Chitradurga pancha peetagala odaku

ಪಂಚ ಪೀಠಗಳ ಒಡಕು ಬೀದಿಗೆ

ಆರೋಗ್ಯ

ಬಳ್ಳಾರಿ: ಮಠ ಪೀಠಗಳಲ್ಲಿ ಅತ್ಯಂತ ಖ್ಯಾತಿಯನ್ನು ಪಡೆದಿರುವ ಪಂಚ ಪೀಠಗಳ  ಸ್ವಾಮೀಜಿಗಳಲ್ಲಿ ಒಡಕು ಉಂಟಾಗಿದ್ದು,  ಉಜ್ಜಿನಿ ಪೀಠಕ್ಕೆ ಹೊಸಬರ ನೇಮಕದ ವಿವಾದದಿಂದ ಆಂತರಿಕ ಜಗಳ ತಾರಕಕ್ಕೇರಿದೆ.Chitradurga pancha peetagala odaku
ಗಣಿ ನಾಡು  ಬಳ್ಳಾರಿ ಜಿಲ್ಲೆಯ ಕೊಟ್ಟೂರು ತಾಲೂಕಿನ ಇತಿಹಾಸ ಹಾಗೂ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಉಜ್ಜಿನಿ  ಪೀಠಕ್ಕೆ ಹೊಸ ಪೀಠಾಧಿ ಪತಿ ನೇಮಕ ಮಾಡಲಾಗುತ್ತದೆ. ಎಂದು ಗದಗದಲ್ಲಿ  ಹೇಳಿಕೆ ನೀಡಿದ್ದ ರಂಭಾಪುರಿ ಸ್ವಾಮೀಜಿ ವಿರುದ್ಧ ಭಕ್ತರು  ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇವರ ಧ್ವನಿಗೆ ಇದೀಗ ಪಂಚ ಪೀಠಗಳ ಇನ್ನಿತರೇ ಸ್ವಾಮೀಜಿಗಳು ಅಸಮಧಾನವನ್ನು ಬಹಿಂಗವಾಗಿಯೇ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ಪಂಚ ಪೀಠಗಳಲ್ಲಿ   ಅಸಮಾಧಾನದ ಹೊಗೆಯಾಡುತ್ತಿದೆ. ಈಗಾಗಲೇ ಒಬ್ಬ ಸ್ವಾಮೀಜಿ ಇದ್ದರೂ, ಮತ್ತೊಬ್ಬ ಸ್ವಾಮೀಜಿಯನ್ನು ನೇಮಕ ಮಾಡುವುದಾಗಿ  ರಂಭಾಪುರಿ ಶ್ರೀಗಳು  ಹೇಳಿಕೆ ನೀಡಿರುವುದನ್ನು ವಿರೋಧಿಸಿ ಉಜ್ಜಿನಿಯ ಭಕ್ತರು   ಹಾಲಿ ಇರುವ ಶ್ರಿ ಸಿದ್ದಲಿಂಗ ಸ್ವಾಮೀಜಿಗಳನ್ನೆ ಮುಂದುವರೆಸುವಂತೆ ಒತ್ತಾಯಿಸಿದ್ದಾರೆ.2011 ರಲ್ಲಿ  ಅಂದು ಕೇದಾರ , ಶ್ರೀ ಶೈಲ ರಂಭಾಪುರಿ ಸ್ವಾಮೀಜಿಗಳ ಮುಂದಾಳತ್ವದಲ್ಲಿ ಸಿದ್ದಲಿಂಗ ಸ್ವಾಮೀಜಿಗಳನ್ನು ನೇಮಕ‌ ಮಾಡಲಾಗಿತ್ತು.

Chitradurga pancha peetaga odaku

ಆದರೆ ಇಂದು  ರಂಭಾಪುರಿ ಶ್ರೀಗಳು ಗದಗಿನ ಮುಕ್ತಿ ಮಂದಿರದಲ್ಲಿ  ನಡೆದ ಸಭೆಯಲ್ಲಿ ಕೊಟ್ಟೂರು ಉಜ್ಜಿನಿ ಪೀಠಕ್ಕೆ ತ್ರಿಲೋಚನಾ  ಸ್ವಾಮೀಜಿ ಅವರನ್ನು   ನೂತನವಾಗಿ   ನೇಮಕ ಮಾಡುವ ಇಚ್ಚೆಯನ್ನು ವ್ಯಕ್ತಪಡಿಸಿದ್ದರು. ಇದರ ವಿರುದ್ಧ ಭಕ್ತರು ವಿಡಿಯೋ  ಮಾಡಿ ಸಮಾಜಿಕ ಜಾಲ ತಾಣಗಳಲ್ಲಿ   ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಇದರ ಜೊತೆಗೆ ಪಂಚ ಪೀಠಗಳಲ್ಲಿ  ಪ್ರಮುಖವಾಗಿರುವ ರಂಭಾ
ಪುರಿ ಹಾಗೂ ಕೇದಾರ ಶ್ರೀಗಳ ವಿರುದ್ದ ಕಾಶಿ ಜಗದ್ಗುರುಗಳು  ಅಸಮಧಾನ ವ್ಯಕ್ತಪಡಿಸಿದ್ದು, ಇಬ್ಬರು ಶ್ರೀಗಳು ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ. ಒಕ್ಕೂಟದ ವ್ಯವಸ್ಥೆಯನ್ನು ಹಾಳು  ಮಾಡುತ್ತಿದ್ದಾರೆ. ಎಂದು ಗಂಭೀರ ಆರೋಪ ಮಾಡಿದ್ದಾರೆ. ಇರ್ವರು ಶ್ರೀಗಳು  ಈ ರೀತಿ ಮಾಡೋದು ಸರಿಯಲ್ಲ.  ಈ ಹಿಂದೆ ನಡೆದ ಘಟನೆಗಳ ಕುರಿತು  ಮರೆಯಬಾರದು, ನಾವು ಮರೆತಿಲ್ಲ  ಅವರು ಈ ರೀತಿ ಹೇಳಿಕೆಗಳನ್ನ ನೀಡಿ  ಗೊಂದಲ ಮೂಢಿಸುವುದು ಸರಿಯಲ್ಲ.ಆದ ಒಪ್ಪಂದಗಳ ಏನಿವೆ. ಎಂದು ಉಜ್ಜಿನಿ ಪೀಠದ  ಶ್ರೀಗಳ ನೇಮಕದ  ವಿಚಾರದ ಬಾಂಡ್ ಗಳು, ಒಪ್ಪಂದದ  ಪತ್ರಗಳ ಬಿಡುಗಡೆಯನ್ನು ಕಾಶಿ ಜಗದ್ಗುರುಗಳು ಬಹಿರಂಗವಾಗಿ  ಹೇಳಿಕೆ ನೀಡಿರೋದು ಚರ್ಚೆಗೆ ಗ್ರಾಸವಾಗಿದೆ. ಇದರ ಬೆನ್ನಲ್ಲೆ ರಾಜಕೀಯವೂ ಎಂಟ್ರಿಯಾಗಿದೆ.

 

 

 

Chitradurga pancha peetaga odaku

ಅಂದರೆ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು, ಬಳ್ಳಾರಿ ಸಂಸದ ದೇವೇಂದ್ರಪ್ಪ, ಬಳ್ಳಾರಿ ಉಸ್ತುವಾರಿ ಸಚಿವ  ಆನಂದ್ ಸಿಂಗ್, ಬಿಜೆಪಿ ಜಿಲ್ಲಾಧ್ಯಕ್ಷ ಚೆನ್ನಬಸವನಗೌಡ,  ಸೇರಿದಂತೆ ಹಲವು ನಾಯಕರು ಉಜ್ಜಿನಯ ಸದ್ಧರ್ಮ ಪೀಠಕ್ಕೆ  ಭೇಟಿ‌ ನೀಡಿ ಉಜ್ಜಿನಿಯ ಶ್ರೀಗಳಿಂದ ಆಶೀರ್ವಾದ ಪಡೆದು  ಶ್ರೀಗಳಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಪೀಠಗಳ ಒಳ ಜಗಳ ಯಾವ ಹಂತಕ್ಕೆ ಹೋಗುತ್ತದೆಯೋ ಎಂದು ಕಾದು ನೋಡಬೇಕು.

ಸಂಯುಕ್ತವಾಣಿ

ಡಿ.ಕುಮಾರಸ್ವಾಮಿ

Leave a Reply

Your email address will not be published. Required fields are marked *