ಮಧ್ಯರಾತ್ರಿ ಸಭೆಯಲ್ಲಿ ಸುಖಾಂತ್ಯ ಕಂಡ ಸಿಎಂ ಆಯ್ಕೆ

ರಾಜಕೀಯ

ರಾಜ್ಯದ ಮುಖ್ಯ ಮಂತ್ರಿ ಸ್ಥಾನದ ಕಗ್ಗಂಟು ಸುಖಾಂತ್ಯಗೊಂಡಿದ್ದು, ಸಿದ್ದರಾಮಯ್ಯ ಮುಖ್ಯಮಂತ್ರಿ ಮತ್ತು ಡಿಸಿಎಂ ಆಗಿ ಡಿಕೆ ಶಿವಕುಮಾರ್ ಅವರು ಆಯ್ಕೆಯಾಗಿದ್ದಾರೆ.

 

 

 

ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಪಡೆದ ನಂತರ ಶಾಸಕಾಂಗ ಸಭೆಯನ್ನು ನಡೆಸಿದ್ದು, ಅಲ್ಲಿ ಮುಖ್ಯ ಮಂತ್ರಿ ಆಯ್ಕೆಯಲ್ಲಿ ಹಗ್ಗ ಜಗ್ಗಾಟ ನಡೆದಿತ್ತು. ಇದು ಹೈ ಕಮಾಂಡ್ ಅಂಗಳಕ್ಕೆ ಹೋಗಿದ್ದು, ಮ್ಯಾರಥಾನ್ ಮೀಟಿಂಗ್ ಗಳು ನಡೆದಿದ್ದವು. ಆದರೆ ಡಿಕೆ ಶಿವಕುಮಾರ್ ಹಾಗು ಸಿದ್ದರಾಮಯ್ಯ ಇಬ್ಬರಲ್ಲಿ ಯಾರು ಕೂಡ ಪಟ್ಟು ಸಡಿಲಿಸಲಿಲ್ಲ. ಇದರಿಂದ ರಾತ್ರೋ ರಾತ್ರಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಮತ್ತು ಖರ್ಗೆ ಅವರ ಮಹತ್ವದ ಸಭೆಯಲ್ಲಿ ರಾಜಿ ಸಂಧಾನ ಸೂತ್ರವನ್ನು ಹೆಣೆದಿದ್ದು, ಮೊದಲ ಎರಡುವರೆ ವರ್ಷಗಳ ಕಾಲ ಸಿಎಂ ಸ್ಥಾನವನ್ನು ಸಿದ್ದರಾಮಯ್ಯ ಅಲಂಕರಿಸಬೇಕು. ಡಿಸಿಎಂ ಆಗಿ ಡಿ‌ಕೆ ಶಿವಕುಮಾರ್ ಅವರು ಅಲಂಕರಿಸಬೇಕು ಇದರ ಜೊತೆಗೆ ಡಿಕೆಶಿವಕುಮಾರ್ ಅವರಿಗೆ ಎರಡು ಪ್ರಬಲ ಖಾತೆಗಳಾದ ಗೃಹ ಮತ್ತು ಜಲ ಸಂಪನ್ಮೂಲ ಅಥವ ಇಂಧನ ಖಾತೆಗಳನ್ನು ನೀಡಲಾಗುತ್ತದೆ. ಸಿದ್ದರಾಮಯ್ಯ ಎರಡುವರೆ ವರ್ಷಗಳ ನಂತರ ಡಿಸಿಎಂ ಆಗಿರುತ್ತಾರೆ ಎಂಬ ಸೂತ್ರವನ್ನು ಜಾರಿಗೆ ತಂದಿದ್ದು, ಇದಕ್ಕೆ ಇಬ್ಬರು ಕೂಡ ಒಪ್ಪಿದ್ದಾರೆ ಇದರಿಂದ 20 ನೇ ತಾರೀಖು ಸಿಎಂ‌ ಆಗಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಮಾತ್ರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದಕ್ಕೆ ನೆರೆಯ ರಾಜ್ಯಗಳ ಸಿಎಂ ಮತ್ತು ವಿಪಕ್ಷ ನಾಯಕರುಗಳನ್ನು ಆಹ್ವಾನಿಸಲಾಗುತ್ತದೆ. ಒಂದು ವಾರ ಬಿಟ್ಟು ಸಚಿವ ಸಂಪುಟದ ಆಯ್ಕೆಯನ್ನು ಕೂಡ ಮಾಡಲಾಗುತ್ತದೆ ಸಂದೇಶವನ್ನು ಕಾಂಗ್ರೆಸ್ ಹೈ ಕಮಾಂಡ್ ನೀಡಿದೆ.ಇದರಿಂದ ಮುಖ್ಯ ಮಂತ್ರಿ ಆಯ್ಕೆಯು ಹೈಕಮಾಂಡ್ ರಾಜಿ ಸಂಧಾನ ಸೂತ್ರ ಯಶಸ್ವಿಯಾಗಿದೆ.

Leave a Reply

Your email address will not be published. Required fields are marked *