ಹೈ ಕಮಾಂಡ್ ನನಗೆ ಯಾವುದೇ ನೋಟಿಸ್ ನೀಡಿಲ್ಲ

ರಾಜಕೀಯ

 

Breaking news

ಹೈಕಮಾಂಡ್ ಯಾವುದೇ ನೋಟೀಸ್ ನೀಡಿಲ್ಲ, ಸುರ್ಜೆವಾಲ ಅವರು ದೂರವಾಣಿ ಕರೆ ಮಾಡಿ‌ ಮಾತನಾಡಿ ಪಕ್ಷಕ್ಕೆ ಡ್ಯಾಮೇಜ್ ಆಗುವ ಹೇಳಿಕೆ ನೀಡಬೇಡ ಎಂದಿದ್ದಾರೆ ಎಂದು ಮಾಜಿ ಸಚಿವ ಜಮೀರ್ ಆಹಮದ್ ಹೇಳಿದರು.
ಅವರು ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು.
ಇಷ್ಟಕ್ಕೆ‌ ನಿಲ್ಲಿಸಿ ಕೆಪಿಸಿಸಿ‌ ಅಧ್ಯಕ್ಷರಿಗೂ ಹೇಳಿದ್ದೇನೆ ಎಂದರು, ನಾವು ನಿಲ್ಲಿಸಿದ್ದೇವೆ, ನಿಮ್ಮ ಹೇಳಿಕೆಯಿಂದ ಪಕ್ಷಕ್ಕೆ ಹಿನ್ನೆಡೆ ಆಗುತ್ತದೆ ಸುಮ್ಮನಿರಿ ಎಂದಿದ್ದಾರೆ ಹೀಗಾಗಿ ನಾವು ಸುಮ್ಮನಿದ್ದೇವೆ ಎಂದರು.

 

 

 

ಒಕ್ಕಲಿಗ ಸಮೂದಾಯದ ಪ್ರತಿಭಟನೆ ವಿಚಾರಕ್ಕೆ ಪ್ರಕ್ರಿಯಿಸಿದ ಜಮೀರ್, ನಾನು ಯಾವ ಕಾರಣಕ್ಕೆ ಕ್ಷಮೆ ಕೇಳಬೇಕು, ಅಂತದ್ದು ನಾನೇನು ಮಾಡಿದ್ದೇನೆ. ನಿನ್ನೆಯೇ ನಾನು ಸ್ಪಷ್ಟವಾಗಿ ಬಿಡಿಸಿ ಹೇಳಿದ್ದೇನೆ,ನನ್ನ ಅಭಿಮಾನ ಹೇಗಿತ್ತು. ನಾನು ಯಾವ ಹಿನ್ನೆಲೆಯಿಂದ ರಾಜಕಾರಣಕ್ಕೆ ಬಂದೆ ಎಂದು ಹೇಳಿದ್ದೇನೆ.ಆದಿ‌ಚುಂಚನಗಿರಿ ಸ್ವಾಮೀಜಿ ಅವರನ್ನು ಕೇಳಿ ನಾನು ಹೇಗೆಂದು‌ ಹೇಳುತ್ತಾರೆ, ನಾನು ಅಂಥದ್ದು,ಹೇಳಿದ್ರೆ ನೋವು ಮಾಡಿದ್ರೆ ಕ್ಷನೆ ಕೇಳೋಕೆ ಸಿದ್ದನಿದ್ದೇನೆ,ನಾನು ಏನಾದ್ರು ತಪ್ಪು ಪದ ಬಳಕೆ ಮಾತನಾಡಿದ್ದರೆ ಕ್ಷಮೆ ಕೇಳುವೆ, ಆದರೆ ಇದೊಂದು ರಾಜಕೀಯ ಅಷ್ಟೆ 2023 ರ ಚುನಾವಣೆ ಸಮೀಪಿಸುತ್ತಿದೆ, ನಾನು ಒಕ್ಕಲಿಗರ ನಡುವೆ ಬೆಳೆದಿರುವ ಹುಡುಗ, ನನ್ನ ರಾಜಕೀಯ ಗುರು ದೇವೇಗೌಡರು ಎಂದು ಹೇಳಿದ್ದೇನೆ ಎಂದರು. ನನ್ನ ಉಪ ಚುನಾವಣೆಯಲ್ಲಿ ಹಗಲು ರಾತ್ರಿ ಕೆಲಸ ಮಾಡಿದ್ದಾರೆ ಎಂದರು.
ಇನ್ನು ಸಿಟಿ‌ ರವಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಜಮೀರ್, ಸಿಟಿ ರವಿ ಅವರು ಈ ಮಟ್ಟ ಕ್ಕೆ‌ ಬೆಳೆಯಲು ಕಾರಣ ಯಾರು ಎಂದು‌ ನನಗೆ ಗೊತ್ತಿದೆ. 2008 ರಲ್ಲಿ ಯಾರ ಬಳಿ‌ ಬಂದು ಏನು‌ ಕೇಳಿದ್ರು ಅಂತ ‌ಅವರನ್ನೆ ಕೇಳಿ, ಯಾರ ಬಕೇಟ್ ಹಿಡಿದು ಬಂದಿದ್ದಾರೆ ಎಂದು ಕೇಳಿ,ಕುಮಾರಸ್ವಾಮಿ‌ ಸಿಎಂ‌ ಇದ್ದಾಗ ಸದಾಶಿವ ನಗರ ಗೆಸ್ಟ್ ಹೌಸ್ ಗೆ ಯಾರ ಬಳಿ‌ ಬಂದು ಬಕೇಟ್ ಹಿಡಿಯಲು ಬಂದಿದ್ದರಿ ಎಂದು ಇವೆಲ್ಲವೂ ನನಗೆ ಗೊತ್ತಿದೆ ಹೋಗಿ ಅವರನ್ನೆ ಕೇಳಿ ಎಂದು ಹೇಳುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿ ಜಾಹೀರಾತಿಗಾಗಿ ಸಂಪರ್ಕಿಸಿ: 8660924503

Leave a Reply

Your email address will not be published. Required fields are marked *