ಹೊಳಲ್ಕೆರೆ ಕಣಿವೆಯಲ್ಲಿ ಅಪಘಾತ 3 ಸಾವು 33 ಜನರಿಗೆ ಗಾಯ

ರಾಜ್ಯ

ಹೊಳಲ್ಕೆರೆ ಕಣಿವೆ ಬಳಿ‌ ಇಂದು‌ ಖಾಸಗಿ ಪಲ್ಟಿಯಾಗಿದ್ದು, ಸ್ಥಳದಲ್ಲಿಯೇ 3 ಜನರು‌ ಮೃತಪಟ್ಟಿದ್ದು, 33 ಜನರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಮೃತರನ್ನು ಜಗದೀಶ್(45), ಹೊನ್ನಾವರ,ಗಣಪತಿ(40), ಸಾಗರದವರು ಎಂದು ಗುರುತಿಸಿದ್ದು, ಮತ್ತೊರ್ವನ ಬಗ್ಗೆ ಗುರುತು ಪತ್ತೆಯಾಗಿಲ್ಲ. ಗಾಯಾಳುಗಳನ್ನು ಚಿತ್ರದುರ್ಗ, ಹೊಳಲ್ಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಬಸ್ ಬೆಂಗಳೂರಿನಿಂದ ಗೋಕರ್ಣಕ್ಕೆ ಬಸ್ ಹೋಗುತ್ತಿದ್ದು, ಕಣಿವೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ. ಹೊಳಲ್ಕೆರೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ‌ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

 

 

 

Leave a Reply

Your email address will not be published. Required fields are marked *