ಕಬ್ಬಡ್ಡಿ ಆಟದಲ್ಲಿ ಹೆಚ್ಚು ಭಾಗವಹಿಸಬೇಕು

ರಾಜ್ಯ

ಕಬಡ್ಡಿ ಆಟದಲ್ಲಿ ವಿಜಯಶಾಲಿಗಳಾಲಿ ಎಂದು ದಯಾನಂದ ಪಟ್ಟಣಶೆಟ್ಟಿ ಅವರಿಂದ ಶುಭ ಹಾರೈಕೆ

 

 

 

ಹುಣಸಗಿ: ಕಬ್ಬಡ್ಡಿ ಆಟ ಎಂಬುದು ನಮ್ಮ ಭಾಗದಲ್ಲಿ ಬಲಾಶಾಲಿ ಆಟವೆಂದೇ ಗುರುತಿಸಿಕೊಂಡಿದೆ ಹಾಗಾಗಿ ನಮ್ಮ ತಾಲೂಕಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳು ಕಬಡ್ಡಿ ಆಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವುದು ಅತ್ಯಂತ ಸಂತೋಷದಾಯಕವಾಗಿದೆ ಎಂದು ಪಟ್ಟಣದ ಉದ್ಯಮಿ ಹಾಗೂ DS Max ಕಂಪನಿಯ ಸಂಸ್ಥಾಪಕಾರದ ದಯಾನಂದ ಪಟ್ಟಣಶೆಟ್ಟಿ ಹೇಳಿದರುತಾಲೂಕಿನ ಸಮೀಪದ ವಜ್ಜಲ ಗ್ರಾಮದ ನಿವಾಸಿಗಳು ಹಾಗೂ ಬೆಂಗಳೂರಿನ ಟಿ.ಎಸ್ ಮ್ಯಾಕ್ಸ್‌‌ ಕಂಪನಿಯ ಸಂಸ್ಥಾಪಕರು ಆದ ದಯಾನಂದ ಪಟ್ಟಣಶೆಟ್ಟಿ ಅವರು ಇಂದು ಹುಣಸಗಿ ಪಟ್ಟಣದಲ್ಲಿನ ಅವರ ನಿವಾಸದಲ್ಲಿರುವ ವಿಷಯವನ್ನು ತಿಳಿದು ಇಂದು ಸಾಯಂಕಾಲ ಅವರ ನಿವಾಸದಲ್ಲಿ ಎಮ್ ಡಿ ಆರ್ ಎಸ್ ಹುಣಸಗಿ ಶಾಲಾ ಮಕ್ಕಳ್ಳೊಂದಿಗೆ ಶಾಲಾ ಸಿಬ್ಬಂಧಿಗಳ ಭೇಟಿ ಮಾಡಿ ಸನ್ಮಾನಿಸಲಾಯಿತು. ಈ ವೇಳೆ ಮಾತನಾಡಿದ ಅವರು ಇಂದು ನಮ್ಮ ದೇಶದ ಗಂಡು ಮಕ್ಕಳಿಗೆ ಅತ್ಯಂತ ಬಲಿಷ್ಟ ಆಟವೆಂದರೆ ಅದು ಕಬಡ್ಡಿ ಆಟ ಈ ಒಂದು ಆಟದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳು ಕಬಡ್ಡಿ ಆಟದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದು ನಮ್ಮ ತಾಲೂಕಿಗೆ ಹಾಗೂ ಶಾಲೆ ಶಿಕ್ಷಕರಿಗೆ ಸಂದ ಗೌರವವಾಗಿದೆ ಇಂತಹ ಆಟಗಳಲ್ಲಿ ವಿದ್ಯಾರ್ಥಿಗಳು ಇನ್ನೂ ಹೆಚ್ಚು ಹೆಚ್ಚು ಭಾಗವಹಿಸಬೇಕು ಎಂದು ಹೇಳುವ ಮೂಲಕ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ತಿಳಿಸಿ. ರಾಜ್ಯ ಮಟ್ಟದ ಪಂದ್ಯದಲ್ಲೂ ವಿಜಯಶಾಲಿಯಾಗಿ ಬರುವಂತೆ ಶುಭ ಹಾರೈಸಿದರು ಇದಲ್ಲದೇ ರಾಜ್ಯಮಟ್ಟಕ್ಕೆ ಹೋಗಿ ಆಟವಾಡಿ ಬರಲು ವಿದ್ಯಾರ್ಥಿಗಳಿಗೆ ಬೇಕಾದ ಅಗತ್ಯ ಸಹಕಾರ ನೀಡುವದಾಗಿ ತಿಳಿಸಿದ್ದಾರೆ ಎಂದು ಶಾಲೆಯ ಸಿಬ್ಬಂದಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕ.ರ.ವೇ ರಾಜ್ಯಾಧ್ಯಕ್ಷ ಶ್ರೀ ಬಸವರಾಜ್ ಪಡುಕೋಟೆ, ಅಶೋಕ್ ಟಿ ಎಚ್, ದೈಹಿಕ ಶಿಕ್ಷಕರಾದ ಗೌಸ್ ಪಟೇಲ್, ನಿಲಯಪಾಲಕರಾದ ರಾಘುವೀರ ಬಡಿಗೇರ್, ದೈಹಿಕ ಶಿಕ್ಷಕರಾದ ಬೈಲಪ್ಪ ನಾಗನಟಗಿ ಹಾಗೂ ಕಬಡ್ಡಿ ಆಟಗಾರರು ಆದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *