ಬಿಜೆಪಿ ರಾಜ್ಯ ಸಾರಥಿ ಪಟ್ಟ ಕಟ್ಟಲು ಹೊರಟಿರೋ ಆ ಮಹಿಳೆ ಯಾರು?

ರಾಜಕೀಯ

ಬಿಜೆಪಿ ಮುಂಬರುವ ಚುನಾವಣೆಯಲ್ಲಿ ಮಿಷನ್ 150 ಯೋಜನೆಯನ್ನು ಸಾಫಲ್ಯಗೊಳಿಸಲು ಮಹಿಳೆಗೆ ರಾಜ್ಯದ ಬಿಜೆಪಿ ಅಧ್ಯಕ್ಷರ ಪಟ್ಟ ಕಟ್ಟುವ ಮೂಲಕ ಮತ ಪಡೆಯುವ ತಯಾರಿಯನ್ನು ನಡೆಸಿದೆ. ಈಗಾಗಲೇ ಅತ್ಯಂತ ಉತ್ಸುಕತೆಯಿಂದ ಚುರುಕಾಗಿ‌ ಕೆಲಸ ಮಾಡುತ್ತಿರುವ ಬಿಜೆಪಿ ಹಿರಿಯರು ಹಾಗೂ ಸಚಿವರಾಗಿ ಕೆಲಸ ಮಾಡಿರುವ ಶೋಭಾ ಕರಂದ್ಲಾಜೆಗೆ ಈ ಪಟ್ಟವನ್ನು ಕಟ್ಟಿ 2023 ರ ಚುನಾವಣೆಯಲ್ಲಿ ಮತ ಪಡೆದು ಮತ್ತೆ ಅಧಿಕಾರದ ಗದ್ದುಗೆಯನ್ನು ರಾಜ್ಯದಲ್ಲಿ ಹಿಡಿಯಲು ಸಿದ್ದತೆಯನ್ನು ಮಾಡಿಕೊಳ್ಳುತ್ತಿದೆ ಎಂಬ ಮಾಹಿತಿಗಳು ರಾಜ್ಯ ಬಿಜೆಪಿ ವಲಯದಲ್ಲಿ ಹರಿದಾಡುತ್ತಿದೆ. ಶೋಭಾ ಅವರಿಗೆ ಈ ಪಟ್ಟ ಕೊಟ್ಟರೆ ಮಾಜಿ ಸಿಎಂ ಯಡಿಯೂರಪ್ಪ ಅವರು ಕೂಡ. ಸಂಪೂರ್ಣ ಬೆಂಬಲ ನೀಡಲಿದ್ದಾರೆ.

 

 

 

ಶೋಭಾ ಅವರು ಕೂಡ ಪಕ್ಷದ ಹಿತ ಹಾಗೂ ಸಂಘಟನೆಯಲ್ಲಿ‌ ಶ್ರಮಿಸಿದ ಅನುಭವವಿದೆ ಎಂಬ ಚಿಂತನೆ ಇದ್ದು, ಇದಕ್ಕಾಗಿ ಎಲ್ಲಾ ತಯಾರಿಗಳು ನಡೆಯುತ್ತಿವೆ ಎಂಬ ಮಾಹಿತಿ ಹಬ್ಬಿದ್ದು, ಮುಂದೇನಾಗುತ್ತದೆ ಎಂದು ಕಾದು ನೋಡಬೇಕು

Leave a Reply

Your email address will not be published. Required fields are marked *