Chitradurga media spokesperson react to sriramulu

ಕಾಂಗ್ರೆಸ್ ಪಕ್ಷ ಸಾವಿನ‌ಮನೆಯಲ್ಲಿ ರಾಜಕಾರಣ ಮಾಡುವ ಪಕ್ಷವಲ್ಲ: ಬಾಲಕೃಷ್ಣ ಸ್ವಾಮಿ ಯಾದವ್

ಜಿಲ್ಲಾ ಸುದ್ದಿ

ಚಿತ್ರದುರ್ಗ: ಕಾಂಗ್ರೆಸ್ ಸಾವಿನ‌ ಮನೆಯಲ್ಲಿ ರಾಜಕಾರಣ ಮಾಡುವಂತಹ ಪಕ್ಷವಲ್ಲ. ನಾವೂ ದೇಶದ ಜನರ ಪ್ರಾಣ ರಕ್ಷಣೆ ಮಾಡುವಂತಹ ಕೆಲಸ ಮಾಡುತ್ತಿದ್ದೆವೆ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಬಾಲಕೃಷ್ಣ ಯಾದವ್ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲುಗೆ ತಿರುಗೇಟು ನೀಡಿದರು.

 

 

 

Chitradurga media spokesperson react to sriramulu

ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿರುಗೇಟು ನೀಡುವ ಮೂಲಕ ಖಂಡಿಸಿದ್ದಾರೆ.
ಕೋವಿಡ್ ನಿಂದಾಗಿ
ದೇಶ ನಲುಗಿ ಹೋಗುತ್ತಿದೆ. ಇಂತಹ ಸಮಯದಲ್ಲಿ ಕಾಂಗ್ರೆಸ್ ಪಕ್ಷ ಸಾವಿನ ಮನೆಯಲ್ಲಿ ರಾಜಕಾರಣ ಮಾಡುವುದಿಲ್ಲ. ನಮ್ಮ ಉದ್ದೇಶ ಜನರ ಜೀವ ಉಳೊಸುವುದಾಗಿದೆ. ಬಿಜೆಪಿ ಪಕ್ಷ ದೇಶದಲ್ಲಿ ಕೋಮು ಭಾವನೆ ಬಿತ್ತಿ ಅಧಿಕಾರಕ್ಕೆ ಬಂದಿದೆ ಎನ್ನುವುದನ್ನು ಸಚಿವ ಶ್ರೀರಾಮುಲು ಅವರು ಮರೆತಂತಿದೆ. ದೇಶದಲ್ಲಿ ಸಾಮಾನ್ಯ ಸಾವುಗಳಾದರೂ ಅವುಗಳ ಬಗ್ಗೆ ಕೋಮುಭಾವನೆಯ ವಿಷ ಬೀಜ ಬಿತ್ತಿ ಅದರ ಲಾಭವನ್ನು ಪಡೆದಿರುವುದು ದೇಶ ಹಾಗೂ ರಾಜ್ಯದ ಜನತೆಗೆ ತಿಳಿದಿದೆ. ಕೋವಿಡ್ ನಂತಹ ಸಂದಿಗ್ಧ ಸ್ಥಿತಿಯಲ್ಲಿ ಜನತೆ ಚಿಕಿತ್ಸೆ ಯಿಲ್ಲದೆ ಸಾವನ್ಬಪ್ಪಬಾರದು ಎಂದು ಆಗ್ರಹಿಸಿದ್ಧೆವೆ. ಇನ್ನು ಕೋವಿಡ್ ನಿಂದ ಸತ್ತವರ ನಿಖರ ಸಾವಿನ ಸಂಖ್ಯೆಯನ್ನು‌ ಕೇಳಿದ್ದು ತಪ್ಪೆ? ಸಾವಿನ ಸಂಖ್ಯೆಯನ್ನು ತಡೆಯಲು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದು ತಪ್ಪು ಎನ್ನುವುದಾದರೆ ಪ್ರಜಾ ಪ್ರಭುತ್ವದಲ್ಲಿ ವಿರೋಧ ಪಕ್ಷ ಇರುವುದು ಯಾಕೆ? ವಿರೋಧ ಪಕ್ಷ ವಾಗಿರುವ ನಾವು ನಮ್ಮ ಕರ್ತವ್ಯ ಮಾಡಿದ್ದೇವೆ. ಹೀಗೆ ಒತ್ತಾಯಿಸಿದ್ದನ್ನು ಶವಿನ ಮನೆಯಲ್ಲಿನ ರಾಜಕಾರಣ ಎಂದು ನೀವು ಹೇಳುವುದಾದರೆ ಅದಕ್ಕೆ ಅರ್ಥ ವಿದೆಯೇ?
ಕಾಂಗ್ರೆಸ್ ಪಕ್ಷ ಯಾವಾಗಲೂ ಜನರ ಜೀವವನ್ನು ಉಳಿಸಲು ಹಾಗೂ ಅವರ ಜೀವನವನ್ನು ರೂಪಿಸಲು ಮತ್ತು ರಕ್ಷಿಸುವ ಕೆಲಸ ಮಾಡಿದೆ. ಜನರು ದೇಶದಲ್ಲಿ ಸಾಯುತ್ತಿದ್ದಾರೆ. ಸುಮಾರು 25 ಸಾವಿರ ಜನ ಕರ್ನಾಟಕದಲ್ಲಿ ಸಾವಿಗೀಡಾಗಿದ್ದಾರೆ.‌ಇ‌ನ್ನಷ್ಟು ಸಾವುಗಳಾಗುವುದನ್ನು ತಪ್ಪಿಸಿ ಸರಿಯಾದ ಚಿಕಿತ್ಸೆ ನೀಡಿ ಎನ್ನುವುದು ಸಾವಿನ ರಾಜಕಾರಣವೇ? ಜನತೆ ಕಷ್ಟದಲ್ಲಿದ್ದಾಗ ಅವರಿಗೆ ಸ್ಪಂದಿಸಿ ಸರ್ಕಾರ ಮಾಡುವ ತಪ್ಪನ್ನು ಎತ್ತಿ ತೋರಿಸುವುದನ್ನು ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಮಾಡುತ್ತಿದೆ ಎಂದು ಬಾಲಕೃಷ್ಣಸ್ವಾಮಿ‌ಯಾದವ್ ಹೇಳಿದ್ದಾರೆ.

Leave a Reply

Your email address will not be published. Required fields are marked *