ನಂಜಾವಧೂತ ಸ್ವಾಮೀಜಿ ಮುಂದೆ ಸಿಎಂ ಆಸೆ ಬಿಚ್ಚಿಟ್ಟ ಡಿಕೆಶಿ

ರಾಜ್ಯ

ಇಬ್ಬರು ಸ್ವಾಮಿಗಳಿಗೆ ಮನೆಗೆ ಬರುವ ಲಕ್ಷ್ಮೀ ಕರ್ಕೊಂಡು ಹೋಗಿ ಎಂದು ಹೇಳಿದ್ದೇನೆ – ಡಿಕೆಶಿ

ಚಿತ್ರದುರ್ಗ : ಮನೆಗೆ ಬರುವ ಲಕ್ಷ್ಮೀಯನ್ನು ಕರ್ಕೊಂಡು ಹೋಗಿ ಎಂದು ನಂಜಾವಧೂತ ಸ್ವಾಮಿ ಹಾಗೂ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿಗೆ ಹೇಳಿದ್ದೇನೆ ಎಂದು ಹೆಚ್.ಡಿ. ಕುಮಾರಸ್ವಾಮಿ ಮುಂದೆಯೇ ಸಿಎಂ ಆಗುವ ಆಸೆಯನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತು ಬಿಚ್ಚಿಟ್ಟಿದ್ದಾರೆ.

ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ನೆಹರೂ ಮೈದಾನದಲ್ಲಿ ತಾಲ್ಲೂಕು ಒಕ್ಕಲಿಗರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ನಾಡ ಪ್ರಭು ಕೆಂಪೇಗೌಡ ಜಯಂತೋತ್ಸವ ಮತ್ತು ತಾಲೂಕು ಒಕ್ಕಲಿಗರ ಜಾಗೃತಿ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

 

 

 

ಸಹೋದರ ಹೆಚ್.ಡಿ. ಕುಮಾರಸ್ವಾಮಿ ಅವರೇ ಎಂದು ಮಾತು ಪ್ರಾರಂಭಿಸಿದ ಅವರು ನಾನು ಸಮಾರಂಭಕ್ಕೆ ಜೈಕಾರ, ಡಿಕೆ, ಶಿಳ್ಳೆಗೆ ಬಂದಿಲ್ಲ. ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮಕ್ಕೆ ಬಂದಿದ್ದೇನೆ ಎಂದರು.
ಇಂದು ಹಿರಿಯೂರು ನಗರದಲ್ಲಿ ನಡೆಯುತ್ತಿರುವ ಈ ಜಯಂತಿ ರಾಜ್ಯಕ್ಕೆ ಮಾದರಿಯಾಗಲಿದೆ.
ಒಕ್ಕಲಿಗರ ಜಾತಿ ರೈತರ ಜಾತಿಯಾಗಿದೆ. ಇಡೀ ವಿಶ್ವದಲ್ಲಿ ನಮ್ಮ ಸಮುದಾಯ ಇದೆ ಎಂದು ಡಿಕೆ ಶಿವಕುಮಾರ್ ಹೇಳಿದರು.ಕೆಂಪೇಗೌಡರು ಬೆಂಗಳೂರು ನಾಡನ್ನು ಕೊಟ್ಟಿದ್ದಾರೆ. ಇಂತಹ ಇತಿಹಾಸ ಹೊಂದಿರುವ ಪುರುಷರನ್ನು ಬಿಜೆಪಿ ಸರ್ಕಾರ ಇತಿಹಾಸವನ್ನು ತಿದ್ದಲು ಪ್ರಯತ್ನ ಮಾಡಿದರು.ಯಾರು ಇತಿಹಾಸ ತಿದ್ದಲು ಸಾಧ್ಯವಿಲ್ಲ ಎಂದರು.

ಶಿಕ್ಷಿಕ, ಶೈನಿಕ, ಕೃಷಿಕ, ಕಾರ್ಮಿಕ ಇಲ್ಲಾಂದ್ರೆ ಸಮಾಜ ಇಲ್ಲ, ಕೆಂಪೇಗೌಡರು ಸರ್ವಜನಾಂಗದ ನಾಯಕ ಒಕ್ಕಲಿಗರಿಗೆ ಮಾತ್ರ ಕರೆದು ಸಭೆ ಮಾಡಬೇಡಿ, ಕಾರ್ಯಕ್ರಮದ ಆಯೋಜಕರಿಗೆ ಎಲ್ಲ ಸಮಾಜದ ನಾಯಕರು ವೇದಿಕೆಯಲ್ಲಿ ಇರಬೇಕು ಎಂದು ತಿಳಿಸಿದರು.ಯಾರು ಅರ್ಜಿ ಹಾಕಿಕೊಂಡು ಹುಟ್ಟಿಲ್ಲ, ಸುಖದುಃಖ ಎರಡರಿಂದ ಕಣ್ಣೀರು ಹಾಕುತ್ತವೆ

ಕುವೆಂಪು ಅವರ ವಿಶ್ವಮಾನದ ತತ್ವ, ಅದಕ್ಕೆ ಸರ್ಕಾರ ಕೈಯಾಕಿದೆ. ಅಸೆಂಬ್ಲಿ ಚುನಾವಣೆ ಬರಲಿ ನಾನು ಕುಮಾರಸ್ವಾಮಿ ನಿಂತ್ಕೊಂಡು ಹೋರಾಟ ಮಾಡ್ತೀವಿ ಎಂದರು.ಯಾರನ್ನು ಅಗೌರವದಿಂದ ಕಾಣಬಾರದು. ಎಲ್ಲರನ್ನೂ ಸಮಾನವಾಗಿ ಕಾಣುವುದು ಕೆಂಪೇಗೌಡರ ಮೂಲ ತತ್ವವಾಗಿದೆ. ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ, ಅರ್ಥವಿಲ್ಲದೇ ಬದುಕಿದರೆ ಜೀವನಕ್ಕೆ ಅವಮಾನ ಎಂದರು.ಇನ್ನು ಪಾವಗಡದಲ್ಲಿ 15 ಸಾವಿರ ಎಕರೆಯಲ್ಲಿ ಸೋಲಾರ್ ಪಾರ್ಕ್ ನಿರ್ಮಾಣ ಮಾಡಲಾಗಿದೆ.ರೈತರಿಗೆ ಏಳು ಗಂಟೆಗಳ ಕಾಲ ವಿದ್ಯುತ್ ಕೊಡಲಾಗಿದೆ.ಇದು ನನ್ನ ದೊಡ್ಡ ಸಾಧನೆ ಅಲ್ಲ, ನನ್ನ ಸಣ್ಣ ಸೇವೆಯ ಪ್ರಯತ್ನ

ಒಕ್ಕಲಿಗರ ಕೆಲಸಕ್ಕೆ ಒಕ್ಕಲಿಗ ಎಂದು ಹೆಸರು ಇಡಲಾಗಿದೆ. ನಾನು ಇಬ್ಬರು ಶ್ರೀಗಳಿಗೆ ತಿಳಿಸಲಾಗಿದೆ. ಒಂದೊಳ್ಳೆ ಅವಕಾಶ ಒದಗಿ ಬಂದಿದೆ.ಮನೆಗೆ ಬರುವ ಲಕ್ಷ್ಮೀ ಕರ್ಕೊಂಡು ಹೋಗಿ ಅಂತ ಹೇಳಿನಿ. ಶ್ರೀಗಳು ಕರ್ಕೊಂಡು ಹೋಗಲಿ, ಇಲ್ಲ ವಾಪಸ್ ಕಳಿಸಲಿ ಎಂದು ಪರೋಕ್ಷವಾಗಿ ಸಿಎಂ ಆಗುವ ಆಸೆಯನ್ನು ಡಿಕೆಶಿ ಬಿಚ್ಚಿಟ್ಟರು. ಡಿಕೆಶಿ ನಿಮ್ಮ ಮಗ, ಕಷ್ಟಕಾಲದಲ್ಲಿ ನಿಂತ್ಕೊಂಡಿದ್ರಿ, ಮುಂದೆ ನಿಕತ್ಕೋಳ್ಳುವ ಭರವಸೆ ಇದೆ ಎಂದರು. ವೇದಿಕೆಯಲ್ಲಿ ನಂಜಾವಧೂತ ಸ್ವಾಮಿ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಸಚಿವ ಟಿಬಿ ಜಯಚಂದ್ರ, ಶಾಸಕ ಬಾಲಕೃಷ್ಣ, ನಿರ್ಮಾಪಕ ಉಮಾಪತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *