ಪತ್ರಕರ್ತರ ಭವನಕ್ಕೆ ನಿವೇಶನ ನೀಡುವಂತೆ ಅರ್ಜಿ ಸಲ್ಲಿಸಿದ ಕಾನಿಪಸ

ರಾಜ್ಯ

ಪತ್ರಕರ್ತರ ಭವನಕ್ಕೆ ಬೇಡಿಕೆ:
ತಹಶೀಲ್ದಾರ್, ಪುರಸಭೆ ಮುಖ್ಯಾಧಿಕಾರಿಗೆ ಮನವಿ

 

 

 

ಮುದ್ದೇಬಿಹಾಳ: ಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗೆ ಇದುವರೆಗೂ
ನಿವೇಶನವಾಗಲಿ, ಭವನವಾಗಲಿ ಒದಗಿಸಿಲ್ಲ. ಹಲವು ಬಾರಿ ಮನವಿ ಸಲ್ಲಿಸಿದರೂ ಭರವಸೆಯನ್ನು
ನೀಡಲಾಗಿತ್ತೇ ಹೊರತು ಕಾರ್ಯರೂಪಕ್ಕೆ ಬಂದಿಲ್ಲ. ಇದೀಗ ತಾಲೂಕು ಆಡಳಿತ ಸೌಧ ಕಟ್ಟಡದ
ಹಿಂದೆ ಇರುವ ಹುಡ್ಕೋದ ಬಯಲು ಜಾಗದಲ್ಲಿನ ಪುರಸಭೆ ವ್ಯಾಪ್ತಿಯ ತಗಡಿನ ಶೆಡ್
ನಿರುಪಯುಕ್ತವಾಗಿದ್ದು ಅದನ್ನು ತಾತ್ಕಾಲಿಕವಾಗಿ ಪತ್ರಕರ್ತರ ಭವನಕ್ಕೆ
ಒದಗಿಸಿಕೊಡಬೇಕು ಎಂದು ಕೋರಿ ಪತ್ರಕರ್ತರು ತಾಲೂಕು ಕಾರ್ಯನಿರತ ಪತ್ರಕರ್ತರ
ಸಂಘದ ನೇತೃತ್ವದಲ್ಲಿ ತಹಶೀಲ್ದಾರ್ ರೇಖಾ ಮತ್ತು ಪುರಸಭೆ ಮುಖ್ಯಾಧಿಕಾರಿ ಕಾಶಿಲಿಂಗ
ಕಿಲಾರಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಸದರಿ ನಿವೇಶನ ಮತ್ತು ಶೆಡ್
ನಿರುಪಯುಕ್ತವಾಗಿರುವುದರಿಂದ ಅದರಲ್ಲಿ ಪತ್ರಕರ್ತರು ತಮ್ಮ ದಿನನಿತ್ಯದ ಸುದ್ದಿ
ಕಳಿಸುವ, ಸಂಗ್ರಹಿಸುವ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಇಚ್ಚಿಸಿದ್ದಾರೆ. ಶಾಸ್ವತ ನಿವೇಶನ
ಮಂಜೂರು ಮಾಡುವವರೆಗೂ ಈ ಶೆಡ್‌ನಲ್ಲಿ ಪತ್ರಕರ್ತರ ಭವನ ಕಾರ್ಯನಿರ್ವಹಿಸಲು
ಅವಕಾಶ ಕಲ್ಪಿಸಿಕೊಡಬೇಕು. ವಿಜಯಪುರ ನಗರದಲ್ಲಿ ಜಿಲ್ಲಾಧಿಕಾರಿಯವರ ಕಚೇರಿ ಆವರಣದ
ಜಾಗದಲ್ಲಿಯೇ ಪತ್ರಕರ್ತರ ಭವನಕ್ಕೂ ನಿವೇಶನ ಕೊಟ್ಟು ಕಟ್ಟಡ ಮಾಡಿಕೊಡಲಾಗಿದೆ.
ಅದೇ ಮಾದರಿಯಲ್ಲಿ ಈ ಶೆಡ್ ಬಳಸಲು ಅವಕಾಶ ಮಾಡಿಕೊಡುವುದರಿಂದ ಸಾರ್ವತ್ರಿಕ
ಸಮಸ್ಯೆಗಳನ್ನು, ಕುಂದು ಕೊರತೆಗಳನ್ನು ಸಾರ್ವಜನಿಕರು ಪತ್ರಕರ್ತರ ಗಮನಕ್ಕೆ
ತಂದು ಬಗೆಹರಿಸಿಕೊಳ್ಳುವುದು ಸಾಧ್ಯವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಹಿರಿಯ
ಪತ್ರಕರ್ತ ಕೆ.ಎಂ.ರಿಸಾಲ್ದಾರ್ ನೇತೃತ್ವದಲ್ಲಿ ನಡೆದ ಮನವಿ ಸಲ್ಲಿಕೆಯಲ್ಲಿ ಸಂಘದ ಅಧ್ಯಕ್ಷ
ಮುತ್ತು ವಡವಡಗಿ, ಉಪಾಧ್ಯಕ್ಷ ಸಿದ್ದು ಚಲವಾದಿ, ಪತ್ರಕರ್ತರಾದ ಸಾಗರ ಉಕ್ಕಲಿ, ಮಕ್ಬುಲ್
ಬನ್ನೆಟ್ಟಿ, ಪಿ.ಬಿ.ಮಾತೀನ ವಕೀಲರು ಇದ್ದರು..

Leave a Reply

Your email address will not be published. Required fields are marked *