ವಿಮೆ ಮೊತ್ತ ಬಿಡುಗಡೆ ಮಾಡಲು ಸೂಕ್ತ ನಿರ್ದೇಶನ ನೀಡುವಂತೆ ಸಿಎಂ ಗೆ ಶ್ರೀರಾಮುಲು ಪತ್ರ

ಜಿಲ್ಲಾ ಸುದ್ದಿ

  1. ಚಿತ್ರದುರ್ಗ,- ಜಿಲ್ಲೆಯಲ್ಲಿ ಮಳೆಯ ಅತೀವೃಷ್ಟಿಯಿಂದಾಗಿ ರೈತರು ನಷ್ಟ ಅನುಭವಿಸಿದ್ದಾರೆ. ಕಳೆದ ಸಾಲಿನಲ್ಲಿ ಬೆಳೆ ವಿಮೆ ನೊಂದಣಿ‌ ಮಾಡಿಸಿದ್ದು ರೈತರಿಗೆ ವಿಮೆ ಹಣ ಬಂದಿಲ್ಲ ಆದ್ದರಿಂದ ವಿಮೆಯ ಕೆಲ ಮಾನದಂಡಗಳನ್ನು ಬದಲಾಯಿಸಿ ಜಿಲ್ಲೆಯ ರೈತರಿಗೆ ಅನುಕೂಲ‌ ಮಾಡಿಕೊಡುವಂತೆ ಸಮಾಜಕಲ್ಯಾಣ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಸಿಎಂ ಯಡಿಯೂರಪ್ಪ ಹಾಗೂ ಕೃಷಿ ಸಚಿವ ಬಿಸಿ ಪಾಟೀಲ್
    ಅವರಿಗೆ ಪತ್ರ ಬರೆದಿದ್ದಾರೆ.
    1. Chitradurga Sriramulu wrote a letter to cm and BC patilChitradurga Sriramulu wrote a letter to cm and BC patilಚಿತ್ರದುರ್ಗ ಜಿಲ್ಲೆ ಕಳೆದ 10 ವರ್ಷಗಳಲ್ಲಿ ಸುಮಾರು 8 ಬಾರಿ ಬರಗಾಲಕ್ಕೆ ತುತ್ತಾಗಿದೆ. ಮಳೆ ಬಂದರೆ ಬೆಳೆ ಎಂಬಂತರ ಜಿಲ್ಲೆಯ ರೈತರು ಬದುಕುತ್ತಿದ್ದಾರೆ. 20-21 ಸಾಲನ್ನು ಅತಿ ವೃಷ್ಠಿ ಸಾಲು ಎಂದು ಘೋಷಿಸಲಾಗಿದೆ.ಕಳೆದ ಹತ್ತು ವರ್ಷಗಳಿಂದ ರೈತ ಬೆಳೆ ಸಿಗದೆ ಕಂಗಾಲಾಗಿದ್ದಾನೆ. 20-21 ಸಾಲಿನಲ್ಲಿ 85,912 ಜನ ರೈತರು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜಯಲ್ಲಿ‌ ನೋಂದಣಿ‌ಮಾಡಿಸಿಕೊಂಡಿದ್ದಾರೆ. ಆದರೆ ವಿಮಾ ಮೊತ್ತವೂ ಜಮೆಯಾಗಿಲ್ಲ.ಮುಂಗಾರು ಹಂಗಾಮಿನ ಬೆಳೆ ವಿಮೆ ಪಾವತಿಗೆ 188 ಪಂಚಾಯಿತಿಗಳಲ್ಲಿ 36 ಪಂಚಾಯಿತಿಗಳು ಮಾತ್ರ ವಿಮೆ ಪಾವತಿಗೆ ಆಯ್ಕೆ ಯಾಗಿವೆ.ಅದರಲ್ಲೂ 0.5 ಶೇಕಡ ವಿಮೆ ಮೊತ್ತ ನೀಡಲು ಅನುಮೋದನೆ ದೊರೆತಿರುತ್ತದೆ.ಆದ್ದರಿಂದ ಕೆಲವು ಮಾನದಂಡಗಳನ್ನು ಬದಲಿಸಿ ಚಿತ್ರದುರ್ಗ ಜಿಲ್ಲೆಯ ರೈತರಿಗೆ ಬೆಳೆಯಿಂದ ಆಗಿರುವ ನಷ್ಟಕ್ಕೆ ವಿಮೆಯನ್ನು ಜಮಾ ಮಾಡಲು ವಿಮಾ ಕಂಪನಿಯವರಿಗೆ ಸೂಕ್ತ ನಿರ್ದೇಶನ‌ ನೀಡುವಂತೆ ಪತ್ರದ ಮೂಲಕ ಸಮಾಜ ಕಲ್ಯಾಣ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಶ್ರೀರಾಮುಲು‌ ಮಾಡಿದ್ದಾರೆ.

      ಸಂಯುಕ್ತವಾಣಿ

    2. ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ
    3. 8660924503

 

 

 

Leave a Reply

Your email address will not be published. Required fields are marked *