ಬಿಜೆಪಿ ಅಭ್ಯರ್ಥಿಗಳ ಐದನೆ ಪಟ್ಟಿ ಬಿಡುಗಡೆ: ಚಿತ್ರದುರ್ಗಕ್ಕೆ ಯಾರು?

ರಾಜ್ಯ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ  ಬಿಜೆಪಿ 20 ಕ್ಷೇತ್ರಗಳ ಅಭ್ಯರ್ಥಿಗಳನ್ನ ಘೋಷಿಸಿತ್ತು. ಇದೀಗ ಮತ್ತೆ 4 ಕ್ಷೇತ್ರಗಳ ಅಭ್ಯರ್ಥಿಯನ್ನ ಘೋಷಿಸಿ, ಒಂದು ಕ್ಷೇತ್ರದ ಘೋಷಣೆ ಬಾಕಿ ಉಳಿದಿದೆ. ಕರ್ನಾಟಕದಲ್ಲಿ ಬಾಕಿ ಉಳಿದಿದ್ದ ಐದು ಕ್ಷೇತ್ರಗಳ ಪೈಕಿ 4 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಿ ಚಿತ್ರದುರ್ಗ ಲೋಕಸಭಾ ಕ್ಷೇತ್ರವನ್ನ ಹೈಕಮಾಂಡ್‌ ಬಾಕಿ ಉಳಿಸಿಕೊಂಡಿದೆ. ಇದರಿಂದ ಜಿಲ್ಲೆಯಲ್ಲಿ ಮತ್ತಷ್ಟು ಕುತೂಹಲ ಕೆರಳಿಸಿದೆ. ಬೆಳಗಾವಿಯ ಹಾಲಿ ಸಂಸದೆ ಮಂಗಳ ಅಂಗಡಿಗೆ ಟಿಕೆಟ್ ಕೈ ತಪ್ಪಿದ್ದು,ಇಲ್ಲಿ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಗೆ ಟಿಕೆಟ್‌ ನೀಡಲಾಗಿದೆ. ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಮಾಜಿ ಸಚಿವ ಡಾ.ಕೆ ಸುಧಾಕರ್‌ ಗೆ ಟಿಕೆಟ್‌ ನೀಡಲಾಗಿದೆ. ಉತ್ತರ ಕನ್ನಡ ಕ್ಷೇತ್ರ ಹಾಲಿ ಸಂಸದ ಅನಂತ್‌ ಕುಮಾರ್ ಹೆಗಡೆ ಬದಲಿಗೆ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಟಿಕೆಟ್‌ ನೀಡಲಾಗಿದೆ. ರಾಯಚೂರಿಗೆ ರಾಜಾ ಅಮರೇಶ್ವರ ನಾಯಕಗೆ ಮಣೆ ಹಾಕಿದೆ. ಬಿಜೆಪಿಯ ಅಧಿಕೃತ ಅಭ್ಯರ್ಥಿಗಳು:  ರಾಯಚೂರು : ರಾಜಾ ಅಮರೇಶ್ವರ ನಾಯಕ ಚಿಕ್ಕಬಳ್ಳಾಪುರ : ಡಾ.ಕೆ.ಸುಧಾಕರ್​​​ ಉತ್ತರ ಕನ್ನಡ : ವಿಶ್ವೇಶ್ವರ ಹೆಗಡೆ ಕಾಗೇರಿ ಬೆಳಗಾವಿ: ಜಗದೀಶ್ ಶೆಟ್ಟರ್ .

 

 

 

Leave a Reply

Your email address will not be published. Required fields are marked *