ಅಕ್ರಮ ಮರಳು ಸಾಗಾಟಕ್ಕೆ ಕಡಿವಾಣ ಹಾಕಿ: ಗ್ರಾಮಸ್ಥರಿಂದ ರಸ್ತೆ ತಡೆದು ಪ್ರತಿಭಟನೆ

ಆರೋಗ್ಯ

ಅಕ್ರಮ ಮರಳು ಸಾಗಾಣಿಕೆಗೆ ಕಡಿವಾಣ ಹಾಕಬೇಕು ಎಂದು‌ ಒತ್ತಾಯಿಸಿ ಓಬಳಾಪುರ ರಸ್ತೆ ಬಂದ್ ಮಾಡಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

 

 

 

ಹೀಗೆ ರಸ್ತೆಗೆ ಅಡ್ಡಲಾಗಿ ಕುರಿತು ಓಬಳಾಪುರ ಚಳ್ಳಕೆರೆ ರಸ್ತೆಯನ್ನು ಬಂದ್ ಮಾಡಿದ್ದ ಗ್ರಾಮಸ್ಥರನ್ನು ಮನವೊಲಿಸಿ ಸಂಚಾರ ವ್ಯವಸ್ಥೆಗೆ ತಹಸಿಲ್ದಾರ್ ಎನ್ ರಘುಮೂರ್ತಿ ಅನುವು ಮಾಡಿಕೊಟ್ಟರು ಈ ರಸ್ತೆಯಲ್ಲಿ 24*7 ಅಕ್ರಮ ಮರಳಿನ ಲಾರಿಗಳು ಓಡಾಟ ಮಾಡುತ್ತಿದ್ದು ಈ ಲಾರಿಗಳು ಗ್ರಾಮದ ಮುಖಾಂತರ ಸಂಚರಿಸಿ ಎಲ್ಲೆಂದರಲ್ಲಿ ರಸ್ತೆಗಳು ಹಾಳಾಗಿದ್ದು ಗ್ರಾಮದ ಮಕ್ಕಳಿಗೆ ಹಿರಿಯ ನಾಗರೀಕರಿಗೆ ಧೂಳು ಮತ್ತು ಮಾಲಿನ್ಯ ಉಂಟಾಗಿದ್ದರಿಂದ ಅನೇಕರು ಕಾಯಿಲೆಗೆ ತುತ್ತಾಗಿ ಆಸ್ಪತ್ರೆ ಸೇರಿದ್ದಾರೆ. ಇಡೀ ಗ್ರಾಮದ ನಾಗರೀಕರಿಗೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ, ರಸ್ತೆಯನ್ನು ದುರಸ್ತಿ ಪಡಿಸಿ ಅಕ್ರಮ ಮರಳು ಸಾಗಾಣಿಕೆಗೆ ಕಡಿವಾಣ ಹಾಕುವವರೆಗೆ ಯಾವುದೇ ವಾಹನವನ್ನು ಓಡಾಡಲು ಬಿಡುವುದಿಲ್ಲವೆಂದು ಗ್ರಾಮಸ್ಥರು ಸಂಚಾರಕ್ಕೆ ಅಡ್ಡಿಪಡಿಸಿ ಮುಷ್ಕರ ಹೂಡಿದ್ದರು, ವಿಷಯ ತಿಳಿದ ತಹಶಿಲ್ದಾರ್ ಎನ್ ರಘುಮೂರ್ತಿ ಸ್ಥಳಕ್ಕೆ ಆಗಮಿಸಿ ರಸ್ತೆ ಕಾಮಗಾರಿಯನ್ನು ನಿರ್ವಹಿಸುತ್ತಿರುವ ಗುತ್ತಿಗೆದಾರರನ್ನು ಕರೆಸಿ ತರಾಟೆಗೆ ತೆಗೆದುಕೊಂಡರು ನಾಳೆ ಬೆಳಿಗ್ಗೆ ಎಂಟು ಗಂಟೆಗೆ ಕಾಮಗಾರಿ ಪ್ರಾರಂಭಿಸುವಂತೆ ಸೂಚಿಸಿದರು. ಸಂಬಂಧಿಸಿದ ಗುತ್ತಿಗೆದಾರರು ನಾಳೆ ಬೆಳಗ್ಗೆ 8:00 ಗಂಟೆಗೆ ಕೆಲಸ ಪ್ರಾರಂಭಿಸುವುದಾಗಿ ಭರವಸೆ ಕೊಟ್ಟ ಮೇಲೆ ಮುಷ್ಕರ ನಿರತ ಗ್ರಾಮಸ್ಥರು ಪ್ರತಿಭಟನೆ ಕೈಬಿಟ್ಟರು ಯಾವುದೇ ಕಾರಣಕ್ಕೂ ಕಾನೂನನ್ನು ಕೈಗೆತ್ತಿಕೊಳ್ಳಬಾರದೆಂದು ಗ್ರಾಮಸ್ಥರಲ್ಲಿ ತಹಶೀಲ್ದಾರ್ ಮನವಿ ಮಾಡಿದರು

Leave a Reply

Your email address will not be published. Required fields are marked *