ಪ್ರತಿಯೊಬ್ಬರ ಮನೆ ಮತ್ತು ಮನದಲ್ಲಿ ಸ್ವಾತಂತ್ರ್ಯದ ಕಹಳೆ ಮೊಳಗಬೇಕಾಗಿದೆ.

ಜಿಲ್ಲಾ ಸುದ್ದಿ

ದೇಶದ ಸ್ವಾತಂತ್ರ್ಯದಲ್ಲಿ ಕರ್ನಾಟಕದ ಬಹು ಪಾಲು ಇದ್ದು, ಚಿತ್ರದುರ್ಗದ ಕೊಡುಗೆಯೂ ಇದೆ ಎಂದು ತಹಶೀಲ್ದಾರ್ ರಘುಮೂರ್ತಿ ಹೇಳಿದರು.
ಅವರು ನಾಯಕನಹಟ್ಟಿಯಲ್ಲಿ ಅಮೃತ ಭಾರತಿ ಕನ್ನಡದಾರತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 75 ನೇ ಸ್ವಾತಂತ್ರ್ಯವನ್ನು ಅಮೃತ ಮಹೋತ್ಸವವನ್ನಾಗಿ ವಿಶೇಷವಾಗಿ ಆಚರಿಸುವ ಸಂಕಲ್ಪ ಮಾಡಲಾಗಿದೆ. 13 ರಿಂದ 15 ರವೆರೆಗೆ ಮನೆಯ ಮೇಲೆ ತಿರಂಗವನ್ನು ಹಾರಿಸಬೇಕು,ಇಂತಹ ಒಂದು ವೈವಿದ್ಯಮಯ ಕಾರ್ಯಕ್ರಮವನ್ನು ನಾವು ಇಲ್ಲಿ‌ ಹಮ್ಮಿಕೊಂಡಿದ್ದೇವೆ.

 

 

 

ಮದಕರಿನಾಯಕ, ಒನಕೆ ಓಬವ್ವ, ಕಿತ್ತೂರು ರಾಣಿ ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಹೀಗೆ ಹತ್ತು ಹಲವಾರು ಹುತಾತ್ಮರಿದ್ದಾರೆ, ಇವರೆಲ್ಲರೂ ಬ್ರಿಟಿಷರ ವಿರುದ್ಧ ಹೋರಾಡಿ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದ್ದಾರೆ. ಪ್ರತಿಯೊಬ್ಬರ ಮನೆ ಮತ್ತು ಮನದಲ್ಲಿ ಸ್ವಾತಂತ್ರ್ಯದ ಕಹಳೆ ಮೊಳಗಬೇಕಾಗಿದೆ. ಇದಕ್ಕಾಗಿ ನಾವೆಲ್ಲರೂ ಧೀಕ್ಷೆಯನ್ನು ಪಡೆದು ಕಂಕಣ ಬದ್ದರಾಗಬೇಕಾಗಿದೆ. ಇದಕ್ಕಾಗಿ ನಾವು ತಾಲೂಕಿನಲ್ಲಿ 13,14 ಮತ್ತು ವಿಶೇಷ ಕಾರ್ಯ ಕ್ರಮಗಳನ್ನು ಆಯೋಜಿಸಲಾಗಿದೆ. ಚಳ್ಳಕೆರೆಯಲ್ಲಿ 13 ರಂದು ಒಂದು ಕೀಲೋ‌ಮೀಟರ್ ರಾಷ್ಟ್ರ ಧ್ವಜವನ್ನು ಪ್ರದರ್ಶನ ಮಾಡಲಾಗುತ್ತದೆ. 14 ರಂದು ನಾಯಕನಹಟ್ಟಿ ಭಾವುಟದ ಪ್ರದರ್ಶನ ನಡೆಯಲಿದೆ. ಹಾಗೆಯೇ ಭಾರತಾಂಬೆಗೆ ಒಂದು ಸಾವಿರ ಬೈಕ್ ಗಳ ಮೂಲಕ ರ್ಯಾಲಿಯನ್ನು ಮಾಡಿ ಅದನ್ನು ಅರ್ಪಿಸಲಾಗುತ್ತದೆ. ಹೀಗೆ ಮೂರು ದಿನಗಳ ಕಾಲ ವೈವಿದ್ಯಮಯ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತದೆ.‌ಇದೇ ರೀತಿ‌ ನಾಯಕನಹಟ್ಟಿಯ ಪ್ರತಿ ಮನೆಗೂ ಕೂಡ ರಾಷ್ಟ್ರ ಧ್ವಜವನ್ನು ಕೊಡಲಾಗುತ್ತದೆ.‌ಇದನ್ನು ತಮ್ಮ ಮನೆಗಳ‌ ಮೇಲೆ ಹಾರಿಸುವ ಮೂಲಕ ರಾರಾಜಿಸಬೇಕು. ಇದರ ಮೂಲಕ ತ್ಯಾಗ ಬಲಿದಾನಗಳ‌ ಮೂಲಕ ಸ್ವಾತಂತ್ರ್ಯ ತಂದು ಕೊಟ್ಟವರನ್ನು ಸ್ಮರಿಸುತ್ತ ಸ್ವಾತಂತ್ರ್ಯವನ್ನು ಆಚರಿಸೋಣ ಎಂದು ಹೇಳಿದರು.

Leave a Reply

Your email address will not be published. Required fields are marked *