ವಿಷ ಕೊಟ್ಟರು ಸರಿಯೇ ಇಲ್ಲಿ ಸಮಾಧಿ ಮಾಡಿದರೂ ಇಲ್ಲಿಂದ ಬರಲಾರೆ ಅಂದಿದ್ಯಾಕೆ ಆ ಮಹಿಳೆ

ರಾಜ್ಯ

ಪತಿ ಮನೆಯೊಳಗೆ ಬಿಟ್ಟುಕೊಳ್ಳುತ್ತಿಲ್ಲವೆಂದು ಪತ್ನಿ ಮನೆ ಮೆಟ್ಟಿಲ‌ ಮೇಲೆ ಕುಳಿತು ಆಹೋರಾತ್ರಿ ಧರಣಿ‌ ನಡೆಸಿದ ಘಟ‌ನೆ ಚಿತ್ರದುರ್ಗದ ಆದರ್ಶ ನಗರದಲ್ಲಿ‌ ನಡೆದಿದೆ.

 

 

 

ಕಳೆದ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದ ತೇಜಸ್ವಿನಿ‌ ವಿಕಾಸ್‌ ದಂಪತಿ. ದಾವಣಗೆರೆ ಜಿಲ್ಲೆಯ ಮಲೆಬೆನ್ನೂರಿನ ತೇಜಸ್ವಿನಿ ಹಾಗೂ ಚಿತ್ರದುರ್ಗದ ಆದರ್ಶ ನಗರದ ವಿಕಾಸ್ ಗೆ ಗುರು ಹಿರಿಯರ ನಿಶ್ಚಯದಂತೆ
ವಿವಾಹವಾಗಿತ್ತು. ಮದುವೆಯ ಸಮಯದಲ್ಲಿ ವರದಕ್ಷಿಣೆ ಕೊಟ್ಟಿದ್ದು, ಮತ್ತೆ ತರುವಂತೆ ಅತ್ತೆ ಮಾವ ಹಾಗೂ ಪತಿ ವಿಕಾಸ್ ವಿರುದ್ದ ಆರೋಪ ಮಾಡಿದ್ದಾರೆ. ಇದರ ನಡುವೆ ನಾನು ಗರ್ಭಿಣಿಯಿರುವಾಗ ಹೊಟ್ಟೆಯಲ್ಲಿರುವ ಮಗು ಗಂಡೋ ಹೆಣ್ಣೊ ಎಂದು ಪರೀಕ್ಷಿಸಲು ಸಾಗರದ ಬಳಿಯ ಜ್ಯೋತಿಷಿಯೊಬ್ಬರ ಬಳಿ‌ ಕರೆದೊಯ್ಯದಿದ್ದರು. ನನ್ನ ಕೈಗಳನ್ನು ಹಿಂದೆ ಕಟ್ಟಿಸಿ ಮಕ್ಕಳಾಗದ ಹಾಗೆ ಪತಿಯ ಮನೆಯವರು ಮಾತ್ರೆ ಕೊಡಿಸಿದ್ದರು. ಇಷ್ಟೆಲ್ಲಾ ಅನ್ಯಾಯ ಮಾಡಿರುವ ಪತಿ ಅತ್ತೆ ಹಾಗು ಮಾವ ಈಗ ಮನೆಯಿಂದ ನನ್ನನ್ನು ಹೊರ ಹಾಕಿದ್ದಾರೆ. ಮನೆಗೆ ಬೀಗ ಹಾಕುತ್ತಾರೆ.
ಮನೆಗೆ ಹೋಗಲು ಬಿಡುತ್ತಿಲ್ಲ ಎಂದು ತೇಜಸ್ವಿನಿ‌ ಅಳಲನ್ನು ತೋಡಿಕೊಳ್ಳುತ್ತಾರೆ. ಈ ಪ್ರಕರಣ ಈಗ ಚಿತ್ರದುರ್ಗ ಸ್ಥಳೀಯ ಶಾಸಕ ಕೆ‌ಸಿ‌ ವೀರೇಂದ್ರ ಪಪ್ಪಿ ಅವರ ಬಳಿ ಹೋಗಿದ್ದು, ಅವರೂ ಕೂಡ  ವಿಕಾಸ್ ಅವರ ಮನೆ ಬಳಿ ಬಂದು ತೇಜಸ್ವಿನಿಗೆ ಸಮಾಧಾನ ಮಾಡಲು ಯತ್ನಿಸಿದರು. ಇದರ ಮಧ್ಯೆ ಮಾತಾಡಿ ಮನವಿ ಮಾಡಿದ ತೇಜಸ್ವಿನಿ ಅವರು, ನಾನೊಬ್ಬ ಡಿಸ್ಟಿಂಕ್ಷನ್ ವಿದ್ಯಾರ್ಥಿನಿ ನಾನು ಬೇಡ ಎಂದರೂ ಮದುವೆ ಮಾಡಿಕೊಂಡು‌ ಬಂದು ಈಗ ಇಂತಹ ಅನ್ಯಾಯ ಮಾಡುತ್ತಿದ್ದಾರೆ. ನನಗೆ ಪತಿ ಬೇಕು ಇಲ್ಲದೆ ಹೋದರೆ ವಿಷ ಕೊಟ್ಟರೂ ಕೊಡಿ ಇಲ್ಲಿಯೇ ಸಮಾಧಿ‌ ಮಾಡಿದರೂ ಸರಿಯೇ ನಾನು ತವರು ಮನೆಗೆ ಹೋಗುವುದಿಲ್ಲ ಎಂದು ಹಠ ಹಿಡಿದರು. ಇದರ ನಡುವೆ ನಮ್ಮನ್ನು‌ ಮನೆಯಲ್ಲಿ‌ ಕೂಡಾಕಿದ್ದಾರೆಂದು ಪತಿ ಮನೆಯವರು ಕೋಟೆ ಠಾಣೆಯಲ್ಲಿ ದೂರು ದಾಖಲಿಸಿದ್ದರೆ, ಇತ್ತ ಮಹಿಳೆ ಅತ್ತೆ ಮಾವ ಹಾಗು ಪತಿ ವಿಕಾಸ್ ವರದಕ್ಷಿಣೆಗಾಗಿ ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *