ಮಕ್ಕಳು ಬುದ್ದ, ಬಸವ, ಅಂಬೇಡ್ಕರ್ ಮೌಲ್ಯಗಳನ್ನ ಅಳವಡಿಸಿಕೊಳ್ಳಬೇಕು

ರಾಜ್ಯ

 

 

 

 

ಬುದ್ಧನ ಮಾನವೀಯತೆ ಬಸವ, ಅಂಬೇಡ್ಕರ್ ರ
ಸಮಾನತೆಯಿಂದಾಗಿ ನಾವು ಇಲ್ಲಿದ್ದೇವೆ ಎಂದು ಸಿ.ಎಸ್.ದ್ವಾರಕನಾಥ್ ಹೇಳಿದರು.ಚಿತ್ರದುರ್ಗ
ನಗರದ ಹೊರ ವಲಯದಲ್ಲಿರುವ ಭೋವಿ ಗುರುಪೀಠದಲ್ಲಿ ಹಮ್ಮಿಕೊಂಡಿದ್ದ ಎಸ್.ಜೆ.ಎಸ್ ಜ್ಞಾನ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮೊಟ್ಟ ಮೊದಲಿಗೆ ಸಮಾನತೆ, ಸಹೋದರತೆ, ಸಹಭಾಳ್ವೆಯ ದಾಖಲೆಗಳನ್ನ ಮ್ಯಾಗ್ನಾಕಾಟ್‍ನಿಂದ ನೋಡುತ್ತೇವೆ. ಅದಕ್ಕಿಂತ ಮುಂಚೆಯೇ ಬಸವಾದಿ ಶರಣರು ನಮ್ಮಲ್ಲಿ ಪ್ರತಿಪಾದಿಸಿದ್ದಾರೆ. ಅದನ್ನು ಯಾರು ಮರೆಯಲಿಕ್ಕೆ ಆಗುವುದಿಲ್ಲ. ಈ ರೀತಿ ಸಾಮಾಜಿಕ ನ್ಯಾಯದ ಬಗ್ಗೆ ಮೊಟ್ಟ ಮೊದಲು ಧ್ವನಿ ಎತ್ತಿದ ಬಸವಾದಿ ಶರಣರ ಆದಿಯಲ್ಲಿ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ನಡೆಯುತ್ತಿದ್ದಾರೆ ಹಾಗಾಗಿ ಬಹಳ ಸಂತೋಷ ಎಂದು ತಿಳಿಸಿದರು.
ಸ್ವಾತಂತ್ರ್ಯ ಬಂದ ನಂತರ ಸಿಕ್ಕಿದ್ದು ಸಂವಿಧಾನ, ನಮ್ಮ ಸಂವಿಧಾನಕ್ಕೂ ಬಸವಣ್ಣನವರ ವಚನಗಳಿಗೂ ಯಾವುದೆ ವ್ಯತ್ಯಾಸವಿಲ್ಲ, ನಾನು ಅನೇಕ ಸಲ ಹೇಳುತ್ತಿರುತ್ತೇನೆ, ಸಂವಿಧಾನದ ಪ್ರತಿ ಅನುಚ್ಛೇದಕ್ಕೂ ಬಸವಾದಿ ಶರಣರ ಅನೇಕ ವಚನಗಳನ್ನು ಅಡಿ ಟಿಪ್ಪಣಿಗಳಾಗಿ ಕೊಡಬಹುದು. ನಾವೆಲ್ಲ ಇಂದು ಇಲ್ಲಿ ಕುಳಿತಿದ್ದೇವೆ ಎಂದರೆ ಸಂವಿಧಾನ ಕೊಟ್ಟ ರಕ್ಷಣೆ, ನೀವು ಓದುತ್ತಿದ್ದೀರಿ ಎಂದರೆ ಸಂವಿಧಾನದ ಕೊಡುಗೆ. ನೀವು ಒಳ್ಳೆಯ ಪ್ರಜೆಗಳಾಗಬೇಕು, ಮೌಲ್ಯಗಳನ್ನ ಅಳವಡಿಸಿಕೊಳ್ಳಬೇಕು, ಬುದ್ದ, ಬಸವ, ಅಂಬೇಡ್ಕರ್ ಮೌಲ್ಯಗಳನ್ನ ಅಳವಡಿಸಿಕೊಳ್ಳಬೇಕು ಹಾಗ ಉತ್ತಮ ಪ್ರಜೆಗಳಾಗುತ್ತೀರ ಎಂದು ಹೇಳಿದರು.
ಬಸವ ಪರಂಪರೆಯಲ್ಲಿ ಅನ್ನದಾಸೋಹ, ಅಕ್ಷರ ದಾಸೋಹ ಬಂದಿದೆ. ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರು ಅದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಈ ರೀತಿಯ ಪುಣ್ಯ ನಿಮಗೆ ಸಿಕ್ಕಿದೆ. ನಾನು ಕೋಲಾರ ಜಿಲ್ಲೆಯಿಂದ ಬಂದವನು, ಮಠ ಪರಂಪರೆ ಇರಲಿಲ್ಲ, ಎಲ್ಲೋ ಸೇರಿದಿವಿ, ಎಲ್ಲೋ ಓದಿದಿವಿ, ಇಲ್ಲಿಗೆ ಬಂದ ಮೇಲೆ ಅರ್ಥವಾಗಿದ್ದು ಬಸವಾದಿ ಶರಣರು ಹೇಗೆ ಇದ್ದರು, ಎಂತಹ ಕಷ್ಟಪಟ್ಟರು, ಸಾಮಾಜಿಕ ನ್ಯಾಯ ಉಳಿಸಿಕೊಳ್ಳಲಿಕ್ಕೆ ಎಂಬುವುದನ್ನು ಓದಿ, ತಿಳಿಯಲು ಆರಂಭವಾಯಿತು. ನಾನು ಇಲ್ಲಿ ನಿಂತು ಮಾತನ್ನಾಡುತ್ತಿದ್ದೇನೆ ಎಂದರೆ ಬುದ್ಧ, ಬಸವ, ಅಂಬೇಡ್ಕರ್ ಅದರಲ್ಲೂ ಅಂಬೇಡ್ಕರ್ ಕೊಟ್ಟ ಸಂವಿಧಾನ ಅಂತಾ ಹೇಳುತ್ತೇನೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಭೋವಿ ನಿಗಮದ ಮಾಜಿ ಅಧ್ಯಕ್ಷ ಸೀತಾರಾಮು, ಭೋವಿ ಗುರುಪೀಠದ ಸಿ.ಇ.ಓ ಗೌನಹಳ್ಳಿ ಗೋವಿಂದಪ್ಪ, ಎಸ್.ಜೆ.ಎಸ್ ಸಂಸ್ಥೆಯ ಕಾರ್ಯದರ್ಶಿ ಡಿ.ಸಿ.ಮೋಹನ್, ನಿರ್ದೇಶಕರಾದ ನೇರಲಗುಂಟೆ ರಾಮಪ್ಪ, ಕಾಳಘಟ್ಟ ಹನುಮಂತಪ್ಪ, ಕೆ.ರುದ್ರಪ್ಪ, ತಿಪ್ಪೇಸ್ವಾಮಿ, ಕೃಷ್ಣಮೂರ್ತಿ, ಆಂಜನೇಯ, ಜಿಲ್ಲಾ ಭೋವಿ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *