ಹಂಪಿ ಸರಳ ಉತ್ಸವ ಕಪ್ಪು ಪಟ್ಟಿ ಪ್ರದರ್ಶನಕ್ಕೆ ಕಲಾವಿದರು ತೀರ್ಮಾನ

ಜಿಲ್ಲಾ ಸುದ್ದಿ

ಹಂಪಿ: ವಿಶ್ವ ವಿಖ್ಯಾತ ಹಂಪಿ ಉತ್ಸವವನ್ನು ಈ ಬಾರಿ ಒಂದೇ ದಿನಕ್ಕೆ ಸೀಮಿತ ಮಾಡಿ, ಆಚರಣೆ ಮಾಡಲು ಬಳ್ಳಾರಿ ಜಿಲ್ಲಾಡಳಿತ ನಿರ್ಧಾರ ಮಾಡಿದ್ದು, ಕಲಾವಿದರು ಕಪ್ಪು ಪಟ್ಟಿ ಪ್ರದರ್ಶಿಸಲು ನಿರ್ಧರಿಸಿದ್ದಾರೆ…

 

 

 

Chitradurga hampi utsava black ribbon exibit

ಕೋರೋನಾ ಹಿನ್ಕಲೆಯಲ್ಲಿ
ಕಲಾವಿದರ ವಿರೋಧದ ನಡುವೆಯೂ ಒಂದು ದಿನಕ್ಕೆ ಸೀಮಿತ ಮಾಡಿ, ಸಾಂಸ್ಕೃತಿಕ ಕಲಾ ತಂಡಗಳ ಮೆರವಣಿಗೆ ಮತ್ತು ತುಂಗಾ ಆರತಿ ಮಾಡಲು ನಿರ್ಧಾರ ಮಾಡಲಾಗಿದ್ದು, ಇದೇ ನವೆಂಬರ್ 13 ರಂದು ವಿಶ್ವವಿಖ್ಯಾತ ಹಂಪಿ ಉತ್ಸವವನ್ಬು ಜಿಲ್ಲಾಡಳಿತ
ಒಂದು ದಿನ‌ ನಡೆಸಲು ನಿರ್ಧರಿಸಿರುವುದು ಕಲಾವಿದರ ಕೆಂಗಣ್ಣಿಗೆ ಗುರಿಯಾಗಿದೆ.Chitrafurga black ribbon exibit
ಇದರ ವಿರುದ್ಧ ಕಪ್ಪು ಪಟ್ಟಿ ಪ್ರದರ್ಶನ ಮಾಡಿ ಪ್ರತಿಭಟನೆಗೆ ನಿರ್ಧಾರ ಮಾಡಲಾಗಿದ್ದು, ಬಳ್ಳಾರಿ ಜಿಲ್ಲೆಯ ಎಲ್ಲಾ ಕಲಾವಿದರು ಪ್ರತಿಭಟನೆ- ಮಾಡಲು ಮುಂದಾಗಿದ್ದಾರೆ. ಇನ್ಮೂ ಲಾಕ್ ಡೌನ್ ನಿಂದಾಗಿ ಕಲಾವಿದರಿಗೆ ಹೊಟ್ಟೆಯ ಮೇಲೆ ತಣ್ಣೀರ ಬಟ್ಟೆ ಬಿದ್ದಿದೆ, ಇಂತಹ ಸಮಯದಲ್ಲಿ ಕಲಾವಿದರನ್ನು ಪೊಷಿಸಲು ಇದೊಂದು ಸದಾವಕಾಶವಾಗಿದ್ದು, ಇದನ್ನು ಉಪಯೋಗಿಸಿಕೊಂಡು ಕಲಾವಿದರ ನೆರವಿಗೆ ಜಿಲ್ಲಾಡಳಿತ ನಿಲ್ಲಬಹುದಿತ್ತು. ದರಸಾ ಮಾಡಲು ಯಾವುದೂ ಅಡ್ಡಿ ಬರೋಲ್ಲಾ, ಹಂಪಿ ಉತ್ಸವಕ್ಕೆ ಯಾಕೆ ಎಂದು ಕಲಾವಿದರು ಪ್ರಶ್ನಿಸಿದ್ದಾರೆ.
ಸಂಯುಕ್ತವಾಣಿ
ಡಿ.ಕುಮಾರಸ್ವಾಮಿ

Leave a Reply

Your email address will not be published. Required fields are marked *