ಕಾಂಗ್ರೆಸ್ ನ ಹತ್ತು ಅಂಶಗಳು ಯಾವು ? ಇವು ಚುನಾವಣೆ ಪ್ರಾಣಾಳಿಕೆಯೇ?

ಆರೋಗ್ಯ

ಎಸ್ಸಿ ಎಸ್ಟಿ‌ ಸಮಾವೇಶದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಹತ್ತು ಅಂಶಗಳನ್ನು ಸಭೆಗೆ ಓದಿ ತಿಳಿಸಿದ್ದು, ಅವುಗಳು ಕಾಂಗ್ರೆಸ್ ನ ಪ್ರಣಾಳಿಕೆಯೇ ಎಂಬ ಕುತೂಹಲ ಮೂಡಿಸಿವೆ. ಹತ್ತು ಅಂಶಗಳು ಇಲ್ಲಿವೆ ನೋಡಿ..
ಎಸ್ ಸಿ ಎಸ್ ಟಿ ಜನಾಂಗದವರಾದ ನಮಗೆ ನೀಡುವ ಮೀಸಲಾತಿ ಭಿಕ್ಷೆ ಅಲ್ಲ ಅದು ನಮ್ಮ ಹಕ್ಕು ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಲು ಡಾ. ಬಿ ಆರ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಪ್ರತಿಪಾದಿಸಿರುತ್ತಾರೆ. ಆ ಕಾರಣದಿಂದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಹೆಚ್ಚಿಸಬೇಕೆಂದು ಎಸ್ ಸಿ ಎಸ್ ಟಿ ಸಮುದಾಯಗಳ ಹೋರಾಟದಕಾರಣದಿಂದ ನ್ಯಾಯಮೂರ್ತಿನಾಗಮೋಹನ್ ದಾಸ್ ಸಮಿತಿಯನ್ನು ನಮ್ಮ ಸರ್ಕಾರ ರಚನೆ ಮಾಡಲಾಗಿತ್ತು. ಸದರಿ ಸಮಿತಿಯು ಸೂಕ್ತ ಮಾಹಿತಿ ಸಂಗ್ರಹಣೆ ಮತ್ತು ನಡವಳಿಗಳನ್ನು ನಡೆಸಿ ದಿನಾಂಕ 27 2020 ರಂದು ಸರ್ಕಾರಕ್ಕೆ ವರದಿಯನ್ನು ನೀಡಲಾಗಿತ್ತು ಆ ವರದಿಯಲ್ಲಿ ಎಸ್ ಸಿ ಮೀಸಲಾತಿಯನ್ನು 15% ರಿಂದ 17% ಹಾಗೂ ಎಸ್ ಟಿ ಮೀಸಲಾತಿಯನ್ನು 100% ರಿಂದ 7% ಗೆ ಹೆಚ್ಚಿಸಿ ಕಾಯ್ದೆ ರೂಪಿಸಬೇಕು ಹಾಗೂ ಆ ಕಾಯ್ದೆಯನ್ನು ಸಂವಿಧಾನದ 9ನೇ ಶೆಡ್ಯೂಲ್ ಗೆ ಸೇರಿಸಬೇಕೆಂದು ಶಿಫಾರಸ್ಸು ಮಾಡಲಾಯಿತು. ಆದರೆ ಅಧಿಕಾರದಲ್ಲಿರುವ ಭಾರತೀಯ ಜನತಾ ಪಾರ್ಟಿಯ ರಾಜ್ಯ ಸರ್ಕಾರ ಉದ್ದೇಶ ಪೂರ್ವಕವಾಗಿ ಆ ವರದಿಯ ಮೇಲೆ ಮೂರು ವರ್ಷಗಳ ಕಾಲ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಈ ವಿಚಾರವಾಗಿ ನಮ್ಮ ಪಕ್ಷ ಅನೇಕ ಸಾರಿ ಕ್ರಮ ಜರುಗಿಸಲು ಒತ್ತಾಯ ಮಾಡಿದ್ದರೂ, ಮುಖ್ಯ ಮಂತ್ರಿ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರವಾಗಲಿ ಅಥವಾ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವಾಗಲಿ, ಆ ವರದಿಯನ್ನು ಪರಿಗಣಿಸಿ ಮೀಸಲಾತಿ ಹೆಚ್ಚಿಸಲಿಲ್ಲ. ಆದರೆ ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮೀಸಲಾತಿಯನ್ನು ಹೆಚ್ಚಿಸಲು ಇತ್ತೀಚಿಗೆ ಕಾನೂನನ್ನು ರೂಪಿಸಿರುತ್ತಾರೆ, ಹೊರತು ಆ ಕಾಯ್ದೆಯನ್ನು ಸಂವಿಧಾನದ 9ನೇ ಶೆಡ್ಯೂಲ್ ಗೆ ಸೇರಿಸಲು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಕೆಲಸವೇ ಹೊರತು ನ್ಯಾಯ ನೀಡುವ ಉದ್ದೇಶವಾಗಿರುವುದಿಲ್ಲ. ಆ ಕಾರಣದಿಂದ ಸರ್ಕಾರ ದಿನಾಂಕ 31- 23 ರ ವರೆಗೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿಯನ್ನು ಸಂಪೂರ್ಣ ಒಪ್ಪಿ ಅವರ ಶಿಫಾರಸಿನಂತೆ ಮೀಸಲಾತಿ ಹೆಚ್ಚಳದ ಕಾಯ್ದೆಯನ್ನು ಸಂವಿಧಾನದ 9ನೇ ಶೆಡ್ಯೂಲ್ ಗೆ ಸೇರಿಸಲು ನಾವು ಆಗ್ರಹ ಪೂರಕವಾಗಿ ಒತ್ತಾಯಿಸುತ್ತೇವೆ.

 

 

 

2.ನ್ಯಾಯಮೂರ್ತಿ ಸದಾಶಿವ ಆಯೋಗ ನೀಡುವ ವರದಿಯನ್ನು ನಮ್ಮ ಸರ್ಕಾರ ಬಂದ ಮೊದಲನೇ ಅಧಿವೇಶನದಲ್ಲಿ ವಿಧಾನ ಮಂಡಲದ ಮುಂದೆ ಮಂಡಿಸಲಾಗುವುದು ಎರಡು ಸದನಗಳ ಅಭಿಪ್ರಾಯಗಳನ್ನು ಪಡೆದು ಪರಿಶಿಷ್ಟ ಜಾತಿಗಳ ಎಲ್ಲಾ ಜಾತಿಯ ಜನರ ಹಕ್ಕುಗಳ ರಕ್ಷಣೆ ಹಾಗೂ ಸಾಮಾಜಿಕ ನ್ಯಾಯ ಸಿಗುವಂತೆ ಮೀಸಲಾತಿ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಬದ್ಧರಾಗಿರುತ್ತೇವೆ.
3. ಕಾಯ್ದೆಯ ಎಸ್ ಸಿ ಎಸ್ ಟಿ ಕಾಯ್ದೆಯ ಕಾಲ 7ಡಿ ಗೆ ತಿದ್ದುಪಡಿ ತರುವ ಮೂಲಕ ಆಯೋಜನೆ ಪೂರ್ಣ ಮತವನ್ನು ಆಯಾ ವರ್ಷವೇ ಎಸ್ಸಿ ಎಸ್ಟಿ ಜನರ ಅಭಿವೃದ್ಧಿಗೆ ವೆಚ್ಚ ಮಾಡಲು ಹಾಗೂ ಕಾಲ್ಪನಿಕ ವೆಚ್ಚ ರೊಳಗೆ ಮಿತಿ ಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ.
4. ಪಿಟಿಸಿಎಲ್ ಕಾಯ್ದೆಗೆ ಸೂಕ್ತ ತಿದ್ದುಪಡಿ ತಂದು ಎಸ್ ಸಿ ಎಸ್ ಟಿ ಜನರಿಗೆ ದರಕಾಸ್ತ್ ಮೂಲಕ ಸರ್ಕಾರ ನೀಡಿರುವ ಜಮೀನುಗಳು ಶಾಶ್ವತವಾಗಿ ಅವರಿಗೆ ಉಳಿಯುವಂತೆ ಕಾನೂನಿನ ರಕ್ಷಣೆ ಮಾಡಲು ಬದ್ಧರಾಗಿದ್ದೇವೆ.
5 ರಾಜ್ಯದ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ವರದಿಯ ಪ್ರಕಾರ ರಾಜ್ಯದಲ್ಲಿ ಅನುಕ್ರಮವಾಗಿ 2.54 ಲಕ್ಷ 1.32 ಲಕ್ಷ ವಸತಿ ರೈತ ರಹಿತ ಎಸ್ಸಿ ಎಸ್ಟಿ ಕುಟುಂಬಗಳು ಇರುತ್ತವೆ, ಅಂತಹ ಕುಟುಂಬಗಳಿಗೆ ಸಾಮಾಜಿಕ ನ್ಯಾಯ ನೀಡಲು ಹಾಗೂ ಸಮಾಜದ ಮುಖ್ಯ ವಾಹಿನಿಗೆ ಬರುವ 5 ವರ್ಷಗಳಲ್ಲಿ ಎಲ್ಲಾ ವಸತಿ ರಹಿತ ಕುಟುಂಬಗಳಿಗೆ ಮನೆಗಳನ್ನು ಕಟ್ಟಿಸಿಕೊಡಲು ವಿಶೇಷ ಯೋಜನೆ ರೂಪಿಸುತ್ತೇವೆ.
6 ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ವರದಿ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಲಕ್ಷಾಂತರ ಎಸ್ಸಿ ಎಸ್ಟಿ ಕುಟುಂಬಗಳು ಭೂ ರಹಿತರಾಗಿದ್ದಾರೆ, ಅವರುಗಳನ್ನು ಭೂ ಮಾಲೀಕರನಾಗಿ ಮಾಡುವ ದೃಷ್ಟಿಯಿಂದ ಅಂತಹ ಪ್ರತಿಯೊಂದು ಕುಟುಂಬಕ್ಕೆ 2 ಎಕರೆ ಒಣ ಭೂಮಿಯನ್ನು ಭೂ ಒಡೆತನ ಯೋಜನೆ ಅಡಿಯಲ್ಲಿ ನೀಡುವುದು ಹಾಗೂ ಆ ಜಮೀನುಗಳಲ್ಲಿ ಗಂಗಾ ಕಲ್ಯಾಣ ಯೋಜನೆಯಲ್ಲಿ ಕೊಳವೆ ಬಾವಿಗಳನ್ನು ಬರುವ ಐದು ವರ್ಷಗಳಲ್ಲಿ ಕೊರೆಸಿಕೊಡಲು ಕಾರ್ಯಕ್ರಮ ರೂಪಿಸುತ್ತೇವೆ.
6 ಪ್ರತಿವರ್ಷ ರಾಜ್ಯದ ಎಸ್‌ಸಿ/ಎಸ್‌ಟಿ ವಿದ್ಯಾವಂತ ನಿರುದ್ಯೋಗಿ ಯುವಕ ಯುವಕರಿಗೆ ಸ್ವಯಂ ಉದ್ಯೋಗ ರೂಪಿಸಿಕೊಳ್ಳಲು ಐರಾವತ ಯೋಜನೆ ಅಡಿಯಲ್ಲಿ ಟ್ಯಾಕ್ಸಿ ಗೂಡ್ಸ್ ತ್ರಿಚಕ್ರ ವಾಹನ ಮತ್ತು ನಾಲ್ಕು ಚಕ್ರಗಳ ಇತರ ವಾಹನಗಳನ್ನು ಖರೀದಿಸಲು ಸಹಾಯಧನ ಹಾಗೂ ಸಾಲದ ಸೌಲಭ್ಯವನ್ನು ಒದಗಿಸಲಾಗುವುದು.
8. ಕರ್ನಾಟಕ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಮಂಜೂರು ಮಾಡಿರುವ ಹುದ್ದೆಗಳ ಪೈಕಿ 2.54 ಲಕ್ಷ ಹುದ್ದೆಗಳು ಖಾಲಿ ಇರುತ್ತವೆ. ಆ ಕಾರಣದಿಂದ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ಹಾಗಾಗಿ ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗ ನೀಡಲು ಬರುವ ಐದು ವರ್ಷಗಳಲ್ಲಿ ಬ್ಯಾಕ್ ಲಾಗ್ ಹುದ್ದೆಗಳು ಸೇರಿದಂತೆ ಎಲ್ಲಾ ಖಾಲಿ ಹುದ್ದೆಗಳನ್ನು ತುಂಬಲು ಕ್ರಮ ಜರುಗಿಸಲಾಗುವುದು.
9 ರಾಜ್ಯದ ಅನೇಕ ಜನ ಎಸ್ ಸಿ ಎಸ್ ಟಿ ವಿದ್ಯಾರ್ಥಿಗಳು ಕೋವಿಡ್ ಮುಂತಾದ ಸಾಂಕ್ರಾಮಿಕ ರೋಗಗಳು ಮತ್ತು ಇನ್ನಿತರ ಕಾರಣಗಳಿಂದ ಶಾಲೆಗಳನ್ನು ಬಿಡುತ್ತಿರುವುದು ಸಮೀಕ್ಷೆಗಳಿಂದ ತಿಳಿದು ಬಂದಿರುತ್ತದೆ, ಶಾಲೆಗಳನ್ನು ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ತರುವ ದೃಷ್ಟಿಯಿಂದ ಹಾಗೂ ಮಕ್ಕಳ ಮಕ್ಕಳು ನಿರಂತರವಾಗಿ ಶಿಕ್ಷಣ ಪಡೆಯಲು ಶ್ರೀಮತಿ ಸಾವಿತ್ರಿಬಾಯಿ ಪುಲೆ ವಿದ್ಯಾ ಯೋಜನೆಯನ್ನು ಹೊಸದಾಗಿ ರೂಪಿಸಲು ನಿಶ್ಚಯಿಸಿರುತ್ತವೆ. ಆ ಯೋಜನೆ ಮೂಲಕ ಎಸ್ ಸಿ ಎಸ್ ಟಿ ವಿದ್ಯಾರ್ಥಿಗಳು ಶಾಲೆಗಳಿಗೆ ನಿರಂತರವಾಗಿ ಬರುವಂತೆ ಮಾಡಲು ಒಂದನೇ ತರಗತಿಯಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳ 150 ಹಾಗೂ 6ನೇ ತರಗತಿಯಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 300 ಪ್ರೋತ್ಸಾಹ ಧನ ನೀಡುವ ಯೋಜನೆ, ರೂಪಿಸುತ್ತೇವೆ, ಆ ಪ್ರೋತ್ಸಾಹ ಧನವನ್ನು ಆಯ ಮಕ್ಕಳ ತಾಯಂದಿರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು.
10. ರಾಷ್ಟ್ರದಲ್ಲಿ ಮೆಟ್ರಿಕ್ ಪೂರ್ವ ತರಗತಿಯ ಎಸ್ ಸಿ ಎಸ್ ಟಿ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನವನ್ನು ಕೇಂದ್ರ ಸರ್ಕಾರವು ನಿಲ್ಲಿಸಿರುತ್ತದೆ. ಅಂತಹ ಮಕ್ಕಳ ಭವಿಷ್ಯಕ್ಕೆ ಮಾರಕವಾಗಿರುತ್ತದೆ ಈ ಕಾರಣದಿಂದ ಮಕ್ಕಳ ಭವಿಷ್ಯವನ್ನು ರೂಪಿಸಲು ಮೈಸೂರಿನ ಮಹಾರಾಜರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರು ವಿದ್ಯಾರ್ಥಿ ವೇತನ ಯೋಜನೆ ಎಂಬ ಹೊಸ ಯೋಜನೆಯನ್ನು ರೂಪಿಸಿ ಆ ಯೋಜನೆಯ ಮೂಲಕ ಎಲ್ಲ ಎಸ್ ಸಿ ಎಸ್ ಟಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಪುನರ್ ಪ್ರಾರಂಭಿಸುತ್ತೇವೆ ಹಾಗೂ ರಾಜ್ಯ ವ್ಯಾಪಿ ಎಲ್ಲ ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳ ಸೌಲಭ್ಯ ಗಳನ್ನು ಒದಗಿಸಲು ಕ್ರಮ ರೂಪಿಸುತ್ತೇವೆ ಎಂದು ಹೇಳಿದರು.

Leave a Reply

Your email address will not be published. Required fields are marked *