ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆತ ಖಂಡಿಸಿದ ಆಮ್ ಆದ್ಮಿ ಪಾರ್ಟಿ ಮುಖಂಡ

ರಾಜಕೀಯ

 

ವಿರೋಧಪಕ್ಷದ ನಾಯಕರಾದ  ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದ ದುಷ್ಕೃತ್ಯಕ್ಕೆ ಖಂಡನೆ…

 

 

 

 

ಕರ್ನಾಟಕದ ಅತ್ಯಂತ ಪ್ರಭಾವೀ ರಾಜಕೀಯ ಮುಖಂಡರು ಹಾಗೂ ಕರ್ನಾಟಕ ಸರ್ಕಾರದ ಹಾಲಿ ವಿರೋಧ ಪಕ್ಷದ ನಾಯಕರ ಕಾರಿಗೆ ಕೊಡಗುವಿನಲ್ಲಿ ಬಿಜೆಪಿ ಬೆಂಬಲಿತ ಕಿಡಿಗೇಡಿಗಳು ಮೊಟ್ಟೆ ಎಸೆದಿರುವುದು ಅತ್ಯಂತ ನಾಚಿಕೆಗೇಡಿನ ವಿಷಯವಾಗಿದ್ದು ಈ ಪ್ರಜಾತಂತ್ರ ವಿರೋಧಿ ಕೃತ್ಯವನ್ನು ಖಂಡಿಸುತ್ತೇನೆ.
ರಾಜ್ಯ ಗೃಹ ಇಲಾಖಾಧಿಕಾರಿಗಳು ಹಾಗೂ ರಾಜ್ಯದ ಮುಖ್ಯಮಂತ್ರಿಗಳೇ ಈ ಪ್ರಜಾತಂತ್ರ ವಿರೋಧಿ ಕೃತ್ಯಕ್ಕೆ ನೇರ ಹೊಣೆಗಾರರಾಗಬೇಕಿದೆ.
ಪಂಕ್ಚರ್ ಹಾಕುವ ಕಾಯಕಜೀವಿಗಳನ್ನು ಅವಮಾನಿಸುವ ದುಷ್ಟ ಮನಸ್ಥಿತಿಯುಳ್ಳ ನಮ್ಮ ರಾಜ್ಯದ ಎಂಪಿ ಯೋರ್ವರು ದೆಹಲಿಯ ಮುಖ್ಯ ಮಂತ್ರಿ ಶ್ರೀಅರವಿಂದ ಕೇಜ್ರೀವಾಲ್ ರವರ ನಿವಾಸದ ಮುಂದೆ ಗೂಂಡಾಗಿರಿ ಮಾಡಿ ದೇಶದ ಜನತೆಯೆದುರು ಕರ್ನಾಟಕ ರಾಜ್ಯದ ಜನರ ಮಾನ ಹರಾಜಾಗಲು ಕಾರಣಕರ್ತರಾಗಿರುವ ನೆನಪು ಜನಮಾನಸದಲ್ಲಿ ಇನ್ನು ಈಗಲೂ ಹಚ್ಚಹಸಿರಾಗಿಯೇ ಉಳಿದಿದೆ.ಇದರ ಮುಂದುವರೆದ ಭಾಗವೆಂಬಂತೆ ಇದೇ ರೀತಿಯ ಮನಸ್ಥಿತಿಯುಳ್ಳ ಬಿಜೆಪಿಯ ಕೋಮುವಾದಿ ಪಟಾಲಂ(ಸಿ.ಟಿ.ರವಿ, ಪ್ರತಾಪಸಿಂಹ,ಹೆಚ್.ಈಶ್ವರಪ್ಪ,ಸುನಿಲ್ ಕುಮಾರ್,ನಳೀನ್ ಕುಮಾರ್) ನ ಮುಖಂಡರಲವರು ವಿನಾಕಾರಣ ರಾಜ್ಯದ ಗಣ್ಯರು ಹಾಗೂ ದೇಶದ ಪ್ರಾತಃಸ್ಮರಣೀಯರ ವಿರುದ್ದ ಮಾಧ್ಯಮಗಳಲ್ಲಿ ಸುಖಾಸುಮ್ಮನೆ ತೇಜೋವಧೆ ಮಾಡುವಂಥಹಾ ಹೇಳಿಕೆ ನೀಡುವುದನ್ನು ಪರಿಪಾಠ ಮಾಡಿಕೊಂಡಿರುತ್ತಾರೆ.ಇವರುಗಳು ತಮ್ಮಯ ಸ್ವಾರ್ಥ ಸಾಧನೆಗಾಗಿ ಆಗಾಗ ನೀಡುತ್ತಾ ಬರುತ್ತಿರುವ ಇಂಥಹಾ ಪ್ರಚೋದನಕಾರಿ ಹೇಳಿಕೆಗಳಿಂದಲೇ ರಾಜ್ಯದ ಅಮಾಯಕ ಯುವಕರಲವರು ಇಂಥಹಾ ದುಷ್ಕೃತ್ಯಗಳಲ್ಲಿ ಭಾಗಿಯಾಗುವಂಥಾ ವಿಷಮ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ.ಇದಕ್ಕೆ ಇತ್ತೀಚೆಗೆ ರಾಜ್ಯದ ಹಲವಡೆ ನೆಡೆದ ಘಟನೆಗಳೇ ಸಾಕ್ಷಿಯಾಗಿವೆ.
ರಾಜ್ಯದ ವಿರೋಧ ಪಕ್ಷದ ನಾಯಕರ ಮೇಲೆಯೇ ಇಂಥಹಾ ಘಟನೆಗಳು ಜರುಗಿದರೆ ಇನ್ನು ಅಮಾಯಕ ಜನರ ಪಾಡೇನು ಎಂಬುದು ಜನಸಾಮಾನ್ಯರನ್ನು ಸದಾ ಕಾಡುತ್ತಿರುವ ಅತ್ಯಂತ ದುಗುಡದ ಪ್ರೆಶ್ನೆ.
ಆದುದರಿಂದ ಈ ಕೃತ್ಯವನ್ನು ಸರ್ಕಾರವು ಅತ್ಯಂತ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ದ ಜೊತೆಗೆ ಇವರನ್ನು ಪ್ರಚೋದಿಸುವವರ ವಿರುದ್ದವೂ ಕಠಿಣ ಕ್ರಮ ಜರುಗಿಸುವ ಮೂಲಕ ಇಂಥಹಾ ಪ್ರಜಾತಂತ್ರ ವಿರೋಧಿ ಚಟುವಟಿಕೆಗಳು ಮುಂದೆ ನೆಡೆಯದಂತೆ ಹಾಗೂ ಯಾವುದೇ ತಾರತಮ್ಯಗಳಿಗೆ ಎಡೆಮಾಡಿಕೊಡದಂತೆ ಆಳುವ ಸರ್ಕಾರ ಸೂಕ್ತ ಕ್ರಮ ಜರುಗಿಸಬೇಕೆಂದು ಸಮಾಜ ಸೇವಕ‌ ಹಾಗೂ ಆಮ್ ಆದ್ಮಿ‌ಪಕ್ಷದ ಮುಖಂಡ ಆರ್ ಶೇಷಣ್ಣ ಕುಮಾರ್ ಆಗ್ರಹಿಸಿದ್ದಾರೆ.

 

ಮೂಲಕ ಆಗ್ರಹಿಸುತ್ತೇನೆ.

Leave a Reply

Your email address will not be published. Required fields are marked *