ನಾಲ್ಕು ದಿಗಳೊಳಗೆ ಒತ್ತುವರಿ ತೆರವು ಮಾಡಿ: ತಹಶೀಲ್ದಾರ್ ರಘುಮೂರ್ತಿ ಎಚ್ಚರಿಕೆ

ಜಿಲ್ಲಾ ಸುದ್ದಿ

ಚಳ್ಳಕೆರೆ ತಾಲೂಕಿನಲ್ಲಿ ಸ್ಮಶಾನಕ್ಕೆ ಮೀಸಲಿರುವ ಸರ್ಕಾರಿ ಭೂಮಿಯನ್ನು ಅಳತೆ ಮಾಡಿ ನಿರ್ದಿಷ್ಟವಾಗಿ ನಾಲ್ಕು ದಿನಗಳೊಳಗೆ ಒತ್ತುವರಿ ತೆರವು ಮಾಡುವಂತೆ ತಹಶೀಲ್ದಾರ್ ಎನ್ ರಘುಮೂರ್ತಿ ಕಂದಾಯ ಇಲಾಖೆ ಸಿಬ್ಬಂದಿಗಳಿಗೆ ವೇಳಾಪಟ್ಟಿ ನಿಗದಿ ಮಾಡಿ ಆದೇಶ ಮಾಡಿದ್ದಾರೆ. ಚಳ್ಳಕೆರೆ ತಾಲೂಕಿನ ಪರಶುರಾಮಪುರ ಹೋಬಳಿ, ಕಸಬಾ ಹೋಬಳಿ, ನಾಯಕನಹಟ್ಟಿ ಹೋಬಳಿ ಮತ್ತು ತುಳುಕು ಹೋಬಳಿಗಳಲ್ಲಿ ಎರಡೆರಡು ದಿನ ಕಾಲಮಿತಿ ನಿಗಧಿ ಮಾಡಿದ್ದು ಈ ದಿನಗಳಲ್ಲಿ ಸರ್ಕಾರಿ ಉದ್ದೇಶಕ್ಕೆ ಮೀಸಲಾದ ಸರ್ಕಾರಿ ಜಮೀನಾದ ಸ್ಮಶಾನ ಮತ್ತು ಆಶ್ರಯಕ್ಕೆ ಕಂದಾಯ ಇಲಾಖೆಯಿಂದ ಈಗಾಗಲೇ ನಿಗಧಿ ಮಾಡಿ ಸಂಬಂಧಿಸಿದ ಪಾಣಿಯಲ್ಲಿಯೂ ಕೂಡ ಗ್ರಾಮ ಪಂಚಾಯತಿಯ ಹೆಸರಿಗೆ ನಮೂದು ಮಾಡಲಾಗಿದೆ. ಹೀಗೆ ಪಹಣಿಯಲ್ಲಿ ನಮೂದಾದ ಜಮೀನು ಕೂಡ ಗ್ರಾಮ ಪಂಚಾಯಿತಿಯವರ ನಿರ್ಲಕ್ಷದಿಂದ ಒತ್ತುವರಿಯಾಗಿದ್ದು, ಒತ್ತುರಿಯಾಗಿರುವ ಸರ್ಕಾರಿ ಜಮೀನನ್ನು ಒಂದು ವಾರ ಕಾಲ ಮಿತಿ ನಿಗದಿ ಮಾಡಿದ್ದು ಪ್ರತಿ ಪಂಚಾಯತಿಯಲ್ಲಿ ಆಯಾ ಗ್ರಾಮಗಳ ಸ್ಮಶಾನ ಮತ್ತು ಆಶ್ರಯದ ಸರ್ಕಾರಿ ಜಮೀನು ಒತ್ತುವರಿಯ ಬಗ್ಗೆ ಪಾಲಕ್ ಸರ್ವೇ ರವರು ಗುರುತಿಸಿ ತಕ್ಷಣ ಒತ್ತುವರಿದಾರರನ್ನು ಹೊರದೂಡಿ ಸರ್ಕಾರದ ವಶಕ್ಕೆ ಪಡೆಯುವಂತೆ ಕಂದಾಯ ಇಲಾಖೆ ಸಿಬ್ಬಂದಿಗೆ ಆದೇಶ ನೀಡಿದ್ದಾರೆ .ಅದರಂತೆ ಇಂದಿನಿಂದ ಈ ಕಾರ್ಯ ಪ್ರಾರಂಭವಾಗಲಿದ್ದು ಅಧಿಕೃತ ಒತ್ತುವರಿದಾರರಿಗೆ ತಲೆ ನೋವಾಗಿದೆ ಯಾವುದೇ ಕಾರಣಕ್ಕೂ ಅನಧಿಕೃತ ಒತ್ತುವರಿಯನ್ನು ತೆರವು ಮಾಡದೆ ಬಿಡಕೂಡದು ಒತ್ತುವರಿಯನ್ನು ನಿರ್ಬಂಧಿಸುವವರ ವಿರುದ್ಧ ಭೂ ಕಂದಾಯ ಕಾಯ್ದೆಯ ನಿಯಮ 192a ರೆಡಿ ಪ್ರಕರಣವನ್ನು ದಾಖಲಿಸುವಂತೆ ಎಚ್ಚರಿಕೆ ನೀಡಿದ್ದಾರೆ.

 

 

 

Leave a Reply

Your email address will not be published. Required fields are marked *