ಖಾಸಗಿ ಸಹಭಾಗಿತ್ವದಲ್ಲಿ ಹೊಸ ರೂಪ ಪಡೆದು ಸ್ಮಾರ್ಟ್ ಕ್ಲಾಸ್ ಗಳಾದ ಸರ್ಕಾರಿ ಶಾಲೆಗಳು

ರಾಜ್ಯ

ಎಲ್ಲವೂ ಸರ್ಕಾರದ ಅನುದಾನದಿಂದಲೇ ಆಗಬೇಕು ಎನ್ನುವ ಮನೋಭಾವನೆ ಸಮಾಜದಲ್ಲಿದೆ ಆದರೆ ಸರ್ಕಾರದ ಜೊತೆ ಸಾರ್ವಜನಿಕರು ಕೈ ಜೋಡಿಸಿದರೆ ಏನನ್ನಾದರೂ ಸಾಧಿಸಬಹುದು ಎನ್ನವುದಕ್ಕೆ ಇಲ್ಲಿದೆ ತಾಜಾ ಉದಾಹರಣೆ…

 

 

 

ಕುವೈತ್ ಕನ್ನಡಿಗ ಪ್ರತಿಷ್ಠಾನದಿಂದ ಚಳ್ಳಕೆರೆಯ ಚೌಳೂರು, ಕುರುಡಿಹಳ್ಳಿ, ಬಾಲೇನಹಳ್ಳಿ, ಹುಲಿಕುಂಟೆ ಯಲಗಟ್ಟೆ ಗೊಲ್ಲರಹಟ್ಟಿ, ಹನುಮಂತನಹಳ್ಳಿ, ಹಿರೇಹಳ್ಳಿ ಮತ್ತು ಗೌರ ಸಮುದ್ರ ಸೇರಿದಂತೆ 11 ಸರ್ಕಾರಿ ಶಾಲೆಗಳನ್ನು ದತ್ತು ಪಡೆಯಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದ ಜೊತೆಗೆ ಈ ಪ್ರತಿಷ್ಠಾನವು ತನ್ನ ಸಹಭಾಗಿತ್ವದಲ್ಲಿ ತಹಶೀಲ್ದಾರ್ ರಘುಮೂರ್ತಿ ನೇತೃತ್ವದಲ್ಲಿ ನವೀಕರಿಸಿ ಶಾಲೆಗಳನ್ನು ಹೊಳೆಯುವಂತೆ ಮಾಡಲಾಗಿದೆ. ಈ ಶಾಲೆಗಳು ಸ್ಮಾರ್ಟ್ ಕ್ಲಾಸ್, ಪಿಠೋಪಕರಣಗಳು, ಮತ್ತು ಕುಡಿಯುವ ನೀರಿನ ವ್ಯವಸ್ಥೆ,ಈ ಎಲ್ಲಾ ಯೋಜನೆಯನ್ನು ಅಮರ್ಪಕವಾಗಿ ಅಳವಡಿಸಲಾಗಿದೆ.ಇದರಿಂದ ಶಾಲೆಯ ಮಕ್ಕಳು ಉನ್ನತ ಶಿಕ್ಷಣದ ಪರಿಕಲ್ಪನೆಯ ಬೋಧನೆಯನ್ನು ಪಡೆಯುವಂತಾಗಿದೆ. ಇಷ್ಟೆ ಅಲ್ಲದೆ ಈ ಶಾಲೆಗಳು ಮಾದರಿಯೇ ಬದಲಾಗಿದೆ, ವಿಜಯನಗರ ಸಾಮ್ರಾಜ್ಯದ ಪರಿಕಲ್ಪನೆ, ದುರ್ಗದ ಕೋಟೆ, ವಿಮಾನ ನಿಲ್ದಾಣ ದ ಚಿತ್ರಗಳ ಚಿತ್ರಕಲೆಯಿಂದ ನವೀಕರೀಸಿದ್ದು, ಇದರ ಜೊತೆಗೆ ಮ್ಯಾಸ ಬೇಡರ ಬುಡಕಟ್ಟು, ಸಂಸ್ಕೃತಿಯ ಪ್ರತೀಕವಾದ ನನ್ನಿವಾಳ, ಬಂಗಾರ ದೇವರೆಡ್ಡಿ, ಚನ್ನಮ್ಮನಾಗತಿ‌ಹಳ್ಳಿ, ಆರು ಗ್ರಾಮಗಳನ್ನು ಗುರುತಿಸಿ ಅಲ್ಲಿ ಸ್ಮಾರ್ಟ್ ಕ್ಲಾಸ್ ಒಳಗೊಂಡಂತೆ ಮೂಲ ಭೂತ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ‌ವಹಿಸಲಾಗಿದೆ. ಇದರಿಂದ ಚಳ್ಳಕೆರೆ ತಹಶೀಲ್ದಾರ್ ರಘುಮೂರ್ತಿ ಅವರ ಕನಸು ಸಾಕಾರವಾದಂತಾಗಿದೆ.

Leave a Reply

Your email address will not be published. Required fields are marked *