ಕಾವಾಡಿಗರ ಹಟ್ಟಿಗೆ ಕಲುಷಿತ‌ ನೀರು ಪೂರೈಕೆ ಪ್ರಕರಣದ ಸುತ್ತ ಅನುಮಾನದ ಹುತ್ತ

ರಾಜ್ಯ

ಕಾವಾಡಿಗರ ಹಟ್ಟಿಯ ಕಲುಷಿತ ನೀರಿನ ಪೂರೈಕೆ ಸುತ್ತ ಅನುಮಾನದ ಹುತ್ತ ಬೆಳೆದಿದೆ, ನೀರು ಪೂರೈಕೆಯಾದರೆ ಇಡೀ‌ ಕಾವಾಡಿಗರ ಹಟ್ಟಿಗೆ ಸಮಸ್ಯೆ ಆಗಬೇಕಿತ್ತು
‌ಆದರೆ ಇಲ್ಲಿ‌ ಎಕೆ ಕಾಲೋನಿಗಳಲ್ಲಿ‌ ಮಾತ್ರ ಆಗಿದೆ, ಆದ್ದರಿಂದ ಇಲ್ಲಿ‌ ಸರಿಯಾದ ತನಿಕೆಯಾಗಬೇಕು‌ ಎಂದು‌‌‌ ಕಾಲೋನಿಯ ಮುಖಂಡರು ಒತ್ತಾಯಿಸಿದ್ದಾರೆ. ಗ್ರಾಮಸ್ಥರು ಎಸ್ಪಿ‌ಕೆ.‌ಪರುಶುರಾಮ್ ಅವರು ಘಟನೆ ವಿಷಯ ತಿಳಿದು ಆಸ್ಪತ್ರೆ ಮತ್ತು ಶವಾಗಾರಕ್ಕೆ ಭೇಟಿ‌ ನೀಡಿದ ಸಮಯದಲ್ಲಿ ಗ್ರಾಮದ ಎಕೆ ಕಾಲೋನಿಯ ಮುಖಂಡರು ಆಗ್ರಹ ಪಡಿಸಿದರು. ಇಂದು‌ ಕಾಲೋನಿಯ ಮೂರು‌ ಕಡೆಗಳಲ್ಲಿ ಮಾತ್ರ ಕಲುಷಿತ ನೀರು‌ ಪೂರೈಕೆಯಾಗಿದೆ. ಇದರಿಂದ ಓರ್ವ ಯುವತಿ ಮೃತಪಟ್ಟು  ಮಕ್ಕಳ ಸಹಿತ 23 ಜನರು ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರಾದವರನ್ನು ಚಿತ್ರದುರ್ಗದ ಸರ್ಕಾರಿ ಆಸ್ಪತ್ರೆ,ಬಸವೇಶ್ವರ ಆಸ್ಪತ್ರೆ ಮತ್ತು ದಾವಣಗೆರೆಗೆ ಸ್ಥಳಾಂತರಿಸಿ‌ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮೇ ಲ್ವರ್ಗದವರು ಇರುವ ಕಡೆಗಳಿಗೆ ನೀರು ಪೂರೈಕೆ ಆಗಿಲ್ಲ, ಇದು ಅನುಮಾನವನ್ನು‌ ಹುಟ್ಟಿ‌ ಹಾಕುತ್ತಿದೆ, ಆದ್ದರಿಂದ ಇದನ್ನು‌ ಕೂಲಂಕುಷವಾಗಿ ತನಿಖೆ ನಡೆಸಿ ಕ್ರಮ‌ ಜರುಗಿಸಬೇಕು ಎಂದು ಮನವಿಯನ್ನು‌ ಮಾಡಿದರು. ಇದಕ್ಕೆ‌ ಉತ್ತರಿಸಿದ, ಎಸ್ಪಿ ಪರುಶುರಾಮ್ ಅವರು ಈಗಾಗಲೆ ಆರೋಗ್ಯ ಇಲಾಖೆ, ನಗರಸಭೆಯಿಂದ ನೀರು ಪಡೆದು ಲ್ಯಾಬ್ ಗೆ ಪರೀಕ್ಷಿಸಲು‌ ಕಳುಹಿಸಲಾಗಿದೆ. ಎಲ್ಲಾ ಆಂಗಲ್ ಗಳಲ್ಲಿಯೂ‌ ಪ್ರಕರಣವನ್ನು‌‌ ತನಿಖೆಗೆ ಒಳಪಡಿಸಲಾಗುತ್ತದೆ. ಯಾವ ಕಾರಣಕ್ಕಾಗಿ‌ ಈ ಘಟನೆ ನಡೆದಿದೆ ಎಂದು ಪತ್ತೆ ಹಚ್ಚಿ‌ ತಪ್ಪಿತಸ್ಥರ ವಿರುದ್ದ ಕ್ರಮ‌ ಜರುಗಿಸಲಾಗುತ್ತದೆ ಎಂದು ಭರವಸೆ ನೀಡಿದರು.

 

 

 

Leave a Reply

Your email address will not be published. Required fields are marked *