ಅಂಗೈಯಲ್ಲಿ‌ ಪ್ರಪಂಚ ತೋರಿಸಿದ ನಾಯಕ‌ ರಾಜೀವ್ ಗಾಂಧಿ

ಜಿಲ್ಲಾ ಸುದ್ದಿ

ಜನತೆಗೆ ಅಂಗೈಯಲ್ಲಿ ಪ್ರಪಂಚವನ್ನು ತೋರಿಸಿದ ವ್ಯಕ್ತಿ ಮಾಜಿ ಪ್ರಧಾನಿ ರಾಜೀವಗಾಂಧಿ, ಆದರೆ ರೀತಿ ತೀರ ಹಿಂದುಳಿದ ಜನಾಂಗಗಳಿಗೆ ಮೀಸಲಾತಿಯನ್ನು ನೀಡಿದ ವ್ಯಕ್ತಿ ಮಾಜಿ ಮುಖ್ಯಮಂತ್ರಿ ದೇವರಾಜ ಅರಸ್ ಇವರನ್ನು ಯಾವೋತ್ತು ಸಹಾ ಮರೆಯಬಾರದೆಂದು ಮಾಜಿ ಸಚಿವ ಹೆಚ್.ಅಂಜನೇಯ ತಿಳಿಸಿದರು.
ಚಿತ್ರದುರ್ಗ ನಗರದ ಜಿಲ್ಲಾ ಕಾಂಗ್ರೇಸ್ ಕಚೇರಿಯಲ್ಲಿಂದು ಮಾಜಿ ಪ್ರಧಾನಿ ರಾಜೀವಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿಗಳಾದ ದೇವರಾಜ್ ಅರಸ್‍ರವರ ಜನ್ಮ ದಿನಾಚರಣೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ ಮಾಜಿ ಪ್ರಧಾನ ಮಂತ್ರಿಗಳಾದ ರಾಜೀವಗಾಂಧಿಯವರ 19ನೇ ಶತಮಾನದಲ್ಲಿಯೇ ಭಾರತ ದೇಶವನ್ನು 21ನೇ ಶತಮಾನಕ್ಕೆ ಕೊಂಡ್ಯೂಯುವ ಕನಸನ್ನು ಕಂಡಿದ್ದಲ್ಲದೆ ಅದಕ್ಕೆ ಬೇಕಾದ ಸಿದ್ದತೆಯನ್ನು ಸಹಾ ಮಾಡಿದ್ದರೆ ಪರಿಣಾಮವಾಗಿ ಇಂದು ನಮ್ಮ ಕೈಯಲ್ಲಿ ಮೊಬೈಲ್, ಕಂಪ್ಯೂಟರ್, ಲಾಪ್‍ಟ್ಯಾಪ್ ಸೇರಿದಂತೆ ಇತರೆ ವಸ್ತುಗಳನ್ನು ನೋಡಬಹುದಾಗಿದೆ ಇವೆಲ್ಲಾ ರಾಜೀವಗಾಂಧಿಯವರ ಕೊಡುಗೆಯಾಗಿದೆ ಎಂದರು.
ರಾಜೀವವರಿಗೆ ಯುವಜನತೆಯ ಮೇಲೆ ಬಹಳ ಪ್ರೀತಿ ಮತ್ತು ಪ್ರೇಮ ಅವರು ಸಹಾ ದೇಶದ ಅಭೀವೃದ್ದಿಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕೆಂಬ ದೃಷಿಯಿಂದ 21ನೇ ವಯಸ್ಸಿಗೆ ಇದ್ದ ಮತದಾನ ಹಕ್ಕನ್ನು 18ಕ್ಕೆ ಇಳಿಸಿದರು. ಆದರೆ ಯುವ ಜನತೆ ತಮ್ಮ ತೀರ್ಮಾನವನ್ನು ಸರಿಯಾಗಿ ತೆಗೆದುಕೊಳ್ಳಲಾಗಲಿಲ್ಲ, ಇಷ್ಟಲ್ಲದೆ ಅದು ಪಕ್ಷಾಂತರ ಹೆಚ್ಚಾಗಿತ್ತು ರಾಜಕೀಯ ವ್ಯಕ್ತಿಗಳು ಒಂದು ಪಕ್ಷದಿಂದ ಇನ್ನೂಂದು ಪಕ್ಷಕ್ಕೆ ಹಾರುತ್ತಿದ್ದರು ಇದನ್ನು ತಡೆಯಲು ರಾಜೀವಗಾಂಧಿಯವರು ಪಕ್ಷಾಂತರ ನಿಷೇಧ ಕಾಯ್ದೆಯನ್ನು ಜಾರಿ ಮಾಡುವಲ್ಲಿ ಸಫಲರಾದರು. ಇದರೊಂದಿಗೆ ಮಹಿಳೆಯರಿಗೆ ಶೇ.50 ರಷ್ಟು ಮೀಸಲಾತಿಯನ್ನು ಜಾರಿಗೆ ತಂದರು. ಕೂಲಿ ಕಾರ್ಮಿಕರು ಸಹಾ ಪಂಚಾಯಿತಿ ಅಧ್ಯಕ್ಷರಾಗಬಹುದೆಂದು ತೋರಿಸಿಕೊಟ್ಟರು. ಪ್ರಧಾನಮಂತ್ರಿಗೆ ಇಲ್ಲದ ಚಕ್ ಸಹಿ ಮಾಡುವ ಹಕ್ಕನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷನಿಗೆ ನೀಡಿದ ಮಹಾನ್ ವ್ಯಕ್ತಿ ರಾಜೀವಗಾಂಧಿ ಎಂದು ಅಂಜನೆಯ ತಿಳಿಸಿದರು.
ಇತ್ತಿಚಿನ ದಿನಮಾನದಲ್ಲಿ ಕೆಲವರಿಗೆ ಪಕ್ಷಕ್ಕೆ ನಿಷ್ಠೆ ಎನ್ನುವುದು ಇಲ್ಲವಾಗಿದೆ. ಕೆಲಸ ಇದ್ದಾಗ ಮಾತ್ರ ಪಕ್ಷಕ್ಕೆ ಬರುವ ಅವರು ಅಧಿಕಾರವನ್ನು ಹಿಡಿದು ಅನುಭವಿಸಿ ತದ ನಂತರ ಮಾಯವಾಗುತ್ತಾರೆ. ನಮಗೆ ಪಕ್ಷ ಅಧಿಕಾರ ನೀಡಿದೆ ಎಂಬ ಕನಿಷ್ಠವಾದ ಸೌಜನ್ಯವನ್ನು ಸಹಾ ತೋರಿಸುವುದಿಲ್ಲ ಎಂದು ವಿಷಾಧಿಸಿ ಇತ್ತೀಚಿನ ದಿನದಲ್ಲಿ ಕಾಂಗ್ರೆಸ್ ವಿಫಲವಾಗುತ್ತಿದೆ. ಆದರೆ ಕಾರ್ಯಕರ್ತರ ಶ್ರಮದಿಂದ ಮತ್ತೇ ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೇಸ್ ಅಧಿಕಾರಕ್ಕೆ ಬರಬೇಕಿದೆ ಇದಕ್ಕೆ ಈಗಿನಿಂದಲೇ ಸಜ್ಜಾಗಬೇಕಿದೆ ಎಂದು ಕರೆ ನೀಡಿದರು.
ದೇವರಾಜ್ ಅರಸ್‍ರವರು ಮುಖ್ಯಮಂತ್ರಿಗಳಾಗಿದ್ದಾಗ ತೀರ ಹಿಂದುಳಿದ ಜನಾಂಗವನ್ನು ಗುರುತಿಸಿ ಅವರಿಗೆ ಮೀಸಲಾತಿಯನ್ನು ಕಲ್ಪಿಸಿ ರಾಜಕೀಯ ಶಕ್ತಿಯನ್ನು ನೀಡಿದರು. ಹಿಂದುಳಿದ ವರ್ಗದವರಿಗೆ ಹಾವನೂರು ವರದಿಯನ್ನು ಜಾರಿ ಮಾಡುವುದರ ಮೂಲಕ ನೂಂದವರಿಗೆ ಧ್ವನಿಯಾಗಿ ಕೆಲಸವನ್ನು ಮಾಡಿದ ವ್ಯಕ್ತಿ ದೇವರಾಜ್ ಅರಸ್ ಎಂದರು.
ಮಾಜಿ ಶಾಸಕ ಉಮಾಪತಿ ಮಾತನಾಡಿ, ರಾಜೀವಗಾಂಧಿಯವರು ಚಿಕ್ಕ ವಯಸ್ಸಿನಲ್ಲಿಯೇ ದೇಶವನ್ನು ನಡೆಸುವ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ್ದಾರೆ.ವಿವಿಧ ರೀತಿ ಅವಿಷ್ಕಾರಗಳನ್ನು ಮಾಡುವುದರ ಮೂಲಕ ದೇಶವನ್ನು ಬೇರೆ ದೇಶಗಳಂತೆ ಮುಂದೆ ಕೊಂಡ್ಯೂದಿದ್ದಾರೆ. ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸ್ ನೀಡಿದ ಮೀಸಲಾತಿಯಿಂದಾಗಿ ಇಂದು ನಾವುಗಳು ರಾಜಕೀಯದಲ್ಲಿ ವಿವಿಧ ರೀತಿಯ ಸ್ಥಾನವನ್ನು ಪಡೆದಿದ್ದೇವೆ. ತಮ್ಮ ಆಡಳಿತದಲ್ಲಿ ಸಂವಿಧಾನ ಕಾಯ್ದೆಗಳನ್ನು ಜಾರಿ ಮಾಡುವಲ್ಲಿ ಅರಸ್ ರವರು ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಮೈಸೂರು ಎಂದ ಇದ್ದ ಹೆಸರನ್ನು ಕರ್ನಾಟಕ ಎಂದು ನಾಮಕರಣ ಮಾಡಿದವರು ಅರಸ್ ರವರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಡಿಸಿಸಿ ಅಧ್ಯಕ್ಷರಾಧ ತಾಜ್ ಪೀರ್ ವಹಿಸಿದ್ದರು ಕಾರ್ಯಾಧ್ಯಕ್ಷರಾದ ಹಾಲೇಶ್, ಮಹಿಳಾ ಘಟಕ ಅಧ್ಯಕ್ಷೆ ಶ್ರೀಮತಿ ಗೀತಾ ನಂದಿನಿ ಗೌಡ, ಜಿ.ಪಂ.ಮಾಜಿ ಸದಸ್ಯರಾದ ಪ್ರಕಾಶ್ ಮೂರ್ತಿ, ನರಸಿಂಹರಾಜು, ಮುಂಖಡರಾದ ಬಿ.ಟಿ.ಜಗದೀಶ್, ಮಂಜಣ್ಣ, ಮೈಲಾರಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷ ಉಲ್ಲಾಸ್ ಕಾರೇಹಳ್ಳಿ, ಜಯ್ಯಣ್ಣ, ನಾಗಮ್ಮ, ಜಗದೀಶ್ ಗೀತಾ ಅಂಜನಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.

 

 

 

Leave a Reply

Your email address will not be published. Required fields are marked *