ಜಾತಿ ಆಧಾರದ ಮೇಲೆ ಮಂತ್ರಿ ಸ್ಥಾನ ಕೇಳೋದಿಲ್ಲಹಿರಿತನದ ಮೇಲೆ ಸಚಿವ ನನ್ನಾಗಿ ಮಾಡಿ

ಜಿಲ್ಲಾ ಸುದ್ದಿ ರಾಜಕೀಯ ರಾಜ್ಯ

ಚಿತ್ರದುರ್ಗ: ಜಾತಿ ಆಧಾರದ ಮೇಲೆ ನಾನು ಮಂತ್ರಿ ಸ್ಥಾನ ಕೇಳುವುದಿಲ್ಲ. ನನ್ನ ಹಿರಿತನ ಹಾಗೂ ಅನುಭವದ ಆಧಾರದ ಮೇಲೆ ನನಗೆ ಮಂತ್ರಿ ಸ್ಥಾನ ನೀಡಿ ಎಂದು ಚಿತ್ರದುರ್ಗದ ಹಿರಿಯ ಬಿಜೆಪಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಬಿಜೆಪಿ ಪಕ್ಷ ಹಾಗೂ ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.

Chitradurga give me minister post
ಅವರು ಚಿತ್ರದುರ್ಗದಲ್ಲಿ‌ಮಾಧ್ಯಮಗಳೊಂದಿಗೆ ಮಾತನಾಡುತ್ತಾ,

 

 

 

ಚಿತ್ರದುರ್ಗದ 1972 ನೇ ಸಾಲಿನಿಂದಲೂ ರಾಜಕಾರಣದಲ್ಲಿ ತೊಡಗಿಕೊಂಡಿರುವ ಮನೆತನ ಬಿಜೆಪಿ ಎಂಎಲ್ ಎ ತಿಪ್ಪಾರೆಡ್ಡಿ ಅವರದ್ದು, ಅವರು 6 ಬಾರಿ ಶಾಸಕನಾಗಿದ್ದಾರೆ. ಆದರೆ ಇದವರೆಗೂ ಅವರಿಗೆ ಮಂತ್ರಿ ಭಾಗ್ಯ ಮಾತ್ರ ಒಲಿದು ಬಂದಿಲ್ಲ. 22 ವರ್ಷಗಳ ಹಿಂದೆಯೇ ನಾನು ಕ್ಯಾಬಿನೆಟ್ ದರ್ಜೆಯಲ್ಲಿ ಕೆಲಸ ಮಾಡಿದ್ದೇನೆ. ಬಿಜೆಪಿಯ ಹಿರಿಯ ಶಾಸಕರಲ್ಲಿ ನಾನೂ ಒಬ್ಬ. ಸಚಿವ ಸ್ಥಾನಕ್ಕಾಗಿ ಕಿರಿಯ ಶಾಸಕರಂತೆ ಹೈ ಕಮಾಂಡ್ ಗೆ ದಂಬಾಲು ಬೀಳುವುದು ಕಿರಿಕಿರಿ ನನಗೆ ಅನಿಸುತ್ತದೆ. ಇದುವರೆಗೆ ಮಧ್ಯ ಕರ್ನಾಟಕಕ್ಕೆ ಮಂತ್ರಿ ಸ್ಥಾನ ನೀಡಿಲ್ಲ. ಬಿಜೆಪಿ ಸರ್ಕಾರ ಬಂದಾಗ ಕೆಲವರು ಮಂತ್ರಿಗಳಾಗಿರುತ್ತಾರೆ.

Chitradurga give me minister post
ಮತ್ತೆ ಮತ್ತೆ ಅವರಿಗೆ ಅವಕಾಶ ಸಿಗುತ್ತಿದೆ.ಇದು ಅನೇಕ ವಂಚಿತ ಶಾಸಕರ ಅನಿಸಿಕೆಯಾಗಿದೆ. ಕೆಲವರು ಏನೂ ಕೆಲಸ ಮಾಡದವರು ಸಚಿವರಾಗಿದ್ದಾರೆ. ಇದು ಸಿಎಂ ಹಾಗೂ ಪಕ್ಷದ ಗಮನಕ್ಕೂ ಇದೆ.ಅಂತವರಿಗೆ ಪಕ್ಷ ಸಂಘಟನೆಗೆ ಜವಾಬ್ದಾರಿ ನೀಡಿ ಬೇರೆಯವರಿಗೆ ಅವಕಾಶನೀಡಬೇಕು ಇದರಲ್ಲಿ ತಪ್ಪೇನಿಲ್ಲ.8-10 ಮಂದಿ ಹೊಸಬರಿಗೆ ಅವಕಾಶಮಾಡಿಕೊಟ್ಟರೆ ಒಗ್ಗಟ್ಟಿನಿಂದ ಕೆಲಸ ಮಾಡಲು ಸಹಕಾರಿಯಾಗುತ್ತದೆ. ನಾನು ದೆಹಲಿ ಹೈಕಮಾಂಡ್ ಹಾಗೂ ಸಿಎಂ ಬಳಿ ಹೋಗಿ ಲಾಬಿ ಮಾಡುವ ಎಲ್ಲೆ ಮೀರಿದ್ದೆನೆ. ದೇವರಾಜ್ ಅರಸದ ಅಭಿವೃದ್ಧಿ‌ನಿಗಮದ ಅಧ್ಯಕ್ಷರ ಸ್ಥಾನ ನಿರಾಕರಿಸಿದ್ದೆನೆ. ನಾನು ಆರು ಬಾರಿ ಶಾಸಕನಾಗಿ ಬೋರ್ಡ್ ಛೇರ್ಮನ್ ಆಗುವುದು ನನ್ನ ಗೌರವಕ್ಕೆ ದಕ್ಕೆಯಾಗುತ್ತದೆ. ಪಕ್ಷ ಮತ್ತು ಸಿಎಂ ಬಳಿ ಪರಿಯಾಗಿ ವಿನಂತಿ ಮಾಡುತ್ತೇನೆ. ಬಹಳ ಮಂದಿ ಅಭಿಪ್ರಾಯ ಇದೆ. 8-10 ಮಂದಿ ಹೊಸಬರಿಗೆ ಅವಕಾಶ ಮಾಡಿಕೊಡಿ. ಜಾತಿ ಆಧಾರದ ಮೇಲೆ ನಾನು ಮಂತ್ರಿ ಸ್ಥಾನ ಕೇಳುತ್ತಿಲ್ಲ.ಹಿರಿತನ ಹಾಗೂ ಅನುಭವದ ಆಧಾರದ ಮೇಲೆ ನಾನು ಕೇಳುತ್ತಿದ್ದೆನೆ ಎಂದು ತಿಪ್ಪಾರೆಡ್ಡಿ ಹೇಳಿದರು.

ಸಂಯುಕ್ತವಾಣಿ
ಡಿ.ಕುಮಾರಸ್ವಾಮಿ

Leave a Reply

Your email address will not be published. Required fields are marked *