ದೇಶ ವಿಭಜನೆಯ ಕಹಿ ಘಟನೆ ಮರೆಯಲಾಗದು

ಜಿಲ್ಲಾ ಸುದ್ದಿ

*ದೇಶ ವಿಭಜನೆಯ ಕಹಿ ಘಟನೆ ಮರೆಯಲಾಗದು*

*ಉಪವಿಭಾಗಧಿಕಾರಿ ಆರ್.ಚಂದ್ರಯ್ಯ*

ಚಿತ್ರದುರ್ಗ(ಕರ್ನಾಟಕ ವಾರ್ತೆ).ಆ.12: ಸ್ವಾತಂತ್ರ್ಯ ಹೊಸ್ತಿಲಲ್ಲಿ ಇರುವಾಗ ದೇಶ ವಿಭಜನೆಯಾಗಿ ಕೋಟ್ಯಾಂತರ ಜನರು ವಲಸೆ ಹೋಗುವ ಸಂದರ್ಭ ಎದುರಾಯಿತು. ಮನುಕುಲದ ಇತಿಹಾಸದಲ್ಲಿ ಜರುಗಿದ ಅತಿದೊಡ್ಡ ಮಾನವ ವಲಸೆ ಇದಾಗಿದೆ. ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕೋಟ್ಯಾಂತರ ಜನರು ಆಸ್ತಿ, ಆಸರೆ, ಮಾನಗಳನ್ನು ಕಳೆದುಕೊಂಡು ನಿರ್ಗತಿಕರಾದರು. ಇತಿಹಾಸ ಪುಟಗಳಗಲ್ಲಿ ದಾಖಲಾದ ಈ ಕಹಿ ಘಟನೆಯನ್ನು ಮರೆಯಲಾಗದು ಎಂದು ಉಪವಿಭಾಗಧಿಕಾರಿ ಆರ್.ಚಂದ್ರಯ್ಯ ಹೇಳಿದರು.

 

 

 

ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಶುಕ್ರವಾರ ಆಜಾದಿ ಕ ಅಮೃತ ಮಹೋತ್ಸವ ಹಿನ್ನಲೆಯಲ್ಲಿ ಚಿತ್ರದುರ್ಗ ಜಿಲ್ಲಾಡಳಿತ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಲಾದ ದೇಶ ವಿಭಜನೆಯ ಕರಾಳತೆ ಬಿಂಬಿಸುವ ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ದೇಶ ವಿಭಜನೆಯಲ್ಲಿ ಮೃತರಾದವರು, ಸಂಕಷ್ಟ ಸಿಲುಕಿದವರು, ಅನಾಥರಾದವರ ಮೇಲಿನ ಸಹಾನುಭೂತಿ, ಹಾಗೂ ಅವರ ತ್ಯಾಗ ಬಲಿದಾನಗಳ ಗೌರವಾರ್ಥವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯರು ಆಗಸ್ಟ್ 14 ತಾರೀಖನ್ನು ದೇಶ ವಿಭಜನೆಯ ಕರಾಳ ದಿನವಾಗಿ ಆಚರಿಸಲು ಕರೆ ನೀಡಿದ್ದಾರೆ. ದೇಶ ವಿಭಜನೆಯ ಘೋರತೆಯನ್ನು ನೆನಪಿಸುವ ಹಾಗೂ ಬಿಂಬಿಸುವ ಛಾಯಚಿತ್ರ ಮತ್ತು ಪತ್ರಿಕಾ ವರದಿಗಳಿರುವ ಕಿರು ಹೊತ್ತಿಗೆಯನ್ನು ಕೇಂದ್ರ ಸರ್ಕಾರ ಬಿಡಿಗಡೆಮಾಡಿದೆ. ಈ ಕಿರು ಹೊತ್ತಿಗೆಯ ಪುಟಗಳನ್ನು ದೊಡ್ಡದಾಗಿ ಮುದ್ರಿಸಿ ಜಿಲ್ಲೆಯ ಸಾರ್ವಜನಿಕ ಸ್ಥಳಗಳಲ್ಲಿ ಆಗಸ್ಟ್ 15 ವರೆಗೆ ಪ್ರದರ್ಶಿಸಲಾಗುತ್ತಿದೆ. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಇತಿಹಾಸ ಶಿಕ್ಷಕರಿಂದ ದೇಶ ವಿಭಜನೆಯ ಇನ್ನೂ ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳಬೇಕು ಎಂದು ಕರೆ‌ ನೀಡಿದರು.

ಈ ಸಂದರ್ಭದಲ್ಲಿ ವಾರ್ತಾ ಇಲಾಖೆಯ ಸಿಬ್ಬಂದಿಗಳಾದ ವೇಣುಗೋಪಾಲ.ಪಿ.ಎಂ, ವೆಂಕಟೇಶ್, ಚಂದ್ರಶೇಖರ್, ಬೋರಶ್, ಅಂಜನಮೂರ್ತಿ, ಪ್ರಶಿಕ್ಷಣಾರ್ಥಿಗಳಾದ ಆನಂದ, ಲಕ್ಷ್ಮೀಪತಿ ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಸಾರ್ವಜನಿಕರು ಉಪಸ್ಥಿತರದ್ದರು.

Leave a Reply

Your email address will not be published. Required fields are marked *