ಮುರುಘಾ ಮಠಕ್ಕೆ ಆಡಳಿತಾಧಿಕಾರಿ‌ ನೇಮಕ ಸರಿಯಾದ ಕ್ರಮವಲ್ಲ

ಜಿಲ್ಲಾ ಸುದ್ದಿ

ಕೆಲವೇ ಕೆಲವರು ಮುರುಘಾಮಠದ ಆಡಳಿತ ವನ್ನು ಹಿಡಿತಕ್ಕೆ ತೆಗೆದುಕೊಳ್ಳುವ ಸಂಚು ನಡೆಸುತ್ತಿದ್ದಾರೆ. ನವಕೋಟಿ ನಾರಾಯಣ ಎಂದು ಹೆಸರು ಗಳಿಸಿರುವ ಮುರುಘಾಮಠ ಉಳಿವಿ ಗಾಗಿ ರಾಜ್ಯಾದ್ಯಂತ ಭಕ್ತರನ್ನು ಸೇರಿಸಿ ಅಭಿ ಯಾನ ನಡೆಸಲಾಗುವುದೆಂದು ವಿಧಾನಪರಿಷತ್ ಸದಸ್ಯ ಗೌರ್ನಿಂಗ್ ಕೌನ್ಸಿಲ್ ಮೆಂಬರ್ ಕೆ.ಎಸ್.ನವೀನ್ ಹರಿಹಾಯ್ದರು.
ಜಿಲ್ಲಾ ಪಂಚಾಯಿತಿ ಕಟ್ಟಡದಲ್ಲಿರುವ ತಮ್ಮ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮರುಘಾಮಠಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಿರುವುದು ಸರಿಯಲ್ಲ ಎಂದು ಹೈಕೋರ್ಟ್ ಮೇ.22 ರಂದು ಆದೇಶ ಹೊರಡಿಸಿದ ಬೆನ್ನಲ್ಲೆ ನಾಲ್ಕು ದಿನ ಕಳೆದು ತರಾತುರಿಯಲ್ಲಿ ಯಾರ ಅಭಿಪ್ರಾಯವನ್ನು ಪಡೆಯದೆ ಸಭೆಗೆ ಬಂದವರಿಂದ ಖಾಲಿ ಪೇಪರ್‍ನಲ್ಲಿ ಸಹಿ ಮಾಡಿಸಿಕೊಂಡು ಸರ್ವಾನು ಮತದ ನಿರ್ಣಯವಾಗಿರುವುದಕ್ಕೆ ನನ್ನ ವಿರೋಧವಿದೆ. ಆಡಳಿತಾಧಿಕಾರಿ ಮೂಲಕ ಕಂದಾಯ ಇಲಾಖೆಗೆ ಕೊಡಲಾಗಿದೆ. ಕೋರ್ಟ್ ಆದೇಶ ಉಲ್ಲಂಘಿಸಿ ದುರಪಯೋಗಪಡಿ ಸಿಕೊಂಡು ಭಕ್ತರು ಹಾಗೂ ಸಾರ್ವಜನಿಕರನ್ನು ದಿಕ್ಕುತಪ್ಪಿಸುವ ಕೆಲಸವಾಗುತ್ತಿದೆ ಎಂದು ಅಸ ಮಾಧಾನ ವ್ಯಕ್ತಪಡಿಸಿದರು.ಚಿತ್ರದುರ್ಗದ ನೂತನ ಶಾಸಕ ಕೆ.ಸಿ.ವೀರೇಂದ್ರಪಪ್ಪಿಯನ್ನು ಮುರುಘಾಮಠದ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿಕೊಂಡಿರುವುದನ್ನು ನೋಡಿದರೆ ಚಿತ್ರದುರ್ಗ ವಿಧಾನಸಭಾ ಕ್ಷೇತ್ರಕ್ಕಷ್ಟೆ ಮುರು ಘಾಮಠ ಮೀಸಲಾದಂತಿದೆ. ರಾಜ್ಯಾದ್ಯಂತ ನೂರಕ್ಕೂ ಹೆಚ್ಚು ಶಾಖಾ ಮಠ, ಬಸವ ಕೇಂದ್ರಗಳಿವೆ. ಯಾರನ್ನು ಗಣನೆಗೆ ತೆಗೆದು ಕೊಂಡಿಲ್ಲ. ಪಟ್ಟಭದ್ರ ಹಿತಾಸಕ್ತಿಗಳು ಕೋರ್ಟ್ ಆದೇಶವನ್ನು ಧಿಕ್ಕರಿಸುತ್ತಿರುವುದು ಸರಿಯಾದ ಕ್ರಮವಲ್ಲ. ಸಾವಿರಾರು ಮಕ್ಕಳಿಗೆ ಅನ್ನದಾ ಸೋಹ, ಶಿಕ್ಷಣ ನೀಡಿದ ಮಠವನ್ನು ಅದೋಗತಿಗೆ ತೆಗೆದುಕೊಂಡು ಹೋಗಲು ನಾವುಗಳು ಬಿಡು ವುದಿಲ್ಲ. ಸಾವಿರಾರು ಕೋಟಿ ರೂ.ಗಳ ಆಸ್ತಿ  ಯಿದೆ. ಮಠದ ಅಧಿಕಾರ ಹಿಡಿಯಬೇಕೆಂಬ ಹಪಾಹಪಿಯಿಂದ ಇಂತಹ ಆತುರದ ನಿರ್ಧಾ  ರಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಹೈಕೋರ್ಟ್ ಆದೇಶಕ್ಕೆ ರಿಟ್ ಅಪೀಲ್ ಹಾಕಿದ್ದೇನೆ. ಐವತ್ತರಿಂದ ನೂರು ಜನ ಸೇರಿಕೊಂಡು ಸಭೆ ನಡೆಸಿ ನಿರ್ಣಯಿಸಿರುವುದನ್ನು ಒಪ್ಪಲ್ಲ. ಇಂಡಿ ಯನ್ ಮೆಡಿಕಲ್ ಕೌನ್ಸಿಲ್‍ನಿಂದ ಮೆಡಿಕಲ್ ಕಾಲೇಜು ಮುಚ್ಚುವುದಾಗಿ ಪತ್ರ ಬಂದಿದೆ. ಮಠ ವನ್ನು ಒಳ್ಳೆಯ ದಾರಿಯಲ್ಲಿ ತೆಗೆದುಕೊಂಡು ಹೋಗುವ ಕೆಲಸವಾಗಬೇಕು. ಹೈಕೋರ್ಟ್ ಆದೇಶದ ಅನುಸಾರ ನಡೆದುಕೊಂಡರೆ ಎಲ್ಲರಿಗೂ ಒಳ್ಳೆಯದಾಗುತ್ತದೆಂದು ಸಲಹೆ ನೀಡಿದರು.ಡಾ.ಶಿವಮೂರ್ತಿ ಶರಣರು ಜೈಲಿಗೆ ಹೋಗಿರುವುದರಿಂದ ಬಸವಪ್ರಭು ಸ್ವಾಮಿಯನ್ನು ನೇಮಕ ಮಾಡಲಾಗಿದೆ. ಅಂದಿನಿಂದ ಧಾರ್ಮಿಕ ಕೆಲಸಗಳು ನಡೆಯುತ್ತಿವೆ. ಆದರೆ ಸಮಿತಿಯನ್ನು ರಚಿಸಿ ಘೋಷಿಸಿರುವುದು ಯಾವ ನ್ಯಾಯ? ಜಯದೇವ ಜಗದ್ಗುರುಗಳು ಹಳ್ಳಿ ಹಳ್ಳಿ ತಿರುಗಿ ಮಠ ಕಟ್ಟಿದ್ದಾರೆ. ಅವರ ಭಕ್ತಿಯನ್ನು ಮೆಚ್ಚಿ ದಾವಣಗೆರೆ, ಕೊಡಗಿನಲ್ಲಿ ಕೋಟ್ಯಾಂತರ ರೂ. ಬೆಲೆ ಬಾಳುವ ಭೂಮಿಯನ್ನು ಭಕ್ತರೆ ದಾನವಾಗಿ ನೀಡಿದ್ದಾರೆ. ಮಠಕ್ಕೆ ಸೇರಿದ ವಿದ್ಯಾಸಂಸ್ಥೆ, ಮೆಡಿಕಲ್ ಕಾಲೇಜು, ಸಾವಿರಾರು ವಿದ್ಯಾರ್ಥಿಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ನಾನೆ ಹಿಂದಿನ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರ ಫಲವಾಗಿ ದಕ್ಷ ಆಡಳಿತಾಧಿಕಾರಿಯನ್ನು ನೇಮಿಸಿತ್ತು. ಡಿಸೆಂಬರ್‍ನಲ್ಲಿ ಆಡಳಿತಾಧಿಕಾರಿ ಅಧಿಕಾರ ವಹಿಸಿಕೊಂಡರು. ವಿದ್ಯಾಸಂಸ್ಥೆಯಲ್ಲಿರುವ ಸಮಸ್ಯೆಗಳನ್ನು ನಿವಾರಿಸಿ ಸರಿದಾರಿಗೆ ತೆಗೆದುಕೊಂಡು ಹೋಗಿದ್ದರ ಪರಿಣಾಮವಾಗಿ ವಿವಿಧ ಬ್ಯಾಂಕ್‍ಗಳಲ್ಲಿದ್ದ 32 ಕೋಟಿ ರೂ.ಸಾಲದಲ್ಲಿ ಐದು ತಿಂಗಳಲ್ಲಿ ಹತ್ತುವರೆ ಕೋಟಿ ರೂ.ಗಳ ಸಾಲ ತೀರಿಸಲಾಗಿದೆ ಎಂದು ಕೆ.ಎಸ್.ನವೀನ್ ಹೇಳಿದರು.ಮೆಡಿಕಲ್ ಕಾಲೇಜಿಗಾಗಿ ಬ್ಯಾಂಕ್‍ನಲ್ಲಿ ಗ್ಯಾರೆಂಟಿಗಾಗಿ ಇಡಲಾಗಿದ್ದ ಒಂಬತ್ತುವರೆ ಕೋಟಿ ರೂ.ಗಳನ್ನು ವಾಪಸ್ ಪಡೆಯಲಾಗಿದೆ. ಇತರರ ಪಾಲಾಗಿದ್ದ ಮಠದ ಆಸ್ತಿಗಳನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ. ಕನಿಷ್ಕ ಹೋಟೆಲ್, ಕೊಡಗಿನಲ್ಲಿರುವ ಆಸ್ತಿ, ಎಸ್.ಜೆ.ಎಂ.ಕಾಲೇಜು ಪಕ್ಕವಿರುವ ಖಾಲಿ ಜಾಗ ಟೆಂಡರ್ ಕೊಡುವ ವಿಚಾರದಲ್ಲಿ ಪಾರದರ್ಶಕತೆಯನ್ನು ಕಾಪಾಡಲಾಗಿದೆ ಎಂದರು.
ಸಿಬ್ಬಂದಿಗಳಿಗೆ ಮುಂಬಡ್ತಿ ಕೊಟ್ಟಿರಲಿಲ್ಲ. ಅನೇಕ ಕಾಮಗಾರಿಗಳನ್ನು ಪೂರ್ಣಗೊಳಿಸಲು ಟೆಂಡರ್ ಕರೆದು ಕೆಲಸ ಕೊಡುವ ಪ್ರಯತ್ನವಾಗಿದೆ. ಬಸವ ಪ್ರತಿಮೆ ನಿರ್ಮಾಣಕ್ಕೆ ಏಳು ಕೋಟಿ ರೂ.ಗಳನ್ನು ನೀಡಲಾಗಿತ್ತು. ಕಾಮಗಾರಿ ಅಪೂರ್ಣವಾಗಿದ್ದು, ಮೂರು ಕೋಟಿ ರೂ.ಗಳ ಕಾಮಗಾರಿ ಮಾಡಿರ ಲಿಲ್ಲ. ಮಠಕ್ಕೆ ಸೇರಿದ ಆಸ್ತಿ, ವಿದ್ಯಾಸಂಸ್ಥೆಗೆ ಸೇರಿದ ಕಟ್ಟಡಗಳನ್ನು ಉಳಿಸಿಕೊಳ್ಳಲಾಗಿದೆ. ಹೈಕೋರ್ಟ್ ಆದೇಶದ ಪ್ರಕಾರ ಹೊಸ ಕಮಿಟಿಗೆ ಮಾನ್ಯತೆಯಿಲ್ಲ ಎಂದು ಕೆ.ಎಸ್.ನವೀನ್ ತಿಳಿಸಿದರು

 

 

 

Leave a Reply

Your email address will not be published. Required fields are marked *