ದೇಶದಲ್ಲಿಹೆಚ್ಚಿದ H3N2 ವೈರಸ್ ಸೋಂಕಿಗೆ ಎರಡು ಬಲಿ

ರಾಜ್ಯ

ರಾಜ್ಯದಲ್ಲಿ ಕೋವಿಡ್ ನಂತರದಲ್ಲಿ ಅದರ ತಳಿಯಾಗಿರುವ ಹೆಚ್ 3 ಎನ್ 2 ವೈರಸ್ ಜನರನ್ನು ಬಹಳಷ್ಟು ಕಾಡುತ್ತಿದೆ. ಈ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆತಂಕ‌ ಸೃಷ್ಠಿಸಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು‌ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿ ಕ್ಲಿನಿಕಲ್ ಆಡಿಟ್ ನಡೆಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ
ದೇಶದಲ್ಲಿ H3N2 ವೈರಸ್ ಸೋಂಕಿನ ಆತಂಕ‌ ಹೆಚ್ಚಾಗಿದ್ದು, ಕರ್ನಾಟಕದ ಬಳಿ‌ ಹರಿಯಾಣದಲ್ಲಿ ಈ ವೈರಸ್ ಗೆ ಮತ್ತೊಂದು‌ ಬಲಿಯಾಗಿದೆ.
ಈ ಮೂಲಕ ದೇಶದಲ್ಲಿ ಈ ವೈರಸ್ ಗೆ ಬಲಿಯಾದವರ ಸಂಖ್ಯೆ ಎರಡಕ್ಕೇರಿದೆ.H3N2 ವೈರಸ್ ಗೆ ಬಲಿಯಾಗಿರುವ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಆರೋಗ್ಯ ಇಲಾಖೆ ವೈರಸ್ ನ ಮೂಲ‌ಪತ್ತೆಗೆ ಕ್ಲಿನಿಕಲ್ ಆಡಿಟ್ ಗೆ ಮುಂದಾಗಿದೆ. ನಾಳೆಯಿಂದ ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿ ಕ್ಲಿನಿಕಲ್ ಆಡಿಟ್ ಆರಂಭವಾಗಲಿದೆ. ಈ ವರೆಗೆ ದೇಶದಲ್ಲಿ 90 H3N2 ವೈರಸ್ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ ಆರೋಗ್ಯ ಇಲಾಖೆ ಕ್ಲಿನಿಕಲ್ ಆಡಿಟ್ ನಡೆಸಿ ಸೋಂಕು‌ ನಿಯಂತ್ರಣಕ್ಕೆ ನಿರ್ಧರಿಸಿದೆ.

 

 

 

Leave a Reply

Your email address will not be published. Required fields are marked *