ಅಕ್ರಮ ಸಂಬಂಧದ ಶಂಕೆ ವ್ಯಕ್ತಿ ಮೇಲೆ ಮರಣಾಂತಿಕ ಹಲ್ಲೆ

ಕ್ರೈಂ

ಚಿತ್ರದುರ್ಗ ಬ್ರೇಕಿಂಗ್

 

 

 

ವ್ಯಕ್ತಿಯೊರ್ವನ‌ ಮೇಲೆ ಮರಣಾಂತಿಕವಾಗಿ‌ ಹಲ್ಲೆ ಮಾಡಿರುವ ಘಟನೆ ಹೊಳಲ್ಕೆರೆ ತಾಲೂಕಿನ ಬೊಮ್ಮನಕಟ್ಟೆ ಗ್ರಾಮದ ಹಳೆ ಮೈರಾಡ ರಸ್ತೆಯಲ್ಲಿ ನಡೆದಿದೆ.

ತೀವ್ರ ಹಲ್ಲೆಗೊಳಗಾದ ವ್ಯಕ್ತಿಯನ್ನು ಕಿರಣ್ ನಾಯ್ಕ್ ಎಂದು ಗುರುತಿಸಲಾಗಿದೆ. ಈ ವ್ಯಕ್ತಿಯು ಮಹಿಳೆಯರ ಜೊತೆಗೆ ಅಕ್ರಮ ಸಂಬಂಧವಿಟ್ಟುಕೊಂಡಿರುವ ಶಂಕೆಯಿಂದ ಈ ಹಲ್ಲೆ ಮಾಡಿದ್ದಾರೆ ಎಂದು‌ ಹೇಳಲಾಗುತ್ತಿದೆ. ಮರಣಾಂತಿಕ‌ ಹಲ್ಲೆಯಿಂದಾಗಿ ತೀವ್ರ ಅಸ್ವಸ್ಥನಾಗಿದ್ದು, ಹೊಳಲ್ಕೆರೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಹೊಳಲ್ಕೆರೆ ಪೊಲೀಸರು ಸ್ಥಳಕ್ಕೆ ಹಾಗೂ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

Leave a Reply

Your email address will not be published. Required fields are marked *