ಭಜರಂಗ ದಳದಿಂದ ತಹಶೀಲ್ದಾರ್ ಎನ್ ರಘುಮೂರ್ತಿಗೆ ಗೌರವ ಸನ್ಮಾನ

ಜಿಲ್ಲಾ ಸುದ್ದಿ

ಕಳೆದ ವರ್ಷದ ವಿಶ್ವ ಹಿಂದೂ ಮಹಾ ಗಣಪತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿ ಈ ಕಾರ್ಯಕ್ರಮದಲ್ಲಿ ಪೂರ್ಣ ಪ್ರಮಾಣದಲ್ಲಿ ಭಾಗಿಯಾಗಿ ಪ್ರತಿಯೊಂದು ಸಹಕಾರವನ್ನು ನೀಡಿದ ತಹಶೀಲ್ದಾರ್ ಎನ್ ರಘುಮೂರ್ತಿ ಅವರ ಕಾರ್ಯ ಶ್ಲಾಘನೀಯ ಮತ್ತು ಅನನ್ಯವಾದದ್ದು ಎಂದು ತಾಲೂಕು ಬಜರಂಗದಳದ ಅಧ್ಯಕ್ಷ ಡಾಕ್ಟರ್ ಮಂಜುನಾಥ್ ಹೇಳಿದರು.

 

 

 

ಅವರು ಇಂದು ತಾಲೂಕ್ ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಹಾಗೂ ವಿಶ್ವ ಹಿಂದೂ ಮಹಾ ಗಣಪತಿ ಆಯೋಜನೆ ಸಮಿತಿ ಕಾರ್ಯಕರ್ತರೊಂದಿಗೆ ತಹಶೀಲ್ದಾರ್ ಎನ್ ರಘುಮೂರ್ತಿ ಅವರ ನಿವಾಸದಲ್ಲಿ ಅವರನ್ನು ಸನ್ಮಾನಿಸಿ ಗೌರವಪೂರ್ವಕವಾಗಿ ಮಾತನಾಡಿದರು, ಭಾರತ ಧಾರ್ಮಿಕ ಪರಂಪರೆ ಮತ್ತು ಆಧ್ಯಾತ್ಮಿಕ ಇತಿಹಾಸಕ್ಕೆ ಸಾಕ್ಷಿಕರಿಸಿದ ದೇಶ. ಈ ದೇಶದಲ್ಲಿ ನಿರಂತರವಾಗಿ ಧಾರ್ಮಿಕ ಕಾರ್ಯಗಳು ದೇವತಾ ಕಾರ್ಯಗಳು ಮತ್ತು ದೇಶ ಮತ್ತು ರಾಷ್ಟ್ರವನ್ನು ಪ್ರತಿಬಿಂಬಿಸುವಂತಹ ಅನೇಕ ಕಾರ್ಯಗಳು ನಿರಂತರವಾಗಿ ನಡೆಯುತ್ತವೆ. ನನ್ನ ದೇಶ ನನ್ನ ರಾಷ್ಟ್ರ ಎನ್ನುವ ಪರಿಕಲ್ಪನೆಯಲ್ಲಿ ಈ ಕಾರ್ಯಗಳಲ್ಲಿ ಭಾಗಿಯಾಗುವ ಅಧಿಕಾರಿಗಳು ತುಂಬಾ ವಿರಳ ಇಂತಹ ಸಂದರ್ಭದಲ್ಲಿ ಕೂಡ ವಿಶ್ವ ಹಿಂದೂ ಮಹಾ ಗಣಪತಿ ಕಾರ್ಯಕ್ರಮದಲ್ಲಿ ಮೊದಲನೇ ದಿನದಿಂದ ಶೋಭ ಯಾತ್ರೆಯವರೆಗೆ ನಿರಂತರವಾಗಿ ಕಾರ್ಯಕ್ರಮಕ್ಕೆ ತಮ್ಮ ಅಮೂಲ್ಯ ಸಹಕಾರವನ್ನು ನೀಡಿ ದೇವತಾ ಕಾರ್ಯಗಳಿಗೆ ತಮ್ಮ ಭಕ್ತಿಯ ಮೂಲಕ ಉದಾತ್ತವದ ಕಾಣಿಕೆ ನೀಡಿದ್ದಾರೆ. ಆದುದರಿಂದ ಇವರ ಈ ಸೇವೆಯನ್ನು ಗಮನದಲ್ಲಿಟ್ಟುಕೊಂಡು ತಾಲೂಕು ವಿಶ್ವಹಿಂದೂ ಪರಿಷತ್ ಭಜರಂಗದಳ ಮತ್ತು ವಿಶ್ವ ಹಿಂದೂ ಮಹಾ ಗಣಪತಿ ಸಮಿತಿಯಿಂದ ಶ್ರೀ ಕೃಷ್ಣನ ವಿಗ್ರಹವನ್ನು ನೀಡಿ ಇವರನ್ನು ಆತ್ಮೀಯವಾಗಿ ಅಭಿನಂದಿಸಲಾಯಿತು. ಮುಂದೆಯೂ ಇಂತಹ ಸತ್ಕಾರ್ಯಗಳನ್ನು ಸಮಾಜದಲ್ಲಿ ಮಾಡುವಂತೆ ಇವರಿಗೆ ಶಕ್ತಿಯನ್ನು ಈ ವಿಘ್ನ ವಿನಾಯಕನು ನೀಡಲೆಂದು ಹಾರೈಸಿದರು. ಈ ಸಮಾರಂಭದಲ್ಲಿ ವಿಶ್ವ ಹಿಂದೂ ಮಹಾಗಣಪತಿ ಸಮಿತಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ಮುಖಂಡರಾದ ಮಾತೃಶ್ರೀ ಮಂಜುನಾಥ್ ಯೋಗೇಶ್ ನಾಗೇಶ್ ಭೋವಿ ಸಮಾಜದ ಮುಖಂಡರಾದ ಜಗದೀಶ್ ಚಿದಾನಂದ ಕಣ್ಣೀರಪ್ಪ ಕೃಷ್ಣ ರವಿ ಮಹಾಂತೇಶ್ ಕರಿಬಸವ ಚೆನ್ನಯ್ಯ ಸಿದ್ದು ರಾಮು ಓಬಣ್ಣ ಮೀರಾಸಾಬಿಹಳ್ಳಿ ನಾಗರಾಜು ಮಾರುತಿ ಮುಂತಾದವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *