ವೈದ್ಯಕೀಯ ವಿದ್ಯಾರ್ಥಿನಿಯಿಂದ ಚಿನ್ನದ ಭೇಟೆ

ಜಿಲ್ಲಾ ಸುದ್ದಿ

ಚಿತ್ರದುರ್ಗ: ಮುಟ್ಟಿದ್ದೆಲ್ಲಾ ಚಿನ್ನ , ಚಿನ್ನದ ಪದಕಗಳನ್ನೆ ತನ್ನ ಕೊರಳಿಗೆ ಮಾಲೆಯನ್ನಾಗಿ ಮಾಡಿಕೊಂಡಿರುವ ಈ ಯುವತಿ  ಜಿಲ್ಲೆಗೆ ರಾಜ್ಯಕ್ಕೆ ಕೀರ್ತಿ ತಂದಿದ್ದಾಳೆ.

Chitradurga golden girl

 

 

 

  ಕೋಟೆ ನಾಡು ಚಳ್ಳಕೆರೆ ತಾಲೂಕಿನ ಹಿರೇ ಮಧುರೆಯ ಜಿಹೆಚ್ ಪಿಎಸ್  ಶಾಲೆಯ ಸಹ ಶಿಕ್ಷಕಿಯಾಗಿರುವ  ಬಿಟಿ ಗಿರಿಜಮ್ಮ ಅವರ ಪುತ್ರಿ  ಬಿ ಎನ್ ಸ್ವಾತಿಮುತ್ತು, ಇವಳು ಬಿಎಎಂಎಸ್ ವೈದ್ಯಕೀಯ ವಿಭಾಗದಲ್ಲಿ  5 ಚಿನ್ನದ ಪದಕಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾಳೆ. ಧರ್ಮಸ್ಥಳದ ವೀರೇಂದ್ರ ಹಗಡೆ ಅವರ ಪ್ರಶಂಸೆಗೆ ಒಳಗಾಗಿ,  ಉಚಿತವಾಗಿ ಎಂಎಸ್ ಪದವಿಗೆ  (ಸ್ತ್ರೀ ಮತ್ತು ಪ್ರಸೂತಿ) ಪ್ರವೇಶವನ್ನು  ಪಡೆದಿದ್ದಾಳೆ. ಈ ವಿಭಾಗದಲ್ಲಿಯೂ ಚಿನ್ನದ ಪದಕವನ್ನು ಪಡೆದು ಇಲ್ಲಿಯೂ ಚಿನ್ನದ ಬೇಟೆಯನ್ನು ಮುಂದುವರೆಸಿದ್ದಾಳೆ. 2019-20 ನೇ ಸಾಲಿನಲ್ಲಿ ನಡೆದ  ಬೆಂಗಳೂರಿನ ರಾಜೀವ್ ಗಾಂಧಿ ವಿವಿಯ ಘಟಿಕೋತ್ಸವದ ಕಾರ್ಯಕ್ರಮದಲ್ಲಿ ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರ ಕೈಯಿಂದ ಚಿನ್ನದ ಪದಕಗಳನ್ನು ಪಡೆದು ಜಿಲ್ಲೆಗೆ ಹಾಗೂ  ರಾಜ್ಯದ ಹೆಸರನ್ನು ಉತ್ತುಂಗಕ್ಕೆ ಕೊಂಡಯ್ಯೋದಿದ್ದಾಳೆ. ಇದು ಅತ್ಯಂತ ಹೆಮ್ಮೆಯ ವಿಚಾರವಾಗಿದ್ದು,  ಈ ಸಾಧನೆಗಾಗಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ)  ಚಳ್ಳಕೆರೆ  ತಾಲೂಕು ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಸಂಯುಕ್ತವಾಣಿ

Leave a Reply

Your email address will not be published. Required fields are marked *