ಅಡಿಕೆ ಕಳ್ಳನನ್ನು ಬಂಧಿಸಿದ ಪೋಲಿಸರು

ಜಿಲ್ಲಾ ಸುದ್ದಿ

ಚಿತ್ರದುರ್ಗ,15 ಸಂವಾ-ವಿ ಆರ್ ಎಲ್ ಲಾರಿಯಲ್ಲಿ ಅಡಿಕೆ ಚೀಲಗಳನ್ನು ಲೋಡ್ ಮಾಡಿಕೊಂಡು ಹೋಗುತ್ತಿದ್ದ ಲಾರಿಯನ್ನು ಹುಬ್ಬಳ್ಳಿ‌ ಬಳಿ ಎರಡು ಲಾರಿಗಳಲ್ಲಿ ಅನ್ ಲೋಡ್ ಮಾಡಿಕೊಂಡು‌ ಭೀಮುಸಮುದ್ರ ಗ್ರಾಮದ ಬಳಿಯ ಬೊಮ್ಮೇನಹಳ್ಳಿಯ ಮೈದಾನದಲ್ಲಿ ಇಳಿಸಿ ಅಕ್ರಮವಾಗಿ‌ ಮಾರಾಟ ಮಾಡಿದ್ದ ಆರೋಪಿಯನ್ನು ಹೊಳಲ್ಕೆರೆ ಸಿಪಿಐ ‌ರವೀಶ್ ನೇತೃತ್ವದ ತಂಡವು ಬಂಧಿಸಿದೆ.

 

 

 

 

ಹುಬ್ಬಳ್ಳಿಗೆ ಹೋಗುತ್ತಿದ್ದ ಅಡಿಕೆ ಲಾರಿಯನ್ನು ನಿಲ್ಲಿಸಿ ಬೇರೆ ಲಾರಿಗಳಲ್ಲಿ ತುಂಬಿಸಿಕೊಂಡು ಎರಡೂ ಲಾರಿಗಳಲ್ಲಿ‌ ತಂದಿದ್ದ 348 ಖಾಲಿ‌ ಚೀಲಗಳಲ್ಲಿ ತುಂಬಿಸಿ ಅದರಲ್ಲಿ 68 ಅಡಿಕೆ ಚೀಲಗಳನ್ನು ಭೀಮಸಮುದ್ರದ ಬಿಟಿವಿ ಸುಪಾರಿ ಟ್ರೇಡರ್ಸ್ ನ ನಾಗರಾಜ್ ಎಂಬುವರಿಗೆ ಮಾರಾಟ ಮಾಡಿ ಅವರಿಂದ 21 ಲಕ್ಷದ 24 ಸಾವಿರದ 360 ರೂಪಾಯಿಗಳನ್ನು ಉಳಿದ 280 ಅಡಿಕೆ ಚೀಲಗಳನ್ನು ಭೀಮಸಮುದ್ರದ ಅಡಿಕೆ ವ್ಯಾಪಾರಿಯಾದ ರಾಜು ಅವರಿಗೆ ಅಕ್ರಮವಾಗಿ‌ ಮಾರಾಟ ಮಾಡಿ ಅವರಿಂದ 89 ಲಕ್ಷದ 82 ಸಾವಿರದ 999 ರೂಪಾಯಿಗಳನ್ನು ಪಡೆದು ವಂಚಿಸಿದ್ದು, ಈತನ ವಿರುದ್ಧ ರಾಜು ಗ್ರಾಮಾಂತರ ಠಾಣೆಯಲ್ಲು ದೂರು ನೀಡಿದ್ದರು.ದೂರನ್ನು ದಾಖಲಿಸಿಕೊಂಡ ಪೋಲಿಸರು ತನಿಖೆಯನ್ನು ಎಸ್ಪಿ ಕೆ. ಪರುಶುರಾಮ್, ಹೆಚ್ಚುವರಿ ಅಧೀಕ್ಷಕ ಕುಮಾರಸ್ವಾಮಿ ಹಾಗೂ ಉಪಾಧೀಕ್ಷಕ ರೋಷನ್ ಜಮೀರ್ ಅವರ ಮಾರ್ಗದರ್ಶನದಲ್ಲಿ ಹೊಳಲ್ಕೆರೆ ಸಿಪಿಐ ರವೀಶ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಸದರಿ ತಂಡವು ತುಮಕೂರಿನ ಲಾರಿ ಡ್ರೈವರ್ ಅಗಿರುವ ಆರೋಪಿ ವಸಂತಕುಮಾರ್ ಎಂಬುವನನ್ನು ಚಿತ್ರದುರ್ಗದ ಪಿಳ್ಳೇಕೇರೆನಹಳ್ಳಿಯ ಬಳಿ‌ ಬಂಧಿಸಿ‌ ಅವನಿಂದ 40 ಲಕ್ಷದ 30 ಸಾವಿರ ರೂಪಾಯಿ ಹಣವನ್ನು ವಶಪಡಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *