ಕಳೆದ ಬಾರಿ ವಯಸ್ಸಿನ ಕಾರಣ ತೋರಿಸಿ ಲೋಕಸಭಾ ಚುನಾವಣೆಗೆ ಟಿಕೆಟ್ ನೀಡಿರಲಿಲ್ಲ,ಆದರೆ ಈ ಬಾರಿ ನಾವು ಕೂಡ ಟಿಕೆಟ್ ಕೊಡುವಂತೆ ಬೇಡಿಕೆ ಇಟ್ಟಿದ್ದೇವೆ, ಕೊಡುವ ಭರವಸೆ ಇದೆ ಎಂದು ಬಿಜೆಪಿ ಯುವ ಮುಖಂಡ ಹಾಗೂ ಹೊಳಲ್ಕೆರೆ ಶಾಸಕ ಡಾ. ಎಂ. ಚಂದ್ರಪ್ಪರ ಪುತ್ರ ಎಂ ಸಿ ರಘುಚಂದನ್ ಹೇಳಿದರು. ಅವರು ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದರು.
ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಅವರಿಗೆ ಬಿಜೆಪಿ ಟಿಕೆಟ್ ನೀಡಿ ಹೊಳಲ್ಕೆರೆ ತಾಲೂಕಿನಲ್ಲಿ 40 ಸಾವಿರ ಮತಗಳ ಲೀಡ್ ಕೊಡುವಂತೆ ವರಿಷ್ಠರು ನಿರ್ದೇಶನ ನೀಡಿದ್ದರು, ಅದರಂತೆ ನಾವು ಕೆಲಸ ಮಾಡಿ ಲೀಡ್ ಕೊಟ್ಟಿದ್ದೆವು. ಇದೀಗ ನಾವು ಟಿಕೆಟ್ ಕೇಳುತ್ತಿದ್ದೇವೆ ಜನರ ಸೇವೆ ಮಾಡಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ. ಬಿಜೆಪಿ ಯಲ್ಲಿ ಯಾವ ರೀತಿ ಟಿಕೆಟ್ ನೀಡಲು ನಿರ್ಧಾರ ಮಾಡುತ್ತಾರೆಂದು ಹೇಳುವುದು ಕಷ್ಟ ಹೈ ಕಮಾಂಡ್ ತೀರ್ಮಾನಿಸುತ್ತದೆ. ಸ್ಥಳೀಯರು ಎನ್ನುವ ವಿಚಾರ ಬಂದಾಗ ಚಿತ್ರದುರ್ಗ ಉಳಿದು ಹೋಗುವವರ ತಾಣ ಆಗಿದೆ. ಹೊರಗಿನವರು ಬರುತ್ತಾರೆ ಹೋಗುತ್ತಾರೆ.ಅವರಿಗೆ ಸ್ಥಳೀಯ ಸಮಸ್ಯೆಗಳ ಅರಿವುರುವುದಿಲ್ಲ. ನಮ್ಮ ಸಂಸದರು ಹಾಗೂ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ. ಅದರಲ್ಲಿ ಎರಡು ಮಾತಿಲ್ಲ, ಆದರೆ ನಾವು ಸ್ಥಳೀಯರಿದ್ದೇವೆ ನಮಗೂ ಒಂದು ಅವಕಾಶ ಕೊಡಿ ಎಂದು ಕೇಳುತ್ತಿದ್ದೇವೆ ಎಂದರು.