ಮೂನ್ನೂರು ವರ್ಷಗಳ ಇತಿಹಾಸದ ಕಲ್ಯಾಣಿಗೆ ಕಾಯಕಲ್ಪ

ಜಿಲ್ಲಾ ಸುದ್ದಿ

ಮುನ್ನೂರು ವರ್ಷಗಳ
ಇತಿಹಾಸವಿರುವ ಶಿಥಿಲಾವಸ್ಥೆಯಲ್ಲಿದ್ದ ಕಲ್ಯಾಣಿಗೆ ಪುನಶ್ಚೇತನ ನೀಡಿದ ಸಿಇಓ ಹಾಗೂ ದೇವಪುರದ ಗ್ರಾಮಸ್ಥರು ಶಿವರಾತ್ರಿಯ ಪೂಜೆಯನ್ನು ಮಾಡಿಸಿದ್ದು, ವಿಶೇಷವಾಗಿತ್ತು.

 

 

 

ಹೊಸದುರ್ಗದ ತಾಲೂಕಿನ ಕೋಡಿ ಹಳ್ಳಿ ಗ್ರಾಮದ ಶ್ರೀ ಕಲ್ಲೇಶ್ವರ ಸ್ವಾಮಿ ದೇವಸ್ಥಾನದ ಸುಮಾರು 300 ವರ್ಷಗಳ ಇತಿಹಾಸವಿದ್ದು, ಇದರ ಸಮೀಪಿರುವ ಕಲ್ಯಾಣಿಯು ಶಿಥಿಲಾವಸ್ಥೆಯನ್ನು ತಲುಪಿತ್ತು. ಇದನ್ನು ಕಂಡ ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಸಿಇಒ ಎಂಎಸ್ ದಿವಾಕರ್, ನರೇಗಾ ಯೋಜನೆಯಡಿಯಲ್ಲಿ ಸುತ್ತಮುತ್ತಲ ಗ್ರಾಮಸ್ಥರ ಸಹಕಾರದೊಂದಿಗೆ ಸುಮಾರು ಮೂರು ಲಕ್ಷ ರೂಪಾಯಿ ಖರ್ಚು ಮಾಡಿ ಪುನಶ್ಚೇತನಗೊಳಿಸಿದ್ದಾರೆ. ಅಷ್ಟೆ ಅಲ್ಲದೆ ಶಿವರಾತ್ರಿಯ ಹಬ್ಬವಾದ ಇಂದು ಗ್ರಾಮಸ್ಥರು ಕಲ್ಯಾಣಿಗೆ ಗಂಗಾ ಪೂಜೆಯನ್ನು ನೇರವೇರಿಸಿ, ಸಾರ್ವಜನಿಕ ಉಪಯೋಗಕ್ಕೆ ಲೋಕಾರ್ಪಣೆ ಮಾಡಲಾಯಿತು.

Leave a Reply

Your email address will not be published. Required fields are marked *