ನಿಗಧಿತ ಮೀಸಲಾತಿ ನೀಡಬೇಕು

ಜಿಲ್ಲಾ ಸುದ್ದಿ

ಚಿತ್ರದುರ್ಗ: ಲಿಂಗಾಯಿತಮತ್ತು ವೀರಶೈವ ಎಂಬುದರ ನಡುವೆ ತಾತ್ವಿಕ ಅಭಿಪ್ರಾಯಗಳಿವೆ. ಆದರೇ ವೀರಶೈವ ಲಿಂಗಾಯಿತ ಸಮೂದಾಯದ ಎಲ್ಲಾ ಉಪಜಾತಿಗಳಿಗೆ ಮೀಸಲಾತಿ ಕೊಡಬೇಕು ಎಂದು ಚಿತ್ರದುರ್ಗ ಮುರುಘಾ ಮಠದ ಪೀಠಾಧ್ಯಕ್ಷರಾದ
ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಅವರು ಮುರುಘಾ ಮಠದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಸಂಸ್ಕೃತಿಗಳನ್ನು ಉಳಿಸುವ ಸಲುವಾಗಿ ಪ್ರಾಧಿಕಾರಗಳನ್ನು ರಚನೆ‌ ಮಾಡಲಾಗುತ್ತಿದೆ. ಕೆಲವು ಮಹಾನ್ ವ್ಯಕ್ತಿಗಳ ಹೆಸರಿನಲ್ಲೂ ಅಭಿವೃದ್ಧಿ ನಿಗಮಗಳು ಸ್ಥಾಪನೆಯಾಗಿವೆ. ಆ ಮೂಲಕ ಆಯಾ ಸಮೂದಾಯದ ಜನರ ಅಭಿವೃದ್ಧಿ ಕೆಲಸಗಳು ಆಗುತ್ತಿವೆ. ಅದರಂತೆ ಲಿಂಗಾಯಿತ ಅಭಿವೃದ್ದಿ ನಿಗಮ ಸ್ತಾಪನೆಗೆ ಸರ್ಕಾರ ಮುಂದಾಗಿದೆ.ಜನರ ಬೇಡಿಕೆಯನ್ನು ಪರಿಗಣಿಸಿ ಬಿ ಎಸ್ ವೈ ಒಳ್ಳೆಯ ನಿರ್ಧಾರಕ್ಕೆ ಬಂದಿದ್ದಾರೆ. ಅವರ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ.

 

 

 

Chitradurga nigadhita misalathi kodiಎಲ್ಲಾ ಸಮೂದಾಯಗಳು ಮೀಸಲಾತಿಗಾಗಿ ಹೋರಾಟ ನಡೆಸುತ್ತಾ ಬಂದಿವೆ. ಅದರಂತೆ ಲಿಂಗಾಯಿತರಿಗೂ ಮೀಸಲಾತಿ ನೀಡಬೇಕು. ಶೇ. 15 ರಿಂದ 16 ರಷ್ಟು ಮೀಸಲಾತಿ ಕೊಡಬೇಕು ಜಾತಿ ಉಪಜಾತಿಗಳಿಗೆ ಪ್ರತ್ಯೇಕ ಮೀಸಲಾತಿ ಬೇಡ ಲಿಂಗಾಯಿತ ವೀರಶೈವರಿಗೆ ಒಂದು ನಿಗಧಿತ ಮೀಸಲಾತಿ ಬೇಕು ಎಂದು ಶಿವಮೂರ್ತಿ ಶರಣರು ಹೇಳಿದ್ದಾರೆ.
ಸಂಯುಕ್ತವಾಣಿ

Leave a Reply

Your email address will not be published. Required fields are marked *