ರಾಷ್ಟ್ರ ಪ್ರಶಸ್ತಿ ವಿಜೇತ ಗಾಯಕ ಶಿವಮೊಗ್ಗ ಸುಬ್ಬಣ್ಣ ಇನ್ನಿಲ್ಲ

ರಾಜ್ಯ

BREAKING NEWS

ಖ್ಯಾತ ಸುಗಮ‌ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ (83) ಹೃದಯಾಘಾತದಿಂದ ವಿಧಿ ವಶರಾಗಿದ್ದಾರೆ.

 

 

 

ಸುಬ್ಬಣ್ಣ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ಅವರನ್ನು ಜಯನಗರದ ಶಾಂತಿ‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರಿಗೆ ಹೃದಯಾಘಾತವಾಗಿತ್ತು. ಅಲ್ಲಿಂದ ಅವರನ್ನು ಜಯದೇವ ಹೃದ್ರೋಗ ಆಸ್ಪತ್ರೆಗೆ ಅಂಬ್ಯುಲೆನ್ಸ್ ನಲ್ಲಿ ಕರೆಯೊಯ್ಯಲಾಗುತ್ತಿತ್ತು. ಆದರೆ ಅವರು ಮಾರ್ಗದಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

ಸುಗಮ ಸಂಗೀತ ಕ್ಷೇತ್ರದ ಹಿರಿಯ ಗಾಯಕರಲ್ಲಿ ಒಬ್ಬರಾದ ಶಿವಮೊಗ್ಗ ಸುಬ್ಬಣ್ಣ, ಶಿವಮೊಗ್ಗ ಜಿಲ್ಲರಯ ನಗರ ಗ್ರಾಮದಲ್ಲಿ 1938 ರಲ್ಲಿ‌ ಜನಿಸಿದ್ದರು. ಅವರು ಬಿಎ ಬಿಕಾಂ ಎಲ್‌ಎಲ್ ಬಿ ಪದವಿಧರರಾಗಿದ್ದರು, ವಕೀಲರಾಗಿ ವೃತ್ತಿಯನ್ನು ಆರಂಭಿಸಿದ ಇವರು ಕೆಲವು ವರ್ಷಗಳ ಕಾಲ‌ ನೋಟರಿಯಾಗಿಯೂ ಕೆಲಸ ಮಾಡಿದ್ದಾರೆ. ರಕ್ತಗತವಾಗಿ ಬಂದಿದ್ದ ಇವರ ಸಂಗೀತ ಇವರನ್ನು‌ ಬಿಡದೆ ಶಾಲಾ‌ ಸಮಾರಂಭಗಳಲ್ಲಿ ಹಾಡುವಂತೆ ಪ್ರೇರೇಪಿಸಿತ್ತು. ಆದ್ದರಿಂದ ಶಾಲಾ‌ ದಿನಗಳಲ್ಲಿ ಹಾಡಿ ಹಲವಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡು ಹಾಡಿನ ಸುಬ್ಬಣ್ಣ ಎಂದೆನಿಸಿಕೊಂಡಿದ್ದರು. ಮುಂದೆ ಕನ್ನಡ ಗಾಯನ ಕ್ಷೇತ್ರದಲ್ಲಿ ಗುರುತಿಸಿಕೊಂಡ ಇವರು 1963 ರಲ್ಲಿ ಆಕಾಶವಾಣಿ ಗಾಯಕರೂ ಆದರು, ಅವರು ಚಲಚಿತ್ರರಂಗಕ್ಕೆ ಪ್ರವೇಶಿಸಿದ್ದು, ಡಾ. ಚಂದ್ರಶೇಖರ ಕಂಬಾರರ ಕರಿಮಾಯಿ ಮೂಲಕ, 1979 ರಲ್ಲಿ‌ ಅಂದಿನ ರಾಷ್ಟ್ರಪತಿ‌ ನೀಲಂ ಸಂಜೀವ ರೆಡ್ಡಿ ಅವರಿಂದ ರಜತ ಕಮಲ ಪ್ರಶಸ್ತಿ ಸ್ವೀಕರಿಸಿ ಯಶಸ್ಸಿನ ಕುದುರೇಯರಿ ನಡೆದರು. ಶಿಶಿ ನಾಳ ಷರೀಫರ ಕೋಡಗಾನ ಕೋಳಿ ನುಂಗಿತ್ತಾ, ಅಳಬೇಡಾ ತಂಗಿ ಅಳಬೇಡಾ ಬಿದ್ದಿಯೆಬ್ಬೆ ಮದುಕಿ ಮೊದಲಾದ ಗೀತೆಗಳನ್ನು ಹಾಡುವ ಮೂಲಕ ಸುಬ್ಬಣ್ಣ ಮನೆ ಮಾತಾದರು, ಸುಬ್ಬಣ್ಣ ಅವರ ಸಾಧನೆಯನ್ನು ಮನ್ನಿಸಿ ರಾಜ್ಯ ಸರ್ಕಾರ ಪ್ರತಿಷ್ಠಿತ ಸಂತ ಶಿಶು ನಾಳ‌ಷರೀಫ, ರಾಜ್ಯೋತ್ಸವ ಪ್ರಶಸ್ತಿ ಹಾಗೂ ಸಂಗೀತ ಅಕಾಡೆಮಿಯ ಕಲಾ ತಿಲಕ ಪ್ರಶಸ್ತಿ‌ನೀಡ ಗೌರವಿಸಿದರೆ ಅಭಿಮಾನಿಗಳು ನೂರಾರು ಪ್ರಶಸ್ತಿಗಳನ್ನು‌ ನೀಡಿದ್ದಾರೆ. 1974 ರಲ್ಲಿ ಮೊದಲ ಬಾರಿಗೆ ಕರ್ನಾಟಕಕ್ಕೆ ಬಂದ ರಜತ ಕಮಲ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡ ಸಾಧನೆ ಇವರದ್ದಾಗಿದೆ.

Leave a Reply

Your email address will not be published. Required fields are marked *