ಎಸ್ಸೆಸ್ಸೆಲ್ಸಿ, ಪಿಯುಸಿ ಮಕ್ಕಳಿಗೆ ಪರೀಕ್ಷಾ ಟಿಪ್ಸ್ ಇಲ್ಲಿದೆ

ರಾಜ್ಯ

ಎಸ್ಸೆಸ್ಸೆಲ್ಸಿ, ಪಿಯುಸಿ ಮಕ್ಕಳಿಗೆ ಪರೀಕ್ಷಾ ಮಾರ್ಗದರ್ಶನ

ಎಸ್ಸೆಸ್ಸೆಲ್ಸಿ, ಪಿಯುಸಿ ವಾರ್ಷಿಕ ಪರೀಕ್ಷೆ ಸಮೀಪಿಸುತ್ತಿದ್ದಂತೆ ಅನೇಕ ವಿದ್ಯಾರ್ಥಿಗಳು ಆತಂಕದಲ್ಲೇ ದಿನ ದೂಡುತ್ತಿರುತ್ತಾರೆ. ಅಂತವರಿಗೆ ಧೈರ್ಯ ತುಂಬಿ, ಯಾವ ರೀತಿ ಎದುರಿಸಬೇಕೆನ್ನುವ ಹಾಗೂ ಹೆಚ್ಚಿನ ಅಂಕ ಗಳಿಸಲು ಆತ್ಮವಿಶ್ವಾಸ ಮೂಡಿಸುವ ಕಾರ್ಯಗಾರವನ್ನು ನೇರ್ಲಿಗೆ ಫೌಂಡೇಷನ್ಸ್ ನ ಮಮತಾ ನೇರ್ಲಿಗೆ ನೆಡೆಸಿಕೊಟ್ಟರು.

ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ದಿ ನೇರ್ಲಿಗೆ ಫೌಂಡೇಶನ್‌ನಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಚಿತ್ರದುರ್ಗ ತಾಲ್ಲೂಕಿನಾದ್ಯಂತ ಸತತ ಒಂದು ತಿಂಗಳು ವಿವಿಧ ಸರ್ಕಾರಿ ಶಾಲೆಗಳಲ್ಲಿ ಶೈಕ್ಷಣಿಕ ಪುನಶ್ಚೇತನ ಕುರಿತು ಪರೀಕ್ಷೆಯಲ್ಲಿ ಸಮಯ ನಿರ್ವಹಣೆ, ಬರವಣಿಗೆ ಕೌಶಲಾಭಿವೃದ್ಧಿ ಸಂಬಂಧ ನಡೆದ ಕಾರ್ಯಾಗಾರದಲ್ಲಿ ದಿ ನೇರ್ಲಿಗೆ ಫೌಂಡೇಶನ್‌ನ ಸಂಸ್ಥಾಪಕಿ ಮಮತಾ ನೇರ್ಲಿಗೆ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪರೀಕ್ಷೆ ಎದುರಿಸುವ ಕುರಿತು ಉಪಯುಕ್ತ ಮಾಹಿತಿ ನೀಡಿದ್ದಾರೆ.

ಶಿಕ್ಷಣ ಇಲಾಖೆಯ ಬಿಇಒ, ಶಾಲೆಗಳ ಮುಖ್ಯ ಶಿಕ್ಷಕರು ಎರಡು ಗಂಟೆ ಸಂಪನ್ಮೂಲ ವ್ಯಕ್ತಿಯಾಗಿ ಪರೀಕ್ಷಾ ತಿಳಿವಳಿಕೆ ಬೋಧಿಸಲು ಅವಕಾಶ ನೀಡಿದ್ದು, ಸಿಗುವ ಸಮಯ ಸದ್ಬಳಕೆ ಮಾಡಿಕೊಂಡು ಹೆಚ್ಚು ಅಂಕ ಗಳಿಸಲು ಯಾವ ರೀತಿ ಕಾರ್ಯಪ್ರವೃತ್ತರಾಗಬೇಕು ಎಂಬುದನ್ನು ತಾಲ್ಲೂಕಿನ 30ಕ್ಕೂ ಹೆಚ್ಚು ಕಡೆ ವಿದ್ಯಾರ್ಥಿ ಸಮೂಹಕ್ಕೆ ಸಲಹೆಗಳನ್ನು ಕೊಟ್ಟಿದ್ದಾರೆ.

ಈ ಕಾರ್ಯಾಗಾರವೇಕೆ? ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅನುತ್ತೀರ್ಣರಾದವರು, ಕಡಿಮೆ ಅಂಕ, ಓದಿದರೂ ಹೆಚ್ಚು ಅಂಕಗಳಿಸಲು ಸಾಧ್ಯವಿಲ್ಲವೆಂಬ ಕೊರಗಿನಿಂದ ಕೆಲ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಪ್ರತಿ ವರ್ಷವೂ ವರದಿಯಾಗುತ್ತಿದೆ. ಹೀಗಾಗಿ ವಿದ್ಯಾರ್ಥಿಗಳಲ್ಲಿ ಆತಂಕ ದೂರವಾಗಿಸಲು ಈ ಕಾರ್ಯಾಗಾರ ಮಾಡಿದ್ದಾರೆ. ಇದೇ ಹಂತದಲ್ಲಿ ತಾನೂ ಎದುರಿಸಿದ ಅನೇಕ ಸಮಸ್ಯೆಗಳನ್ನೇ ಮಾದರಿಯಾಗಿ ಇಟ್ಟುಕೊಂಡಿದ್ದಾರೆ.

 

 

 

ಉಪನ್ಯಾಸದ ವಿಷಯಗಳೇನು? ಆರಂಭದಲ್ಲಿ ಪರೀಕ್ಷೆ ಎದುರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ ನೀಡಿದ್ದಾರೆ. ಸಿದ್ಧತೆಗೆ ಸಮಯ ನಿಗದಿಪಡಿಸಿಕೊಳ್ಳುವುದು, ಅಂಕ ಗಳಿಕೆಯಲ್ಲಿ ಅನುಸರಿಸಬೇಕಾದ ಕ್ಷಿಪ್ರ ವಿಧಾನಗಳ ಕುರಿತು ಬೆಳಕು ಚೆಲ್ಲುತ್ತಾರೆ. ಶಿಸ್ತು, ಸಮಯಪ್ರಜ್ಞೆ, ಏಕಾಗ್ರತೆ, ಕಲಿಕೆಯ ಹಂಬಲ ಇಷ್ಟಿದ್ದರೆ ಕಡಿಮೆ ಸಮಯದಲ್ಲೂ ಪರೀಕ್ಷೆಗೆ ಸಿದ್ಧತೆ ನಡೆಸಬಹುದೆಂಬ ಸಮೀಕರಣವನ್ನು ವಿದ್ಯಾರ್ಥಿಗಳ ಮುಂದಿಡುತ್ತಾರೆ.

ನಪಾಸಿಗಿಂತಲೂ ಪಾಸಾಗಲು ವಿದ್ಯಾರ್ಥಿಗಳು ಅಧ್ಯಯನ ಕೈಗೊಳ್ಳಬೇಕು. ಏನೇ ಆದರೂ ಅದನ್ನು ಧೈರ್ಯವಾಗಿ ಸ್ವೀಕರಿಸಬೇಕು. ಪರೀಕ್ಷೆಯಲ್ಲಿ ನಪಾಸಾದ ಕೂಡಲೇ ಭವಿಷ್ಯ ಮುಗಿಯಿತೆಂಬ ನಿರ್ಧಾರ ತಪ್ಪು. ಸೋತವರಿಗೆ ಗೆಲ್ಲಲ್ಲು ಹೆಚ್ಚು ಅವಕಾಶಗಳಿವೆ. ಹಾಗೆಯೇ ಅನುತ್ತೀರ್ಣರಾದವರು ಉತ್ತೀರ್ಣರಾಗಲು ಅವಕಾಶಗಳಿದ್ದು, ಸದ್ಬಳಕೆಗೆ ಮುಂದಾಗಬೇಕು ಎಂದ. ಮಮತಾ ನೇರ್ಲಿಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದ್ದಾರೆ.

ವಿದ್ಯಾರ್ಥಿಗಳ-ಶಿಕ್ಷಕರ ಸ್ಪಂದನೆ ಹೇಗಿದೆ?

ಉಪನ್ಯಾಸ ಕಾರ್ಯಕ್ರಮಕ್ಕೆ ಮುಂದಾದಾಗ ಬೋಧನಾ ಶೈಲಿ ನಂತರ ಆಯಾ ಶಾಲಾ-ಕಾಲೇಜುಗಳ ಪ್ರಾಚಾರ್ಯರು, ಮುಖ್ಯ ಶಿಕ್ಷಕರು ಆತ್ಮೀಯವಾಗಿ ಸನ್ಮಾನಿಸಿದ್ದಾರೆ. ವಿದ್ಯಾರ್ಥಿಗಳು ನಮಗೆ ತುಂಬಾ ಉಪಯುಕ್ತ ಸಲಹೆ ನೀಡಿದ್ದೀರಿ. ಮತ್ತೊಮ್ಮೆ ಭೇಟಿ ನೀಡಿ ಎಂದು ಮನವಿ ಮಾಡಿದ್ದಾರೆ.

ಟಿವಿ, ಮೊಬೈಲ್‌ನಿಂದ ದೂರವಿರಿ? ಪರೀಕ್ಷೆಗೂ ಒಂದೆರಡು ತಿಂಗಳು ಮುಂಚಿತವಾಗಿಯೇ ಟಿವಿ ಹಾಗೂ ಸ್ಮಾರ್ಟ್‌ ಫೋನ್‌ಗಳಿಂದ ದೂರವಿರಲು ಪ್ರಯತ್ನಿಸಿ. ಇದು ನಿಮ್ಮ ಸಮಯ ಮಾತ್ರವಲ್ಲ, ಸುಂದರ ಭವಿಷ್ಯವನ್ನು ಕಸಿದುಕೊಳ್ಳಲಿದೆ. ಬಿಡಲು ಸಾಧ್ಯವೇ ಇಲ್ಲ ಎನ್ನುವವರು ಮಾತ್ರ ಎರಡು ಗಂಟೆ ಅಧ್ಯಯನದ ನಂತರ ಹತ್ತದಿನೈದು ನಿಮಿಷ ವೀಕ್ಷಿಸಿ. ಆ ವೇಳೆ ಕೂಡ ನಿಮ್ಮ ಪರೀಕ್ಷೆ ಸಂಬಂಧಿಸಿದ ವಿಷಯಗಳ  ಮಾಹಿತಿ ಪಡೆಯಲು ಮುಂದಾಗಿ. ಧಾರಾವಾಯಿ, ಅನಗತ್ಯ ವಿಡಿಯೋ, ವಿಡಿಯೋ ಗೇಮ್ಸ್ , ಸಾಮಾಜಿಕ ಜಾಲತಾಣದ ಬಳಕೆ ಹಾಗೂ ವೀಕ್ಷಣೆಯಿಂದ ಯಾವ ಪ್ರಯೋಜನವಿಲ್ಲ ಎಂದು ಹೇಳಿದರು

 

Leave a Reply

Your email address will not be published. Required fields are marked *