ಜವನಗೊಂಡನಹಳ್ಳಿ ಚಕ್ ಪೋಸ್ಟ್ ನಲ್ಲಿ 1.44 ಕೋಟಿ ಹಣ ಜಪ್ತಿ

ರಾಜ್ಯ

 

BREKING NEWS

ಹಿರಿಯೂರಿನ ಜವನಗೊಂಡನಹಳ್ಳಿ ಚೆಕ್ ಪೋಸ್ಟ್ ನಲ್ಲಿ ಎಟಿಎಂಗಳಿಗೆ ಹಣ ತುಂಬಲು ತೆಗೆದುಕೊಂಡು ಹೋಗುವ ವಾಹನದಲ್ಲಿದ್ದ ಅನಧಿಕೃತ 1.44 ಕೋಟಿ ಹಣವನ್ನು ಹಿರಿಯೂರು ತಹಶೀಲ್ದಾರ್
ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ಮತ್ತು ಎಸ್ ಎಸ್ ಟಿ ತಂಡದವರು ಸೀಜ್ ಮಾಡಿದ್ದಾರೆ. ತುಮಕೂರು ಜಿಲ್ಲೆಯ ತುಮಕೂರು ಮತ್ತು ಶಿರಾ ಕಡೆಯ ವಾಹನವಾಗಿದ್ದು, ಇದರಲ್ಲಿ 1.44 ಲಕ್ಷ ಹೇಗೆ ಬಂತು ಹಾಗೂ ಈ ವಾಹನ ಚಿತ್ರದುರ್ಗದ ಕಡೆಗೆ ಏಕೆ ಬಂತು ಎನ್ನುವುದು ಅನುಮಾನಕ್ಕೆಡೆ ಮಾಡಿಕೊಟ್ಟಿದ್ದು, ಹಣವನ್ನು ವಶಕ್ಕೆ ಪಡೆದುಕೊಂಡಿರುವ ಸ್ಥಳಕ್ಕೆ ಅಧಾಯ ತೆರಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

 

 

 

ಎಟಿಎಂ‌ಗಳ ಹಣ ನಿರ್ವಹಣೆ ಮಾಡುವ ಸಿಎಂಎಸ್ ಕಂಪನಿಯ ತುಮಕೂರಿನಿಂದ ಶಿರಾ ತಾಲ್ಲೂಕಿನವರೆಗೆ ಮಾತ್ರ ಎಟಿಎಂಗಳಿಗೆ ಹಣ ತುಂಬಲು ಅನುಮತಿ ಪಡೆದಿತ್ತು. ಆದರೆ ಶಿರಾ ತಾಲ್ಲೂಕು ಹೊರತು ಪಡಿಸಿ ಹಿರಿಯೂರು ತಾಲ್ಲೂಕು ಗಡಿ ಪ್ರವೇಶಿಸಿದೆ. ಈ ಕುರಿತು ಪರಿಶೀಲನೆ ನಡೆಸಿದಾಗ ಹಿರಿಯೂರು ಗಡಿ ಪ್ರವೇಶಿಸಿದ್ದಕ್ಕೆ ಯಾವುದೇ ಸೂಕ್ತ ದಾಖಲೆ ಪ್ರಸ್ತುತ ಪಡಿಸಿರುವುದಿಲ್ಲ. ಲೋಕಸಭಾ ಚುನಾವಣೆ ಮಾದರಿ ನೀತಿ ಸಂಹಿತೆ ಹಿನ್ನಲೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಎಟಿಎಂಗಳಿಗೆ ಹಣ ತುಂಬಲು ಜಿಲ್ಲೆಯ ಜಿಲ್ಲಾಧಿಕಾರಿ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಆದ್ದರಿಂದ ರೂ.1.44 ಕೋಟಿ ಹಣ ಹಾಗೂ ವಾನಹ ಜಪ್ತಿ ಮಾಡಿ ವಶಪಡಿಸಿಕೊಂಡಿದ್ದಾಗಿ ತಹಶೀಲ್ದಾರ್ ರಾಜೇಶ್ ತಿಳಿಸಿದ್ದಾರೆ.
ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ವಶ ಪಡಿಸಿಕೊಂಡ ಹಣವನ್ನು ಸೂಕ್ತ ವಿಚಾರಣೆಯ ಬಳಿಕೆ ಜಿ.ಪಂ.ಸಿಇಓ ನೇತೃತ್ವದಲ್ಲಿ ನಗದು ಜಪ್ತಿ ಸಮಿತಿ ವಶಕ್ಕೆ ನೀಡಲಾಗುವುದು‌ ಎಂದು‌ ತಿಳಿಸಿದ್ದಾರೆ.

 

 

 

Leave a Reply

Your email address will not be published. Required fields are marked *