ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯಿಂದ ಬೃಹತ್ ಜಾಥ

ಜಿಲ್ಲಾ ಸುದ್ದಿ

ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯಲ್ಲಿ ಅಮೃತ ಮಹೋತ್ಸವದ ಅಂಗವಾಗಿ ಸುಮಾರು 5000 ವಿದ್ಯಾರ್ಥಿಗಳಿಂದ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭೂಸೇನೆ, ನೌಕಸೇನೆ, ವಾಯುಸೇನೆ, ಶ್ವಾನದಳ, ಪೋಲಿಸ್ ಫ್ರಂಟ್‍ಲೈನ್‍ವಾರಿಯರ್ಸ್ ,ಎಲ್ಲಾ ರಾಜರುಗಳ ಹಾಗೂ ರಾಣಿಯರು, ರೈತರು, ಸ್ಕೌಟ್ ಮತ್ತು ಗೈಡ್ಸ್ ಅಘೋರಿಗಳು ,ಕವಿಗಳು ಕಾಡುಮನುಷ್ಯರು,ಸ್ವಾತಂತ್ರ್ಯ ಹೋರಾಟಗಾರರು ವಿವಿಧ ರಾಜ್ಯಗಳ ನೃತ್ಯ ಹಾಗೂ ವೇಶಭೂಷಣಗಳು, ಋಷಿಮುನಿಗಳು, ವಿಜ್ಞಾನಿಗಳು, ಗಣಿತ ಶಾಸ್ತ್ರಜ್ಞರು, ಮುಖ್ಯಮಂತ್ರಿಗಳು, ರಾಷ್ಟ್ರಪತಿಗಳು, ಪ್ರಧಾನಮಂತ್ರಿಗಳು, ಎಲ್ಲಾ ಧರ್ಮಗಳು ,ಹಾಗು ದೇವರುಗಳು , ಕ್ರೀಡ ಸಾಧಕರು, ಗೊರಿಲ್ಲಾ ವಾರಿಯರ್ಸ್ , ಲಾಯರ್, ಟೀಚರ್ಸ್ , ಚಿತ್ರನಟರು, ರಾಷ್ಟ್ರೀಯ ಹಣ್ಣುಗಳು , ಹೂಗಳು, ರಾಷ್ಟ್ರೀಯ ಲಾಂಚನಗಳು, ಇನ್ನು ಮುಂತಾದವುಗಳು ವಿಧ್ಯರ್ಥಿಗಳ ವೇಷಭೂಷಣವನ್ನು ಧರಿಸಿ ದೇಶಕ್ಕೆ ತಮ್ಮ ಕೊಡಿಗೆಯನ್ನು ನೀಡಿದವರ ಬಗ್ಗೆ ಸ್ಮರಿಸುತ್ತಾ ಸಾರ್ವಜನಿಕರಲ್ಲಿ ಅಮೃತ ಮಹೋತ್ಸವದ ಬಗ್ಗೆ ಜಾಗೃತಿಯನ್ನು ಮೂಡಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

 

 

 

ಜಿಲ್ಲಾಧಿಕಾರಿ ಕಚೇರಿ ಬಳಿ ಜಾಥ ಬಂದಿದ್ದು, ಜಿಲ್ಲಾಧಿಕಾರಿಗಳಿಗೆ ರಾಷ್ಟ್ರ ಧ್ವಜವನ್ನು ನೀಡಿ‌ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ‌,ಹಾಗು ಅಪರ ಜಿಲ್ಲಾಧಿಕಾರಿಗಳು ಶುಭಾಶಯ ಕೋರಿದರು.

Leave a Reply

Your email address will not be published. Required fields are marked *