು. ಆದರೆ ವರದಕ್ಷಿಣೆ ದಾಹಕ್ಕೆ ಒಳಗಾಗಿದ್ದ ಈತ ಪದೇ ಪದೇ ತನ್ನ ಹೆಂಡತಿ ಯನ್ನು ವರದಕ್ಷಿಣೆ ಹಣ ತರುವಂ ತೆ ಪಿಡಿಸುತ್ತಾ, ದೈಹಿಕ ಮತ್ತು ಮಾ ನಸಿಕವಾಗಿ ಹಲ್ಲೆಯನ್ನು ಕೂಡ ಮಾಡುತ್ತಿದ್ದನು , ಇದರಿಂದ ಜಿಗು ಪ್ಸೆಗೊಂಡಿದ್ದ ಲಾವಣ್ಯ ಮನೆ ಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಯನ್ನು ಮಾಡಿಕೊಂಡಿ ದ್ದರು ಈ ಒಂದು ಪ್ರಕರಣವು ಹೊಳಲ್ಕೆರೆ ಠಾಣೆಯಲ್ಲಿ ದಾಖ ಲಾ ಗಿತ್ತು. ಪ್ರಕರಣದ ತನಿಖೆಯನ್ನು ಅಂದಿನ ಡಿವೈಎಸ್ಪಿ ಆಗಿದ್ದ ಸಂ ತೋಷ್ ಎಮ್ ವಿಜಯ್ ಕುಮಾ ರ್ ಅವರು ನಡೆಸಿದ್ದರು, ಚಾರ್ಜ್ ಶೀಟ್ ಅನ್ನು 1 ಅಪರ ನ್ಯಾಯಾಲ ಯಕ್ಕೆ ಸಲ್ಕಿಸಿದ್ದರು. ನ್ಯಾಯಾಲ ಯವು ವಾದ ವಿವಾದಗಳನ್ನು ಆಲಿಸಿ ಆರೋಪಿತನ ಆರೋಪವು ಸಾಬೀತಾಗಿದ್ದು, ಆರೋಪಿ 1 ರಿಂದ 3 ರವೆರೆಗೆ ಏಳು ವರ್ಷ ಸಜೆಯನ್ನು ನೀಡಿ ತೀರ್ಪಿತ್ತಿದೆ. ಉಳಿದ 4 ಮತ್ತು 5 ನೇ ಆರೋಪಿ ಗಳನ್ನು ಬಿಡುಗಡೆ ಮಾಡಿದೆ.

 

 

 

Leave a Reply

Your email address will not be published. Required fields are marked *