12 ವರ್ಷಗಳ ನಂತರ ತುಂಬಿದ ನಾಯಕನಟ್ಟಿ ದೊಡ್ಡ ಕೆರೆ

ಜಿಲ್ಲಾ ಸುದ್ದಿ

12 ವರ್ಷಗಳ ನಂತರ ತುಂಬಿದ ನಾಯಕನಟ್ಟಿ ದೊಡ್ಡ ಕೆರೆ

 

 

 

ಚಳ್ಳಕೆರೆ ತಾಲೂಕಿನ ನಾಹಕನಹಟ್ಟಿ ಕೆರೆಯೂ 12 ವರ್ಷಗಳ ಬಳಿಕ ತುಂಬಿ ಹರಿಯುತ್ತಿದ್ದು, ಯಾರೂ ಕೂಡ ಕೆರೆಯಲ್ಲಿ ಇಳಿಯಬಾರದು, ಮಕ್ಕಳನ್ನು ಈಜಲು ಬಿಡಬಾರದು ಎಂದು ತಹಶೀಲ್ದಾರ್ ಎನ್. ರಘು ಮೂರ್ತಿ ಎಚ್ಚರಿಕೆ ನೀಡಿದ್ದಾರೆ.
ಪಟ್ಟಣದ ಸಾರ್ವಜನಿಕರ ಜೀವ ಜಲವಾದ ದೊಡ್ಡ ಕೆರೆ ಸಂಪೂರ್ಣ ತುಂಬಿ ಕೊಡಿ ಬಿದ್ದಿದ್ದು ಸಾರ್ವಜನಿಕರು ಈ ಕೆರೆಯ ಅಸು ಪಾಸು ಮಕ್ಕಳು ಮತ್ತು ಮಹಿಳೆಯರನ್ನು ಬಟ್ಟೆ ತೊಳೆಯಲು ಮತ್ತು ಸ್ನಾನ ಮಾಡಲು ಬಿಡಕೂಡದೆಂದು ಅವರು ಮನವಿ ಮಾಡಿದರು. ನಾಯಕನಟಿ ಪಟ್ಟಣದ ಈ ಕೆರೆಯು ತುಂಬಿದ ಹಿನ್ನೆಲೆಯಲ್ಲಿ ಈ ಕೆರೆಯಿಂದಲೇ ಸಾರ್ವಜನಿಕರಿಗೆ ಕುಡಿಯುವ ನೀರು ಉಣಿಸ ಬೇಕಾಗಿರುವುದರಿಂದ ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಹಾಗೂ ಪಟ್ಟಣ ಅಧ್ಯಕ್ಷರು ಗಳೊಂದಿಗೆ ಕೆರೆಗೆ ಭೇಟಿ ನೀಡಿ 12 ವರ್ಷದ ತರುವಾಯ ಈ ಕೆರೆ ತುಂಬಿದೆ ಇನ್ನೂ ಮಾನ್ಸೂನ್ ನಂತರದ ಮಳೆಗಳು ಉತ್ತಮವಾಗಿ ಬೀಳುವ ನಿರೀಕ್ಷೆಯಿದ್ದು ಸಾರ್ವಜನಿಕರು ಅತ್ಯಂತ ಜೋಪಾನವಾಗಿರಬೇಕು ಮತ್ತು ಜಾಗ್ರತೆಯಿಂದ ಇರಬೇಕು ಪಟ್ಟಣದ ಜೀವ ಜಲ ಆಗಿರುವುದರಿಂದ ನೀರಿನ ಬಳಕೆ ಬಗ್ಗೆ ಮಹತ್ವ ವಹಿಸಬೇಕು ಕೆರೆಯನ್ನು ನೋಡ ಬರುವಂತಹ ಸಾರ್ವಜನಿಕರು ವೃತಾ ನೀರೊಳಗಿಳಿಯಕೂಡದು ಅದರಲ್ಲೂ ಮಹಿಳೆಯರು ಮತ್ತು ಮಕ್ಕಳು ಅತ್ಯಂತ ಕಾಳಜಿ ವಹಿಸಬೇಕೆಂದು ಮನವಿ ಮಾಡಿದರು ಇದೇ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಪಟ್ಟಣ ಪಂಚಾಯಿತಿ ಮುಖಂಡರಾದಂತ ಬೋರುಸ್ವಾಮಿ ಬಸಣ್ಣ ಮುದಿಯಪ್ಪ ಕುದಾಪುರ ಪ್ರಕಾಶ್ ಎನ್ ದೇವರಲ್ಲಿ ಪಂಚಾಯಿತಿ ಅಧ್ಯಕ್ಷ ಡಾಕ್ಟರ್ ಕಾಟಂ ಲಿಂಗಯ್ಯ ಮತ್ತಿತರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *