ಕನ್ನಡ ಕುಟೀರ ಬಳಗದಿಂದ ರಾಜ್ಯೋತ್ಸವ

ರಾಜ್ಯ

ಚಿತ್ರದುರ್ಗ,ನಂ೧(ಸಂವಾ)- ರಾಜ್ಯೋತ್ಸವ ಬಂತೆಂದರೆ ಎಲ್ಲೆಲ್ಲೂ ಸಡಗರ ಸಂಭ್ರಮ ಮನೆ ಮಾಡುತ್ತದೆ. ಕನ್ನಡಾಭಿಮಾನಿಗಳಿಗೆ ನಾಡಹಬ್ಬವೇ ಸರಿ ಸಂಘ ಸಂಸ್ಥೆಗಳು ರಾಜ್ಯದಾದ್ಯಂತ ಅದ್ದೂರಿಯಾಗಿ ಆಚರಿಸುತ್ತಾರೆ. ಆದರೆ ಅಪ್ಪಟ ಕನ್ನಡಾಭಿಮಾನಿಯಾಗಿರುವ ವಿ. ರಾಜೇಶ್ ಕನ್ನಡ ಕುಟೀರ ಬಳಗ ಎಂಬ ವೇದಿಕೆಯನ್ನು ಮನೆ ಮಂದಿ ಜೊತೆಗೆ ಸಿದ್ದಪಡಿಸಿ ಅದರ ಮೂಲಕ ಕನ್ನಡ ರಾಜ್ಯೋತ್ಸವವನ್ನು ಮನೆಯಲ್ಲಿಯೇ ಅದ್ದೂರಿಯಾಗಿ ಆಚರಿಸುತ್ತಾರೆ.

Rajyotsava celebration in house
ರಾಜ್ಯೋತ್ಸವವನ್ನು ಆಚರಿಸಲು ಸ್ಪೂರ್ಥಿ ಎಂದರೆ ತಂದೆ ವೆಂಕಟರಮಣ ಅವರು ಬಿಇಎಲ್ ಕೆಲಸ ಮಾಡುತ್ತಿದ್ದಾಗ ಅಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುತ್ತಿದ್ದು ಹೋಗಿ ನೋಡಿತ್ತಿದ್ದುದು, ರಾಜ್ಯೋತ್ಸವವನ್ನು ಸಂಘ ಸಂಸ್ಥೆಗಳಲ್ಲಿಯೇ ಯಾಕೆ ಆಚರಿಸಬೇಕು ಮನೆಯಲ್ಲಿ ಯಾಕೆ ಅಚರಿಸಬಾರದು ಎಂದು ಮನಸ್ಸಿನಲ್ಲಿ ಹೊಳೆಯುತ್ತಿದ್ದಂತೆ ತಟ್ಟನೆ ಮನೆಯವರ ಜೊತೆ ಮಾತನಾಡಿ ಅವರ ಸಹಕಾರದೊಂದಿಗೆ ಕನ್ನಡ ಕುಟೀರ ಬಳಗ ಎಂಬ ವೇದಿಕೆ ಮಾಡಿಕೊಂಡು ರಾಜ್ಯೋತ್ಸವವನ್ನು ಆಚರಿಸಲು ಆರಂಭಿಸಿಯೇ ಬಿಟ್ಟರು ಆಚರಣೆ ಇಲ್ಲಿಯವರೆಗೂ ನಿಂತಿಲ್ಲ. ಎಂದು ರಾಜೇಶ್ ಹೇಳುತ್ತಾರೆ.

 

 

 

Kannada kutira balaga rajyotsavaಕನ್ನಡಾಭಿಮಾನಿ ರಾಜೇಶ್ ಇದಕ್ಕಾಗಿ ಆರ್ ಎಂ ವಿ ಎರಡನೇ ಹಂತದಲ್ಲಿರುವ ತಮ್ಮ ‌ಮನೆಯಲ್ಲಿ ಕನ್ನಡ ರಾಜ್ಯೋತ್ಸವಕ್ಕಾಗಿ ಒಂದು ಮಂಟಪವನ್ನು ಸಿದ್ದ ಮಾಡಿಕೊಳ್ಳುತ್ತಾರೆ. ಅಲ್ಲಿ ತಾಯಿ ಭುವನೇಶ್ವರಿಯನ್ನು ಪ್ರತಿಷ್ಠಾಪಿಸುತ್ತಾರೆ. ಅಕ್ಕ ಪಕ್ಕದಲ್ಲಿ ಕ ನ್ನಡಕ್ಕಾಗಿ ಹೋರಾಟ ಮಾಡಿದವರು, ಸಾಹಿತಿಗಳು ಕವಿಗಳ ಭಾವ ಚಿತ್ರಗಳಿಂದ ಅಲಂಕೃತಗೊಳಿಸುತ್ತಾರೆ. ಇದು ಕವಿಗಳ ಸಾಹಿತಗಳ,ಹೋರಾಟಗಾರರಿಂದ ಕಂಗೊಳಿಸುವಂತೆ ಮಾಡುತ್ತಾರೆ.ಜೊತೆಗೆ ಪ್ರತೀ ವರ್ಷ ಎಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತದೆಯೋ ಅಲ್ಲಿಯ ಒಂದು ಸ್ಮಾರಕ ಅಥವ ಆ ಊರಿನ ನೆನಪು ತರುವಂತಹ ಕಲಾಕೃತಿಯನ್ನು ರಚಿಸಿ ಅಲಂಕರಿಸುತ್ತಾರೆ. ಅದಕ್ಕೆ ಕನ್ನಡಮ್ಮನ ತೇರು, ಎಂದು ಹೆಸರಿಟ್ಟು ಪೂಜಿಸುತ್ತಾರೆ.
ಉದಾಹರಣೆಗೆ ಚಿತ್ರದುರ್ಗದಲ್ಲಿ ನಡೆದರೆ ಕನ್ನಡಮ್ಮನ ಕೋಟೆ, ಬೆಂಗಳೂರಾದರೆ ಕನ್ನಡಮ್ಮನ ಸೌಧ ಎಂದು ಹೆಸರಿಸಿ ಪೂಜಿಸುತ್ತಾರೆ. ಹೀಗೆ ಸುಮಾರು ೧೬ ವರ್ಷಗಳಿಗೂ ಹೆಚ್ಚು ಕಾಲದಿಂದ ಆಚರಿಸಿಕೊಂಡು ಬರುತ್ತಿರುವ ರಾಜ್ಯೋತ್ಸವದ ಕಾರ್ಯಕ್ರಮವನ್ನು ಅತ್ಯಂತ ಚೊಕ್ಕವಾಗಿ ಪುಟ್ಟದಾಗಿ ಆಯೋಜಿಸಿ ಕವಿಗಳು ಬರಹಗಾರರು, ವಿಮರ್ಶಕರು, ಅವರನ್ನು ಕರೆಯಿಸಿ ‌ಕವಿ ಗೋಷ್ಠಿಗಳನ್ನು ಆಯೋಜಿಸಿ ಎಲ್ಲಿಯೂ ಪ್ರಮಾದವಾಗದಂತೆ ನೋಡಿಕೊಂಡು ಉತ್ತಮವಾಗಿ ಆಚರಿಸುತ್ತಾರೆ. ಕಾರ್ಯಕ್ರಮಕ್ಕೆ
ಕರೆದಿರುವ ಅತಿಥಿಗಳಿಗೆ ಪುಟ್ಟದಾದ ಗಿಫ್ಟ್ ಗಳನ್ನು ಕೂಡ ಕೊಡುತ್ತಾರೆ.Kannada kutira balaga rajyotsava

ಪ್ರತೀ ವರ್ಷದ ರಾಜ್ಯೋತ್ಸವದ ಆಚರಣೆಗಾಗಿ ಪ್ರತೀ ತಿಂಗಳು ತಲಾ ಒಂದು ಸಾವಿರ ರೂಪಾಯಿ ಹಣವನ್ನು ಮನೆಯವರೆಲ್ಲರೂ ಸೇರಿ ತೆಗೆದಿರಿಸುತ್ತಾರೆ. ನವೆಂಬರ್ ಬಂದಾಗ ಅದಕ್ಕೆ ಇನ್ನಷ್ಟು ಸೇರಿಸಿ ಮನೆಯವರೆಲ್ಲಾ ಸೇರಿ ರಾಜೇಶ್ ಜೊತೆ ಅದ್ದೂರಿಯಾಗಿ ಇಡೀ ಮನೆಯನ್ನು ಕನ್ನಡ ಮನೆಯನ್ನಾಗಿ ಅಲಂಕೃತಗೊಳಿಸಿ ಅರ್ಥಪೂರ್ಣವಾಗಿ ಆಚರಿಸುತ್ತಾ ಬಂದಿದ್ದಾರೆ. ಇವರ ಅರ್ಥ ಪೂರ್ಣ ಆಚರಣೆಗೆ ಹತ್ತು ಹಲವು ಭಾವಚಿತ್ರಗಳು ಇಲ್ಲಿ ಸಾಕ್ಷೀಯಾಗುತ್ತವೆ. ರಾಜ್ಯದಾದ್ಯಂತ ನಾಡ ಹಬ್ಬವಾಗಿ ಆಚರಿಸಲ್ಪಡುವ ರಾಜ್ಯೋತ್ಸವ ಕನ್ನಡ ಕುಟೀರ ಬಳಗದ ವಿನೂತನ ಆಚರಣೆಯಿಂದಾಗಿ ಇಂದು ಎಲ್ಲರೂ ಒಂದು ಬಾರೀ ಕನ್ನಡ ಕುಟೀರ ಬಳಗದ ಆಚರಣೆ ಕಡೆಗೆ ತಿರುಗಿ ನೋಡುವಂತೆ ಮಾಡಿದೆ.

ಡಿ.ಕುಮಾರಸ್ವಾಮಿ

Leave a Reply

Your email address will not be published. Required fields are marked *