ರಾಜ್ಯದಲ್ಲಿ ಕೋವಿಡ್ ಹೆಚ್ಚಳ :ರಾಜ್ಯದಾದ್ಯಂತ ಮಾಸ್ಕ್ ಕಡ್ಡಾಯ

ರಾಜ್ಯ

BIG BREAKING NRWS
ಕೋವಿಡ್ ಸಂಖ್ಯೆ ಹೆಚ್ಚಳ: ರಾಜ್ಯದಾದ್ಯಂತ ಮಾಸ್ಕ್ ಕಡ್ಡಾಯ: ಸಚಿವ ಡಾ. ಸುಧಾಕರ್

 

 

 

ರಾಜ್ಯದಲ್ಲಿ ಇದೀಗ ಕೋರೋನಾ ಹೆಚ್ಚಳದ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಾಸ್ಕ್ ನ್ನು ಕಡ್ಡಾಯವಾಗಿ ಧರಿಸುವಂತೆ ಆದೇಶ ಹೊರಡಿಸಿದೆ.
ಇಂದು‌ ಕೋವಿಡ್ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಡಾ.‌ಕೆ. ಸುಧಾಕರ್ ಇನ್ನು ಮುಂದೆ ಎಲ್ಲರೂ‌ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ ಎಂದರು.


ಕೋರೋನಾ ಹೆಚ್ಚಳದಿಂದಾಗಿ 60 ವರ್ಷ ಮೇಲ್ಪಟ್ಟವರು ತಕ್ಷಣವೇ ಬೂಸ್ಟರ್ ಡೋಸ್ ಪಡೆಯಬೇಕು. ಇಂದಿನ ಸಭೆಯಲ್ಲಿ ಮಂಕಿ ಪಾಕ್ಸ್ ನಿಯಂತ್ರಣದ ಬಗ್ಗೆಯೂ ಚರ್ಚೆ ನಡೆಸಲಾಗಿದೆ ಎಂದರು. ಕರ್ನಾಟಕದಲ್ಲಿ ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿಲ್ಲ. ಆದರೆ ಇದರ ಬಗ್ಗೆ ಕಟ್ಟೆಚ್ಚರವನ್ನು ವಹಿಸಲಾಗಿದೆ.ಗಢಿ ಜಿಲ್ಲೆಗಳಲ್ಲಿ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ. ಮಳೆಗಾಲದಲ್ಲಿ ಹೆಚ್ಚಾಗುತ್ತಿರುವ ಮಲೇರಿಯಾ ನಿಯಂತ್ರಣಕ್ಕು ಕ್ರಮ ಕೈಗೊಳ್ಳಲಾಗಿದೆ ಎಂದು‌ ಹೇಳಿದರು.

Leave a Reply

Your email address will not be published. Required fields are marked *