ಅಡಿಕೆ ಕಳ್ಳರು ಹಾಗೂ ಕಾರು ಬಾಡಿಗೆ ಪಡೆದು ಮೋಸ ಮಾಡುತ್ತಿದ್ದವನ ಬಂಧನ

ಕ್ರೈಂ ಜಿಲ್ಲಾ ಸುದ್ದಿ

ಅಡಿಕೆ ಕಳ್ಳರು ಹಾಗೂ ಕಾರು ಬಾಡಿಗೆ ಪಡೆದು ಮೋಸ ಮಾಡುತ್ತಿದ್ದವನ ಬಂಧನ

ಚಿತ್ರದುರ್ಗ,ನ02(ಸಂವಾ)-ಬಾಡಿಗೆ ನೀಡುವ ನೆಪದಲ್ಲಿ  ಕಾರುಗಳ ಮಾಲೀಕರನ್ನು ನಂಬಿಸಿ ಮೋಸ ಮಾಡಿದ್ದ ಆರೋಪಿಯನ್ನು ಬಂಧಿಸಿರುವ ಪೋಲಿಸರು ಬಂಧಿತನಿಂದ 70 ಲಕ್ಷ ಮೌಲ್ಯದ  12 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.

 

 

 

ನಗರದ ಕಾವಾಡಿಗರಹಟ್ಟಿಯ ಮಧು ಅಲಿಯಾಸ್ ಇನ್ನೋವ ಮಧು ಎಂದೇ ಹೆಸರಾಗಿರುವ ಈ ವ್ಯಕ್ತಿ ಕಾರುಗಳ ಮಾಲೀಕರಿಂದ ಬಾಡಿಗೆ ಹಾಗೂ ಕಾರಿನ ಕಂತುಗಳನ್ನು ಕಟ್ಟುತ್ತೆನೆ ಕಾರುಗಳನ್ನು ಕಂಪನಿಗೆ ಬಿಡುತ್ತೆನೆ ಎಂದು‌ ನಂಬಿಸಿ  ಲಾಕ್ ಡೌನ್ ಸಮಯದಲ್ಲಿ ತಗೆದುಕೊಂಡು ಹೋದವನು ಕಾರಿನ ಬಾಡಿಗೆ, ಕಮನತಿನ ಹಣ ಹಾಗೂ ಯಾವುದೇ ಹಣವನ್ನು ಕೊಡದೆ   ಮೋಸ ಮಾಡಿ ಮಾಡಿದ್ದ, ಚಿತ್ರದುರ್ಗದ ಕಾರುಗಳನ್ನು ದಾವಣಗೆರೆ ಹಾಗೂ ದಾವಣಗೆರೆ ಕಾರುಗಳನ್ನು ಚಿತ್ರದುರ್ಗದಲ್ಲಿ ಓಡಿಸಿಕೊಂಡು ಮೋಸ ಮಾಡುತ್ತಿದ್ದ, ಇದರ ಬಗ್ಗೆ ಮಾಲೀಕರು ಮಧು ವಿರುದ್ದ ಗ್ರಾಮಾಂತರ ಠಾಣೆಯಲ್ಲಿ ದಾಖಲು ಮಾಡಿಕೊಂಡು  ಮಧುನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.  ಪ್ರತ್ಯೇಕ ಇನ್ನೊಂದು ಪ್ರಕರಣದಲ್ಲಿ  ಕೂಡ ಅಡಿಕೆ ಕಳ್ಳರನ್ನು ಬಂಧಿಸಿ ಅವರಿಂದ 17 ಅಡಿಕೆ ಮೂಟೆಗಳು ಹಾಗೂ ಬುಲೆರೋ ವಾಹನ ಸೇರಿದಂತೆ ಒಟ್ಟು 15 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಅಡಿಕೆ ಕಳ್ಳರು ಭದ್ರಾವತಿ ಮೂಲದವರು ಎಂದು ಗುರುತಿಸಲಾಗಿದ್ದು    ಅವರುಗಳು  ಧನು ಅಲಿಯಾಸ್ ಧನಂಜಯ, ಗುಡ್ಡ ರಾಮ, ಚಿಟ್ಟೆ ಕೃಷ್ಣ, ಅಶೋಕ್ ಮತ್ತು ಕೃಷ್ಣ ಹಾಗೂ ಬುಲೆರೋ ವಾಹನದ ಚಾಲಕ ಒಟ್ಟು 6 ಜನ ಕಳ್ಳರಲ್ಲಿ ಇಬ್ವರು ಮಾತ್ರ ಸಿಕ್ಕಿದ್ದು ಇನ್ನು ನಾಲ್ಕು ಜನರಿಗಾಗಿ ಹುಡುಕಾಟ ನಡೆದಿದೆ.

Chitradurga areca thief and car fraud arrest

ಇವರೆಲ್ಲರೂ ಕೂಡ ಹಗಲು ಸಮಯದಲ್ಲಿ ಬಂದು ಅಡಿಕೆ ವ್ಯಾಪಾರ ಮಾಡುವವರಂತೆ ಬಂದು ಎಲ್ಲವನ್ನು ನೋಡಿಕೊಂಡು  ರಾತ್ರಿ ವೇಳೆಯಲ್ಲಿ ಬಂದು ಅಡಿಕೆ ಕಳುವು ಮಾಡುತ್ತಿದ್ದರು.ಎಂದು ಎಸ್ಪಿ ರಾಧಿಕಾ ತಿಳಿಸಿದ್ದಾರೆ.

Leave a Reply

Your email address will not be published. Required fields are marked *