ರಾಜಕಾರಣಕ್ಕಾಗಿ ದಾನ‌ ಮಾಡುವವರು ಜನ ನಾಯಕರಲ್ಲ : ಶ್ರೀ ಶ್ರೀ ಇಮ್ಮಡಿ ‌ಸಿದ್ದರಾಮೇಶ್ವರ ಸ್ವಾಮೀಜಿ

ಜಿಲ್ಲಾ ಸುದ್ದಿ

ಚಿತ್ರದುರ್ಗ:ಚುನಾವಣೆಗಾಗಿ ಸೇವೆ ಮಾಡುವ ರಾಜಕಾರಣಿಗಳು ಇದ್ದಾರೆ. ಚುನಾವಣೆ ಮುಗಿದ ನಂತರ ಸೇವೆ ಮಾಡುವವರು ನೈಜ ಜನನಾಯಕರು ಎಂದು ಭೋವಿ ಮಠದ ಇಮ್ಮಡಿ‌ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.

Chitradurga Bhovi swamji apperciation

ಸಂಕಷ್ಟಕಾಲದಲ್ಲಿ ಸಹಕಾರ ಮಾಡಿ ಸಾಂತ್ವನ ಹೇಳಿದ ಮಠದಹಟ್ಟಿ ಗ್ರಾಮ ಪಂಚಾಯ್ತಿ ಸದಸ್ಯರ ಕಾರ್ಯವನ್ನು ಶ್ಲಾಘಿಸಿದ ಸ್ವಾಮೀಜಿ,
ಕೋರೋನಾ ವಿಷಮ ಗಳಿಗೆಯಲ್ಲಿ, ಸೇವೆಯಲ್ಲಿ ಮಾದರಿ ಗ್ರಾಮ ಪಂಚಾಯತ್ ಸದಸ್ಯರಾದ, ಮಠದಹಟ್ಟಿ ಗ್ರಾಮಪಂಚಾಯ್ತಿ ಸದಸ್ಯರುಗಳಿಗೆ ಅಭಿನಂದನಾ ಸಮಾರಂಭವನ್ನು ಭೋವಿ ಗುರುಪೀಠದಲ್ಲಿ ಅಭಿನಂಧಿಸಿದರು.
ಕೊರೋನಾ 2 ನೇ ಅಲೆಯ ವಿಪತ್ತಿನ ಸಮಯದಲ್ಲಿ ತೊಂದರೆಗೆ ಒಳಗಾಗಿದ್ದ ಮಠದಕುರುಬರಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾವಿರಾರು ಬಡಕುಟುಂಬಗಳಿಗೆ
ವಿವಿಧ ದಾನಿಗಳಾದ ಶ್ರೀ ಮುರುಘಾಶ್ರಿಗಳು, ಶ್ರೀ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಶ್ರೀ ಶಿವಶರಣ ಮಾದಾರ ಚೆನ್ನಯ್ಯ ಸ್ವಾಮೀಜಿ,, ಶ್ರೀ ಮಾಚಿದೇವ ಸ್ವಾಮೀಜಿ ಯೋಗವನ ಬೆಟ್ಟ ಸ್ವಾಮೀಜಿಗಳು, ಶಾಸಕ ತಿಪ್ಪಾರೆಡ್ಡಿ, ಬಿಜೆಪಿ ಮುಖಂಡ ಆನಂದಪ್ಪ ಇನ್ನಿತರರ ಸಹಕಾರ ಪಡೆದುಕೊಂಡು ಆಹಾರಧಾನ್ಯಗಳ ಕಿಟ್ ವಿತರಿಸುವ ಮೂಲಕ ಹಸಿವುಮುಕ್ತ ಗ್ರಾಮ ಪಂಚಾಯತ್ ಮಾಡುವ ಪ್ರಯತ್ನದಲ್ಲಿ ಸಫಲವಾಗಿದ್ದಾರೆ.

 

 

 

ಮಠದಹಟ್ಟಿಯ ಬಡಕುಟುಂಬಗಳು ಅತೀವ ಸಂಕಷ್ಟಕ್ಕೆ ಒಳಗಾಗಿವೆ, ಇಂತಹ ಕುಟುಂಬಗಳನ್ನು ಗ್ರಾಮ ಪಂಚಾಯತ್ ಸದಸ್ಯರು ವಿವಿಧ ದಾನಿಗಳ ಸಹಾಯದಿಂದ ಗುರುತಿಸಿ ಅವರ ಮನೆ ಬಾಗಿಲಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಗ್ರಾಮ ಪಂಚಾಯತ್ ಸದಸ್ಯರುಗಳು ಮನೆ-ಮನೆಗೆ ಭೇಟಿ ನೀಡಿ ಅವರ ಅಗತ್ಯತೆಯನ್ನು ತಿಳಿದುಕೊಂಡು ದಾನಿಗಳ ಮೂಲಕ ದವಸ-ಧಾನ್ಯಗಳ ಕಿಟ್‌ಅನ್ನು ವಿತರಿಸಿದ್ದಾರೆ. ಮನೆ ಬಾಗಿಲಿಗೆ ಬಂದು ಯೋಗಕ್ಷೇಮ ವಿಚಾರಿಸಿ ಆಹಾರ ಧಾನ್ಯಗಳನ್ನು ವಿತರಿಸುವ ಗ್ರಾಮ ಪಂಚಾಯತ್ ಸದಸ್ಯರುಗಳು ಹಾಗೂ ಪಿಡಿಒ ಕಾರ್ಯಕ್ಕೆ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮುಕ್ತ ಕಂಠದಿಂದ
ಶ್ಲಾಘಿಸಿದ್ದಾರೆ.

ಅಧ್ಯಕ್ಷರಾದ ಶ್ರೀಮತಿ ಗೀತಾ, ಉಪಾಧ್ಯಕ್ಷರಾದ ನಿಂಗಪ್ಪ, ಸದಸ್ಯರುಗಳಾದ ರಾಮಾಂಜನೇಯ, ಶ್ರೀಮತಿ ಸವಿತಾ, ಗಣೇಶ, ಶ್ರೀಮತಿ ಯಶೋಧಮ್ಮ, ಬಯ್ಯಣ್ಣ, ಇನ್ನಿತರರು ಉಪಸ್ಥಿತಿಯಿದ್ದರು.

ಸಂಯುಕ್ತವಾಣಿ

Leave a Reply

Your email address will not be published. Required fields are marked *