40 ವರ್ಷ ಪೂರೈಸಿದ ಶಿಕ್ಷಣ ಸಂಸ್ಥೆ: ಅದ್ದೂರಿ ಡೆಸ್ಟಿನಿ ಕಾರ್ಯಕ್ರಮ

ಜಿಲ್ಲಾ ಸುದ್ದಿ

ಹಣಕ್ಕಾಗಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸದೆ ಸಮಾಜ ಸೇವೆಯನ್ನು ಮಾಡುವುದಕ್ಕೆ ಬಡವರು ಸಹ ಶಿಕ್ಷಣವನ್ನು ಕಲಿಯಲಿ ಎಂಬ ಉದ್ದೇಶದಿಂದ ಶಿಕ್ಷಣ ಸಂಸ್ಥೆಯನ್ನು ಸ್ಥಾಪನೆ ಮಾಡಿದ್ದೇನೆ ಎಂದು ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿಗಳು ಹೊಳಲ್ಕೆರೆ ಕ್ಷೇತ್ರದ ಶಾಸಕರಾದ ಡಾ.ಎಂ.ಚಂದ್ರಪ್ಪ ತಿಳಿಸಿದರು.
ಚಿತ್ರದುರ್ಗ ನಗರದ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಸಂಸ್ಥೆಯ ಆವರಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಆವರು, ೧೯೮೩ರಲ್ಲಿ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭ ಮಾಡಿ ಇಲ್ಲಿಯವರೆಗೂ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ಪದವಿ ಕಾಲೇಜು, ಶಿಕ್ಷಕರ ತರಬೇತಿ ಕಾಲೇಜು, ನರ್ಸಿಂಗ್ ಕಾಲೇಜು, ಫಾರ್ಮಸಿ ಕಾಲೇಜು ಹಾಗೂ ಆರ್ಯರ್ವೇದ ವೈದ್ಯಕೀಯ ಕಾಲೇಜನ್ನು ಪ್ರಾರಂಭ ಮಾಡಲಾಗಿದೆ. ಇದರಲ್ಲಿ ಸ್ವೇಟ್ ಮತ್ತು ಸಿಬಿಎಸ್‌ಸಿ ತರಗತಿಗಳನ್ನು ಸಹಾ ನಡೆಸಲಾಗುತ್ತಿದೆ ಎಂದರು.
೧೯೮೯ರಲ್ಲಿ ಈ ಕಟ್ಟಡದ ಜಾಗವನ್ನು ಪಡೆಯುವುದರ ಮೂಲಕ ನೂತನವಾಗಿ ಕಟ್ಟಡವನ್ನು ನಿರ್ಮಾಣ ಮಾಡಿ ಮಕ್ಕಳ ಕಲಿಗೆ ಅವಕಾಶವನ್ನು ಕಲ್ಪಿಸಲಾಯಿತು. ನನಗೆ ಬೆಂಗಳೂರಿನಲ್ಲಿಯೂ ಉತ್ತಮವಾದ ಜಾಗ ಸಿಕ್ಕಿತ್ತು ಅಲ್ಲಿಯೂ ಸಹಾ ಶಾಲೆಯನ್ನು ಪ್ರಾರಂಭ ಮಾಡುವಂತೆ ಹಲವಾರು ಜನತೆ ಹೇಳಿದ್ದರು. ಆದರೆ ನನಗೆ ನನ್ನ ಊರು, ನನ್ನ ಜನ ಎಂಬ ಆಭಿಮಾನದಿಂದ ಇಲ್ಲಿಯ ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ನೀಡಬೇಕೆಂಬ ಉದ್ದೇಶದಿಂದ ಇಲ್ಲಿಯೇ ಶಾಲೆಯನ್ನು ಪ್ರಾರಂಭ ಮಾಡಿದೆ ನಾನು ಹಣವನ್ನು ಗಳಿಸಬೇಕೆಂಬ ಉದ್ದೇಶ ಇದ್ದಿದ್ದರೆ ಬೆಂಗಳೂರಿನಲ್ಲಿ ಶಾಲೆಯಲ್ಲಿ ಪ್ರಾರಂಭ ಮಾಡುತ್ತಿದ್ದೆ ಆದರೆ ನನಗೆ ನನ್ನ ಜಿಲ್ಲೆಯ ಮಕ್ಕಳು ಶಿಕ್ಷಣವನ್ನು ಪಡೆಯಬೇಕೆಂಬ ಉದ್ದೇಶದಿಂದ ನನ್ನ ಉರಿನಲ್ಲಿಯೇ ಶಾಲೆಯನ್ನು ಪ್ರಾರಂಭ ಮಾಡಿದೆ ಸೇವಾ ಮನೋಭಾವದಿಂದ ಈ ಕೆಲಸವನ್ನು ಮಾಡುತ್ತಿದ್ದೇನೆ ಹೊರೆತು ಹಣಕ್ಕಾಗಿ ಅಲ್ಲ ಎಂದು ಚಂದ್ರಪ್ಪ ತಿಳಿಸಿದರು.
ನನ್ನ ಶಿಕ್ಷಣ ಸಂಸ್ಥೆ ದಿನದಿಂದ ದಿನಕ್ಕೆ ಪ್ರಗತಿಯನ್ನು ಕಾಣುತ್ತಿದೆ. ದಾವಣಗೆರೆ ವಿವಿಯ ಬಿ.ಕಾಂನಲ್ಲಿ ಪ್ರಥಮ ರ‍್ಯಾಂಕ್‌ನ್ನು ನಮ್ಮ ಶಾಲೆಯ ವಿದ್ಯಾರ್ಥಿ ಪಡೆದಿದ್ದಾರೆ. ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುವುದರ ಮೂಲಕ ೫೦೦೦ ಮಕ್ಕಳು ನಮ್ಮ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಶಿಕ್ಷಕರು ಸೇರಿದಂತೆ ೫೦೦ ರಿಂದ ೬೦೦ ಜನ ಕೆಲಸ ಮಾಡುತ್ತಿದ್ದಾರೆ. ಎಲ್ಲರು ಸಹಾ ಕುಟುಂಬ ರೀತಿಯಲ್ಲಿ ಇದ್ದಾರೆ, ಒಂದೇ ಮನೆಯ ವಾತಾವರಣ ನಮ್ಮಲ್ಲಿ ಇದೆ. ವಿಶ್ವಾಸದಿಂದ ಕೆಲಸವನ್ನು ಮಾಡುತ್ತಿದ್ದಾರೆ. ನಮ್ಮ ಸಂಸ್ಥೆಯಲ್ಲಿ ಕಲಿತ ಹಲವಾರು ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿದ್ದಾರೆ. ೪೦ ವರ್ಷ ಸುಧೀರ್ಘವಾಗಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ನಡೆಸಲಾಗಿದೆ. ಎಲ್ಲಾ ವರ್ಗದವರಿಗೂ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದ್ದೇನೆ ಎಂದರು.
ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಮುಖ್ಯಕಾರ್ಯ ನಿರ್ವಹಣಾಧಿಕಾರಿಗಳಾದ ರಘುಚಂದನ್ ಮಾತನಾಡಿ, ನಮ್ಮ ಶಿಕ್ಷಣ ಸಂಸ್ಥೆಯ ೪೦ನೇ ವರ್ಷದ ಅಂಗವಾಗಿ ಡಿ. ೨೧ ರಿಂದ ೨೪ರವರೆಗೆ ಡೆಸ್ಟಿನಿ-೨೦೨೩ ರೆಂದು ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಡಿ. ೨೧ ರ ಸಂಜೆ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡೆಯೂರಪ್ಪ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಚಿಕ್ಕಮಗಳೂರಿನ ಗೌರಿಗೆದ್ದೆಯ ಅವಧೂತ ಆಶ್ರಮದ ಶ್ರೀ ವಿನಯ ಗೂರೂಜಿ, ಜಿ.ಪಂ. ಸಿಇಓ ಸೋಮಶೇಖರ್, ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಗಳಾದ ಶ್ರೀಮತಿ ಚಂದ್ರಕಲಾ, ಹೆಚ್ಚುವರಿ ಪೋಲಿಸ್ ಅಧಿಕಾರಿಗಳಾದ ಎಸ್.ಜೆ.ಕುಮಾರಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಾರದ ರವಿಶಂಕರ್ ರೆಡ್ಡಿ, ಭಾಗವಹಿಸಲಿದ್ದಾರೆ ಎಂದರು.
ಡಿ. ೨೧ ರಂದು ಹಾಸ್ಯ ಸಾಹಿತಿಗಳಾದ ಸುಧಾ ಬರಗೂರು, ಮಿಮಿಕ್ರಿ ಗೋಪಿ, ಪ್ರಹ್ಲಾದ್ ಜೋಷಿ ಹಾಗೂ ರಾಘವೇಂದ್ರ ಆಚಾರ್ ಭಾಗವಹಿಸಲಿದ್ದಾರೆ. ಡಿ.೨೨ ರಂದು ಸಂಜೆ ೬.೩೦ಕ್ಕೆ ಹೆಸರಾಂತ ಸಂಗೀತ ನಿರ್ದೇಶಕರಾದ ಅರ್ಜುನ್ ಜನ್ನ್‌ರವರಿಂದ ಸಂಗೀತ ಕಾರ್ಯಕ್ರಮ ಡಿ. ೨೩ರಂದು ಚಂದನ್ ಶಟ್ಟಿಯವ ರಿಂದ ಸಂಗೀತ ಕಾರ್ಯಕ್ರಮ, ಡಿ. ೨೪ ರಂದು ಡಿಜೆ ನೈಟ್ ಎಂಬ ಕಾರ್ಯಕ್ರಮ ನಡೆಯಲಿದೆ ಎಂದು ರಘುಚಂದನ್ ತಿಳಿಸಿದರು.

 

 

 

Leave a Reply

Your email address will not be published. Required fields are marked *